ಪುಟ್ಟಪರ್ತಿ ಪವಾಡ ಪುರುಷನಾಗಿ ಕನ್ನಡಿಗ ಪ್ರಕಾಶ್ ರೈ

By Rajendra

ಕೋಡಿ ರಾಮಕೃಷ್ಣ ನಿರ್ದೇಶಿಸಲಿರುವ ಪುಟ್ಟಪರ್ತಿ ಸತ್ಯಸಾಯಿ ಬಾಬಾ ಪಾತ್ರವನ್ನು ಯಾರು ಪೋಷಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಕನ್ನಡದ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಪ್ರಕಾಶ್ ರೈ ಆ ಪಾತ್ರವನ್ನು ಪೋಷಿಸುವುದು ಬಹುತೇಕ ಖಚಿತವಾಗಿದೆ.

ಪ್ರಕಾಶ್ ರೈ ಈಗಾಗಲೆ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದು, ಬಾಬಾ ಪಾತ್ರಕ್ಕೆ ಅವರೇ ಸೂಕ್ತ ನಟ ಎಂದು ಕೋಡಿ ರಾಮಕೃಷ್ಣ ಗುರುತಿಸಿದ್ದಾರೆ. ಪ್ರಕಾಶ್ ರೈ ಬಾಲಿವುಡ್‌ನಲ್ಲೂ ಕೈಯಾಡಿಸಿರುವುದು ಗೊತ್ತೆ ಇದೆ. ಬಾಬಾ ಪಾತ್ರಕ್ಕೆ ಪ್ರಕಾಶ್ ರೈ ಬಿಟ್ಟರೆ ಇನ್ಯಾರು ಕಾಣಿಸುತ್ತಿಲ್ಲ.

ಈ ಚಿತ್ರಕ್ಕೆ ರಾಜಕಾರಣಿ ಕಮ್ ನಿರ್ಮಾಪಕ ಹರಿ ರಾಮ್ ಜೋಗಯ್ಯ ಬಂಡವಾಳ ಹೂಡಲಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಭಕ್ತಿ ಪ್ರಧಾನ ಚಿತ್ರಗಳಿಗೆ ಕೋಡಿ ರಾಮಕೃಷ್ಣ ಹೇಳಿ ಮಾಡಿಸಿದ ನಿರ್ದೇಶಕ. ಪುಟ್ಟಪರ್ತಿ ಈಗಾಗಲೆ ವಿವಾದಗಳ ಗೂಡಾಗಿದೆ. ಇವೆಲ್ಲವುಗಳ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆಯೇ ಎಂಬ ಪ್ರಶ್ನೆಯೂ ತಲೆಯೆತ್ತಿದೆ.

ಚಿತ್ರದ ನಾಯಕ ನಟ ಪ್ರಕಾಶ್ ರೈ ಎಂಬುದು ಅಧಿಕೃತವಾಗಿ ಇನ್ನೂ ಪ್ರಕಟವಾಗಿಲ್ಲ. ವಿಶೇಷ ಎಂದರೆ ಪ್ರಕಾಶ್ ರೈ ಕೂದಲು ಗುಂಗುರು ಗುಂಗುರು. ಅವರು ಮೂರು ತಿಂಗಳು ಕಟಿಂಗ್‌ ಶಾಪ್ ಕಡೆಗೆ ತಲೆಹಾಕದೆ ಒಂದೆರಡು ಇಂಚು ತಲೆಗೂದಲು ಬೆಳಸಿ ಅವನ್ನು ಒಂಚೂರು ಕೆದರಿಬಿಟ್ಟರೆ ಥೇಟ್ ಬಾಬಾ ಅವರಂತೆಯೇ ಕಾಣುತ್ತಾರೆ! (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada actor Prakash Raj is going to do the role of Satya Sai Baba, but it is not yet confirmed officially. The movie will be produced by politician cum producer Hari Rama Jogaiah. Presently cast selection for the film is in progress. The movie will be directed by Kodi Rama Krishna, who is expert in making devotional films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X