ಶುಭ ಶುಕ್ರವಾರ ಜೋಗಯ್ಯನಿಗೆ ಆಸಿಡ್ ಟೆಸ್ಟ್
ಕನ್ನಡ ಚಿತ್ರೋದ್ಯಮದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಚಿತ್ರ ಪ್ರೇಮ್ ನಿರ್ದೇಶನದ 'ಜೋಗಯ್ಯ'. ಈ ಚಿತ್ರ ಆಸಿಡ್ ಟೆಸ್ಟ್‌ಗೆ ಅಣಿಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಆಗಸ್ಟ್ 12ರಂದು ತೆರೆಕಾಣಲಿದ್ದು, ಶುಭ ಶುಕ್ರವಾರ (ಆ.5) ಸೆನ್ಸಾರ್ ಮುಂದೆ ಬರಲಿದೆ.
'ಜೋಗಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿತ್ತು. ಈಗ 'ಜೋಗಯ್ಯ'ನಿಗೆ ಯಾವ ಸರ್ಟಿಫಿಕೇಟ್ ಸಿಗಬಹುದು ಎಂಬ ಕುತೂಹಲ ಚಿತ್ರೋದ್ಯಮದಲ್ಲಿ ಮನೆ ಮಾಡಿದೆ. ಚಿತ್ರ ವಿತರಕರು ಈಗಾಗಲೆ ಚಿತ್ರದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದಾರೆ.
ಗಾಂಧಿನಗರದ ಹೃದಯ ಭಾಗ ಮೆಜೆಸ್ಟ್‌ನಲ್ಲೇ ಎರಡು ಚಿತ್ರಮಂದಿರಗಳಲ್ಲಿ 'ಜೋಗಯ್ಯ' ತೆರೆಕಾಣುತ್ತಿದೆ. ಉಳಿದಂತೆ ಬೆಂಗಳೂರಿನಲ್ಲಿ 25ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೋಗಯ್ಯ ಬಿಡುಗಡೆಯಾಗುತ್ತಿದೆ. ಉಳಿದ ವಿವರಗಳಿಗಾಗಿ ನಿರೀಕ್ಷಿಸಲಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Prem's Jogayya, which has generated a huge hype in the Kannada film industry, is up for an acid test. The Shivaraj Kumar starrer movie, which is expected to release on August 12, is all set to go for the censor test tomorrow.


Click it and Unblock the Notifications











