ಚಿತ್ರರಂಗಕ್ಕೆ ರಮ್ಯಾಸುದೀರ್ಘ ರಜೆ ಘೋಷಣೆ
ಲಕ್ಕಿ ಸ್ಟಾರ್ ರಮ್ಯ ಚಿತ್ರರಂಗಕ್ಕೆ ಸುದೀರ್ಘ ರಜೆ ಘೋಷಿಸಿದ್ದಾರೆ. ಪ್ರಯಾಸದಿಂದ ಹೊರಬರಲು ಅವರು ಸುದೀರ್ಘ ಪ್ರವಾಸವನ್ನು ಕೈಗೊಂಡಿದ್ದಾರೆ. ಈಗಾಗಲೆ ಅವರು ನ್ಯೂಜೆರ್ಸಿಯ ಅಕ್ಕ ಸಮ್ಮೇಳನದಲ್ಲಿದ್ದು ಅಲ್ಲಿಂದ ದಕ್ಷಿಣ ಆಫ್ರಿಕಾಗೆ ಹಾರಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಚಿಯರ್ಸ್ ಹೇಳಬೇಕಾಗಿದೆ ಅವರು.
ತಮ್ಮ ಪ್ರವಾಸದ ಬಗ್ಗೆ ಮಾತನಾಡುತ್ತಾ, ಇಡೀ ನನ್ನ ವೃತ್ತಿ ಜೀವನದಲ್ಲಿ ಇಷ್ಟೊಂದು ಸುದೀರ್ಘ ಹಾಲಿಡೇಯನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ. ಪುನೀತ್ ರಾಜ್ ಕುಮಾರ್ ಹಾಗೂ ರಮ್ಯಾ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ರಾಯಭಾರಿಗಳು. ಅಕ್ಕ ಸಮ್ಮೇಳನ ಮುಗಿಸಿಕೊಂಡು ದಕ್ಷಿಣ ಆಫ್ರಿಕಾಗೆ ಹಾರಿ ಚಾಂಪಿಯನ್ಸ್ ಲೀಗ್‌ನಲ್ಲಿ ಭಾರತ ತಂಡಕ್ಕೆ ಚಿಯರ್ಸ್ ಹೇಳುತ್ತಾ ಕಾಲಕಳೆಯಲಿದ್ದಾರೆ.
ಅತ್ತ ರಮ್ಯಾ ಪ್ರವಾಸದಲ್ಲಿದ್ದರೆ ಇಲ್ಲಿ ಆಕೆ ಅಭಿನಯದ ಎರಡು ಚಿತ್ರಗಳಿಗೆ ಬಿಡುಗಡೆ ಮೋಕ್ಷ ಸಿಕ್ಕಿದೆ. 'ಕಿಚ್ಚ ಹುಚ್ಚ' ಮತ್ತು 'ಜೊತೆಗಾರ' ಚಿತ್ರಗಳು ಸುದೀರ್ಘ ಸಮಯದ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರುತ್ತಿವೆ. ರಮ್ಯಾ ಮುಖ್ಯಭೂಮಿಕೆಯಲ್ಲಿರುವ ಮತ್ತೊಂದು ಚಿತ್ರ 'ದಂಡಂ ದಶಗುಣಂ' ಚಿತ್ರೀಕರಣವು ಬಹುತೇಕ ಮುಗಿದಿದೆ.
ಗ್ಯಾಲರಿ : ಅಕ್ಕ ಸಮ್ಮೇಳನದಲ್ಲಿ ಪುನೀತ್ ಜೊತೆ ರಮ್ಯಾ


Click it and Unblock the Notifications











