ನಾಗತಿಹಳ್ಳಿಯ ಹದಿಮೂರನೇ ಅಪರಾಧ ಬ್ರೇಕಿಂಗ್ ನ್ಯೂಸ್
ಕನ್ನಡ ಚಿತ್ರಗಳ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹದಿಮೂರನೇ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಅದ್ಯಾವುದಪ್ಪಾ ಅವರ ಕ್ರೈಂ ಎಂದರೆ, ಅವರೇ ಹೇಳುವಂತೆ ಅವರ ಹೊಚ್ಚ ಹೊಸ ಚಿತ್ರ 'ಬ್ರೇಕಿಂಗ್ ನ್ಯೂಸ್'. ಇದೇ ಅವರ ಹದಿಮೂರನೇ ಅಪರಾಧ.
ನಾಗತಿಹಳ್ಳಿ ಅವರು ತಮ್ಮದೇ ಬ್ಯಾನರಿನಲ್ಲಿ ನಿರ್ಮಿಸುತ್ತಿರುವ ಚಿತ್ರವಿದು. ಅವರು ಹೊಸದಾಗಿ ನಿರ್ಮಿಸುತ್ತಿರುವ ಲಿರಿಕ್ಸ್ ಕಟ್ಟಡದಲ್ಲೇ ಚಿತ್ರದ ಮುಹೂರ್ತ ನೆರವೇರಿದೆ. ಹಾಸ್ಯ ಪ್ರಧಾನ ಕತೆಯನ್ನು ಪ್ರೇಮದ ಚೌಕಟ್ಟಿನಲ್ಲಿ ಹೇಳುವ ಪ್ರಯತ್ನವನ್ನು ಮಾಡಿರುವುದಾಗಿ ನಾಗತಿಹಳ್ಳಿ ಅವರು ತಿಳಿಸಿದ್ದಾರೆ.
ಪತ್ರಿಕೋದ್ಯಮ ಹಾಗೂ ರೇಡಿಯೋ ಮಾಧ್ಯಮದ ಕಥಾಹಂದರವೇ ಚಿತ್ರದ ಹೈಲೈಟ್. ಚಿತ್ರದಲ್ಲಿ ಆದರ್ಶ ಪತ್ರಕರ್ತನಾಗಿ ಅಜಯರಾವ್ ಕಾಣಿಸಲಿದ್ದಾರೆ. ರಾಧಿಕಾ ಪಂಡಿತ್ ಅವರದು ಜಂಬದ ಹುಡುಗಿ ಪಾತ್ರ. ಅನಂತನಾಗ್, ರಂಗಾಯಣ ರಘು ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಸದ್ಯಕ್ಕೆ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Kannada films senior director Nagathihalli Chandrashekhar decribes that his latest film Breaking News is his 13th crime. At present the second schedule of the film has commenced. Ajay Rao and Radhika Pandit are paired in the film with Anantha Nag, Rangayana Raghu.


Click it and Unblock the Notifications











