For Quick Alerts
  ALLOW NOTIFICATIONS  
  For Daily Alerts

  ಭಟ್ಟರ ಜತೆ ಲಗೋರಿ ಆಡಲಿರುವ ಪುನೀತ್

  By Staff
  |

  "ಮುಂಗಾರುಮಳೆಗೂ ಮುನ್ನ ಎರಡೂ ಮೂರು ಸ್ಕ್ರಿಪ್ಟ್ ಹಿಡಿದುಕೊಂಡು ವಜ್ರೇಶ್ವರಿ ಆಫೀಸ್, ಡಾ. ರಾಜ್ ಮನೆ ಕಡೆಗೆ ತಿರುಗಿದಷ್ಟೇ ಬಂತು. ಯಾವುದೂ ಗಿಟ್ಟಲಿಲ್ಲ. ಆದರೆ ಒಮ್ಮೆ ಅದೃಷ್ಟ ಖುಲಾಯಿಸಿದ ಮೇಲೆ ಎಲ್ಲರೂ ಕೇಳುವವರೇ" ಇದು ಕೀರ್ತಿ ಶಿಖರವೇರಿರುವ ಯೋಗರಾಜ ಭಟ್ಟರ ಹಣೆಬರಹ. ಎರಡು ಮೂರು ಚಿತ್ರ ಮಾಡಿ ವಿಮರ್ಶಕರಿಂದ ಸೈ ಎನಿಸಿಕೊಂಡರೂ ಪ್ರೇಕ್ಷಕರ ಮೆಚ್ಚುಗೆಯಿಂದ ದೂರಾಗಿದ್ದ ಭಟ್ಟರನ್ನು ಯಾರೂ ಪುರಸ್ಕರಿಸದ ಕಾಲವದು.

  ಆ ಕಾಲದಲ್ಲಿ ಪುನೀತ್ ಅವರನ್ನು ಹಾಕಿಕೊಂಡು ಚಿತ್ರ ಮಾಡಬೇಕು ಎಂದು ಆಸೆಪಟ್ಟು ಮುಂಗಾರು ಮಳೆ, ಗಾಳಿಪಟ ಎಂದೆಲ್ಲಾ ರಾಜ್ ಪರಿವಾರದವರ ಹತ್ತಿರಹೋದರೂ ಕೂಡ ಪ್ರಯೋಜನವಾಗಿರಲಿಲ್ಲ. ಆದರೂ ಗಣೇಶ್ ಅದೃಷ್ಟ, ಭಟ್ಟರ ತಂಡದ ಪರಿಶ್ರಮ ಬಿಗ್ ಬ್ಯಾನರ್ ನೆರವಿಲ್ಲದೆ ಯಶಸ್ವಿಯಾಗಿದ್ದು ಈಗ ಇತಿಹಾಸ.

  ಎಲ್ಲಕ್ಕೂ ಕಾಲ ಕೂಡಿ ಬರಬೇಕಲ್ಲ. ರಾಘಣ್ಣ ಭರವಸೆ ನೀಡಿದಂತೆ, ಇಂದು ಯೋಗರಾಜ್ ಭಟ್ಟರಿಗೆ ಪುನೀತ್ ರಾಜ್ ಅವರನ್ನು ನಿರ್ದೇಶಿಸುವ ಅವಕಾಶ ದೊರೆತಿದೆ. ಅಂತೂ ಇಂತೂ ಕಾಲ ಕೂಡಿ ಬಂತು ಎಂದು ಎಂದುಕೊಂಡ ಭಟ್ಟರಿಗೆ, ಸಾಥಿಯಾಗಿ ನಿಲ್ಲಲು ಕನ್ನಡದ ಮಟ್ಟಿಗೆ ಬಿಗ್ ಬ್ಯಾನರ್ ಎನ್ನಬಹುದಾದ ರಾಕ್ ಲೈನ್ ಪ್ರೊಡಕ್ಷನ್ ಮುಂದೆ ಬಂದಿದೆ.

  'ಲಗೋರಿ 'ಎಂಬ ಕ್ಯಾಚಿ ಹೆಸರನ್ನು ಆಗಲೇ ರಿಜಿಸ್ಟರ್ ಮಾಡಿದ್ದಾರೆ ರಾಕ್ ಲೈನ್ ವೆಂಕಟೇಶ್, ಭಟ್ಟರ ಚಿತ್ರದಲ್ಲಿ ಪುನೀತ್ ಕುಣಿಯುವುದಂತೂ ಖಚಿತವಾಗಿದೆ. ಮುಂಗಾರುಮಳೆ, ಗಾಳಿಪಟದಲ್ಲಿ ಕೈತಪ್ಪಿದ ಅವಕಾಶ ಪುನೀತ್ ಈಗ ಲಭಿಸಿದೆ. ಪ್ರತಿಭಾವಂತ ಪುನೀತ್, ಕ್ರಿಯೇಟಿವ್ ನಿರ್ದೇಶಕ ಯೋಗರಾಜ್ ಅವರ ಸಂಗಮದಿಂದ ಉತ್ತಮ ಚಿತ್ರ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ .ಏನಂತೀರಾ?

  (ದಟ್ಸ್ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X