ಬೀದೀಲಿ ಹೋಗೋ ’ಮಾರಿ’ಯಾ ಬಿಗ್ ಬಾಸ್ ಮನೆ ಬೇಡ್ವಂತೆ

ಮೈಸೂರು ಮೂಲದ ಕನ್ನಡ ನಟಿ ಮಾರಿಯಾ ಬಿಗ್ ಬಾಸ್ ಪ್ರವೇಶ ಪಡೆದಿದ್ದರೆ, ಕೋಟಿಗಟ್ಟಲೆ ಸಂಭಾವನೆ ಸಿಗುತ್ತಿತ್ತು. ಆದರೆ, ಮಾರಿಯಾ ಪ್ರವೇಶ ನಿರಾಕರಣೆಗೆ ಕಲರ್ಸ್ ಸ್ಪಷ್ಟ ಕಾರಣ ನೀಡಿಲ್ಲ. ಈ ಮುಂಚೆ ಕೂಡಾ ಬಿಗ್ ಬಾಸ್ ನಲ್ಲಿ ಅಪರಾಧ ಹಿನ್ನೆಲೆ ಉಳ್ಳವರು ಭಾಗವಹಿಸಿದ್ದ ಉದಾಹರಣೆಗಳಿವೆ.
ನಕಲಿ ಪಾಸ್‌ಪೋರ್ಟ್ ಹೊಂದಿದ್ದಕ್ಕೆ, ಭೂಗತ ಜಗತ್ತಿನ ಸಂಪರ್ಕ ಹಿನ್ನೆಲೆಯಲ್ಲಿ ಬಂಧಿತಳಾಗಿದ್ದ ಮೋನಿಕಾ ಬೇಡಿ, ಅಮಲು ಪದಾರ್ಥ ಹೊಂದಿದ್ದಕ್ಕೆ ಜೈಲು ಸೇರಿದ್ದ ರಾಹುಲ್ ಮಹಾಜನ್, ಮಾಜಿ ಕ್ರಿಮಿನಲ್ ರಾಜಾ ಚೌಧರಿ ಮತ್ತಿತರು ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದರು.
ಬಾಲಿವುಡ್ ಕಾಲಿಂಗ್:ಜೂಟ್ ನಟಿ ಮಾರಿಯಾ ಹತ್ತಿರ ಬಾಲಿವುಡ್ ನಲ್ಲಿ ಅವಕಾಶದ ಮಹಾಪೂರವೆ ಹರಿಯುವ ಸಾಧ್ಯತೆಯಿದೆ. ಮಾರಿಯಾಳನ್ನು ಹಾಕಿಕೊಂಡು ಚಿತ್ರ ನಿರ್ಮಿಸುವುದಾಗಿ ಖ್ಯಾತ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.ಟ್ವಿಟರ್‌ನಲ್ಲಿ ಈ ವಿಷಯವನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನೂ ಹಲವಾರು ಚಿತ್ರ ನಿರ್ಮಾಪಕರು ಮಾರಿಯಾಳನ್ನು ಸಂಪರ್ಕಿಸಿ, ತಮ್ಮ ಚಿತ್ರದಲ್ಲಿ ನಟಿಸಲು ಕೇಳಿಕೊಳ್ಳುವ ಸಾಧ್ಯತೆ ಇದೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.
ಆದರೆ, ಸಿನಿಮಾ ಅಥವಾ ಕಿರುತೆರೆಯಲ್ಲಿ ಮುಂದೆ ನಟೀಸುತ್ತೀರಾ ಎಂದು ಪ್ರಶ್ನಿಸಿದರೆ ಮಾರಿಯಾ ಉತ್ತರ ನೀಡದೆ 'ನಾನು ಇನ್ನೋಸೆಂಟ್' ಎಂದು ದೇವರತ್ತ ಮುಖ ಮಾಡುತ್ತಿದ್ದಾರೆ. ಈ ಮಧ್ಯೆ ಮುಂಬೈ ನಲ್ಲಿ ಮಾರಿಯಾ ವಿರುದ್ಧ ಪ್ರತಿಭಟನಾ ಮೆರವಣಿಗೆ ಸಹಾ ನಡೆದಿದೆ. ಕ್ರಿಮಿನಲ್ ಆದರೂ, ಬಿಗ್ ಬಾಸ್ ನಲ್ಲಿ ಅವಕಾಶ ನೀಡುವುದರಲ್ಲಿ ತಪ್ಪೇನಿದೆ. ಉತ್ತರ ಭಾರತೀಯರಿಗೆ ಅವಕಾಶ ನೀಡಬಹುದಾದರೆ, ಮೈಸೂರಿನ ಮಾರಿಯಾಗೆ ಏಕಿಲ್ಲ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಕಲಾವಿದ ಕೆಟ್ಟರಾದರೂ ಕಲೆಗೆ ಯಾವ ಕೆಟ್ಟತನವಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ನೀವೇನಂತೀರಾ? ನಮಗೆ ತಿಳಿಸಿ


Click it and Unblock the Notifications











