Just In
Don't Miss!
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- News
ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಯಡಿಯೂರಪ್ಪಗೆ ಶುರುವಾಯ್ತು ಸಂಕಷ್ಟ!
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತ್ರಿಡಿಯಲ್ಲಿ ಶಿವಣ್ಣನ ಜೋಗಯ್ಯ ದೃಶ್ಯ ವೈಭವ
ಕನ್ನಡ ಚಿತ್ರೋದ್ಯಮದಲ್ಲಿ ಈಗಾಗಲೆ ಸಾಕಷ್ಟು ಕುತೂಹಲ ಮೂಡಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಜೋಗಯ್ಯ' ಚಿತ್ರದ ಹಾಡೊಂದು ತ್ರಿಡಿಯಲ್ಲಿ ಮೂಡಿಬರಲಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಸದ್ಯಕ್ಕೆ ತ್ರಿಡಿ ರೂಪ ಕೊಡಲಾಗುತ್ತಿದೆ.
'ಜೋಗಯ್ಯ' ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಒಂದು ಹಾಡಿಗೆ ತ್ರಿಡಿ ರೂಪ ಕೊಡಲು ಚಿತ್ರದ ನಿರ್ದೇಶಕ ಪ್ರೇಮ್ ಸಿದ್ಧತೆ ನಡೆಸಿದ್ದಾರೆ. ಚಿತ್ರದ ವಿಶೇಷ ಹಾಡೊಂದನ್ನು ತ್ರಿಡಿಗೆ ಬದಲಾಯಿಸಲಾಗುತ್ತಿದೆ ಎಂದು ಸ್ವತಃ ಪ್ರೇಮ್ ತಿಳಿಸಿದ್ದು, ಸಂಪೂರ್ಣ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.
ಸದ್ಯಕ್ಕೆ ಮುಂಬೈನಲ್ಲಿ ತ್ರಿಡಿ ಹಾಡನ್ನು ವಿನ್ಯಾಸಗೊಳಿಸಲಾಗುತ್ತಿದೆ. ಮಾರ್ಚ್ ತಿಂಗಳಲ್ಲಿ 'ಜೋಗಯ್ಯ' ಧ್ವನಿಸುರುಳಿ ಮಾರುಕಟ್ಟೆಗೆ ದಾಂಗುಡಿ ಇಡಲಿದೆ. ಆ ಸಮಯಕ್ಕೆ ತ್ರಿಡಿ ಹಾಡು ಸಿದ್ಧವಾಗಲಿದೆ ಎಂಬುದು ತಾಜಾ ಸಮಾಚಾರ. ತ್ರಿಡಿ ಹಾಡಿನ ಆವೃತ್ತಿಯನ್ನು ಆಯ್ಕೆ ಮಾಡಿದ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತದಂತೆ.
ಒಟ್ಟು ಐದು ಚಿತ್ರಮಂದಿರಗಳಲ್ಲಿ 'ಜೋಗಯ್ಯ' ತ್ರಿಡಿ ಹಾಡಿನ ಆವೃತ್ತಿ ಬಿಡುಗಡೆಯಾಗಲಿದೆ ಎಂದು ಪ್ರೇಮ್ ತಿಳಿಸಿದ್ದಾರೆ. ಅದ್ದೂರಿ ಕಾರ್ಯಕ್ರಮದ ಮೂಲಕ 'ಜೋಗಯ್ಯ' ಧ್ವನಿಸುರುಳಿ ಬಿಡುಗಡೆಗೆ ಪ್ರೇಮ್ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಅಂದಹಾಗೆ ಆಡಿಯೋ ಹಕ್ಕುಗಳು ಆನಂದ್ ಆಡಿಯೋದ ಮೋಹನ್ ಛಾಬ್ರಿಯಾ ಪಾಲಾಗಿವೆ. [ಜೋಗಯ್ಯ]