ನಾಗಾಭರಣ ಪುತ್ರನ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ

By Rajendra

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರ ಪುತ್ರ ಪನ್ನಗ ನಾಗಾಭರಣ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದ ನಾಯಕ ಇನ್ಯಾರು ಅಲ್ಲ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ನಾಯಕಿ ಅದೇ ಮುದ್ದು ಮುಖದ ಚೆಲುವೆ ರಾಧಿಕಾ ಪಂಡಿತ್.

ಸಿನಿಮಾ ಬಗ್ಗೆ ಸಾಕಷ್ಟು ಆಸಕ್ತಿ ಇರುವ ಪನ್ನಗ ಅವರು ಚಿತ್ರ ನಿರ್ದೇಶಕನಕ್ಕೆ ಸಂಬಂಧಿಸಿದಂತೆ ಯುಎಸ್‌ಎನಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಇವರ ಹೆಣೆದಿರುವ ರೊಮ್ಯಾಂಟಿಕ್ ಲವ್ ಸ್ಟೋರಿ ಶಿವರಾಜ್ ಕುಮಾರ್ ಅವರಿಗೂ ಸಖತ್ ಇಷ್ಟವಾಗಿದೆ. ಹಾಗಾಗಿ ಈಗ ಇಬ್ಬರೂ ಕೈಜೋಡಿಸಿದ್ದಾರೆ. ಶಿವಣ್ಣನೇ ಒಬ್ಬ ನಿರ್ಮಾಪಕರನ್ನು ಸೂಚಿಸಿದ್ದಾರೆ. ವೆಂಕಟೇಶ ಮೂರ್ತಿ ಎಂಬುವವರಿಗೆ ಕಾಲ್ ಶೀಟ್ ನೀಡಿದ್ದಾರೆ.

ಸದ್ಯಕ್ಕೆ 'ಲಕ್ಷ್ಮಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವಣ್ಣ ಆ ಚಿತ್ರದ ಬಳಿಕ ಪನ್ನಗ ಅವರ ಚಿತ್ರಕ್ಕೆ ಬಣ್ಣ ಹಚ್ಚಿಕೊಳ್ಳಲಿದ್ದಾರೆ. ಅತ್ತ ರಾಧಿಕಾ ಪಂಡಿತ್ ಅವರಿಗೂ ಕೈತುಂಬ ಅವಕಾಶಗಳು ಬಂದಿವೆ. ಧ್ರುವ ಸರ್ಜಾ ಜೊತೆ 'ಅದ್ದೂರಿ' ಹಾಗೂ ಪುನೀತ್ ರಾಜ್ ಕುಮಾರ್ ಅವರ ಜೊತೆ 'ಹುಡುಗರು' ಚಿತ್ರದಲ್ಲಿ ರಾಧಿಕಾ ಅಭಿನಯಿಸಿದ್ದಾರೆ.

More from Filmibeat

English summary
Pannaga Nagabharana, son of the well known film director and Karnataka Film Acady president TS Nagabharana is directing a film to Shivarajkumar. Radhika Pandit is the heroine of the film. Pannaga has completed a film training course in USA.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X