ಗ್ಲಾಮರ್ ಗೊಂಬೆ ಹರಿಪ್ರಿಯಾ ಹಿಂದೆ ಬಿದ್ದ ಸೂಪರ್ ಶಾಸ್ತ್ರಿ
ಇವನು ಅಂತಿಂಥ ಶಾಸ್ತ್ರಿ ಅಲ್ಲ ಸೂಪರ್ ಶಾಸ್ತ್ರಿ. ಗ್ಲಾಮರ್ ಗೊಂಬೆ ಯ ಹಿಂದೆ ಬೀಳುತ್ತಾನೆ. ಹುಡುಗಿಯ ಅಪ್ಪನೋ ಅಂಡರ್ ವರ್ಲ್ಡ್ ಡಾನ್. ಆದರೂ ಅದೇ ಹುಡುಗಿ ಬೇಕು ಎಂದು ಪಟ್ಟುಹಿಡಿಯುತ್ತಾನೆ. ಆಗಸ್ಟ್ 5ರಂದು ಸೆಟ್ಟೇರುತ್ತಿರುವ 'ಸೂಪರ್ ಶಾಸ್ತ್ರಿ' ಚಿತ್ರದ ಕತೆಯ ಒಂದೆರಡು ಸಾಲು ಇವು.
'ಸೂಪರ್ ಶಾಸ್ತ್ರಿ'ಯಾಗಿ ಪ್ರಜ್ವಲ್ ದೇವರಾಜ್ ಕಾಣಿಸಲಿದ್ದು, ಡಾನ್ ಮಗಳ ಪಾತ್ರವನ್ನು ಹರಿಪ್ರಿಯಾ ಪೋಷಿಸಲಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ರಾಜು. ತೆಲುಗಿನ ಯಶಸ್ವಿ ಚಿತ್ರ ಸೀಮ ಶಾಸ್ತ್ರಿ ರೀಮೇಕ್ ಚಿತ್ರ ಇದಾಗಿದೆ.
ಪಕ್ಕಾ ಹಾಸ್ಯ ಪ್ರಧಾನವಾದ ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಪ್ರಜ್ವಲ್ ಕಾಮಿಡಿ ಪಾತ್ರ ಪೋಷಿಸುತ್ತಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ಬುಲೆಟ್ ಪ್ರಕಾಶ್ ಕೂಡ ಇದ್ದಾರೆ. ಪ್ರಜ್ವಲ್ ಅವರ ಇಮೇಜ್‌ಗೆ ತಕ್ಕಂತೆ ಚಿತ್ರಕತೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Kannada movie Super Shastri shooting will start from August 5th in Bengaluru. Raju is the director of this film. Glam doll Haripriya and Prajwal Devraj plays lead roles in the film. This is a remek of Telugu hit Seema Shastri.


Click it and Unblock the Notifications











