ಇಂದು ಗೋಲ್ಡನ್ ಗರ್ಲ್ ರಮ್ಯಾ ಮದುವೆ!
ಲಕ್ಕಿ ಸ್ಟಾರ್ ರಮ್ಯಾ ಮದುವೆ ಯಾವಾಗ ನಡೆಯುತ್ತದೆ ಎಂದು ಆಕೆಯ ಅಭಿಮಾನಿಗಳು ಉಸಿರು ಬಿಗಿಹಿಡುದು ಕಾಯುತ್ತಲೆ ಇದ್ದಾರೆ. ಆದರೆ ರಮ್ಯಾ ಮಾತ್ರ ತಮ್ಮ ಮದುವೆ ಬಗ್ಗೆ ದಿವ್ಯ ಮೌನ ಪ್ರದರ್ಶಿಸುತ್ತಲೆ ಇದ್ದರು. ಇದೀಗ ರಮ್ಯಾ ಮದುವೆ ದಿಢೀರ್ ಅಂತ ನಡೆದುಹೊಗಿದೆ. ಆಶ್ಚರ್ಯವಾಗುತ್ತಿದೆಯೇ! ಹೌದು ರಮ್ಯಾ ಮದುವೆಯಾಗಿದ್ದಾರೆ, ಆದರೆ ನಿಜ ಜೀವನದಲ್ಲಿ ಅಲ್ಲ.
ತಮ್ಮ ಹೊಸ 'ದಂಡಂ ದಶಗುಣಂ' ಚಿತ್ರದ ಆಗುಹೋಗುಗಳ ಬಗ್ಗೆ ರಮ್ಯಾ ಟ್ವೀಟ್ ಮಾಡಿದ್ದಾರೆ. "ಇಂದು ಮದುವೆ ಚಿತ್ರೀಕರಣ ನಡೆಯಿತು. ಹೀಗೆ ಎಷ್ಟು ಬಾರಿ ಮದುವೆಯಾಗಿದ್ದೇನೋ ನನಗೆ ಗೊತ್ತಿಲ್ಲ. ಪೂಜಾರಿ ಪಾತ್ರಧಾರಿ ಮಂತ್ರಗಳನ್ನು ಹೇಳುವ ಬದಲು ಸಿಹಿ ತಿನಿಸುಗಳನ್ನು ಕನವರಿಸುತ್ತಿದ್ದ... "
'ದಂಡಂ ದಶಗುಣಂ' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದ ನಾಯಕ ನಟ ಚಿರಂಜೀವಿ ಸರ್ಜಾ ಸಹ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಜೂನ್ 24ರಿಂದ ಚಿತ್ರೀಕರಣ ಆರಂಭವಾಗಿದ್ದು ಈಗಾಗಲೆ ಶೇ.50ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದ ತಾರಾಬಳಗದಲ್ಲಿ ಚಿರಂಜೀವಿಸರ್ಜಾ, ರಮ್ಯಾ, ರವಿಶಂಕರ್, ತಿಲಕ್, ತಾರಕೇಶ್‌ಪಟೇಲ್, ರಮೇಶ್, ಗಜಲ್‌ಖಾನ್, ಲಕ್ಷ್ಮೀಹೆಗ್ಡೆ, ಸುನೀಲ್ ಮುಂತಾದವರಿದ್ದಾರೆ.


Click it and Unblock the Notifications











