For Quick Alerts
  ALLOW NOTIFICATIONS  
  For Daily Alerts

  'ಜಾನೂ'ಗೆ ಯೋಗರಾಜ್ ಭಟ್ ಸಮಾಚಾರ ಸಾಹಿತ್ಯ

  By Rajendra
  |

  ಯೋಗರಾಜ್ ಭಟ್ ತಮ್ಮ 'ಡ್ರಾಮಾ' ಚಿತ್ರದ ಸಂಕಟಗಳ ನಡುವೆ ಸಾಹಿತ್ಯ ಹೆಣೆಯುವುದರಲ್ಲೂ ಬಿಜಿಯಾಗಿದ್ದಾರೆ. ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿರುವ 'ಜಾನೂ' ಚಿತ್ರಕ್ಕಾಗಿ ಒಂದು ಹಾಡನ್ನು ಭಟ್ಟರು ಹೆಣೆದುಕೊಟ್ಟಿದ್ದಾರೆ. ಆ ಹಾಡಿನ ಸಾಹಿತ್ಯ ಹೀಗಿದೆ, "ಏನ್ ಸಮಾಚಾರ ರೀ ಎಲ್ಲರೂ ಹೇಗಿದ್ದೀರಿ...".

  ಇತ್ತೀಚೆಗೆ ಈ ಗೀತೆಯ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು. ವಿಶೇಷ ಸೆಟ್‌ನಲ್ಲಿ ಮೂಡಿ ಬಂದಿರುವ ಈ ಗೀತೆಗೆ ಮುರುಳಿ ವಿಭಿನ್ನ ಶೈಲಿಯಲ್ಲಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೃಷ್ಣರ ಛಾಯಾಗ್ರಹಣದಲ್ಲಿ ಈ ಹಾಡಿನ ಅದ್ದೂರಿತನ ಇಮ್ಮಡಿಯಾಗಿದೆ ಎಂದು ನಿರ್ದೇಶಕ ಪ್ರೀತಂ ಗುಬ್ಬಿ ತಿಳಿಸಿದ್ದಾರೆ.

  ಸದ್ಯ 'ಜಾನು'ಗೆ ಡಿ ಐ ಅಳವಡಿಸಲಾಗುತ್ತಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಈ ಹಾಡಿನ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಯಶ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ನಾಯಕಿ ದೀಪಾಸನ್ನಿಧಿ ಹುಬ್ಬಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ಸಂಗೀತಾ, ಶೋಭರಾಜ್, ಸಾಧುಕೋಕಿಲಾ ಅವರ ನಟನೆ ಬಗ್ಗೆ ನಿರ್ದೇಶಕ ಪ್ರೀತಂ ಗುಬ್ಬಿ ಮೆಚ್ಚುಗೆ ವ್ಯಕ್ತ ಪಡೆಸಿದ್ದಾರೆ. ಸಾಧುಕೋಕಿಲಾ ಅವರ ಹಾಸ್ಯ ಸನ್ನಿವೇಶಗಳಂತೂ ನೋಡುಗರ ಮನದಲ್ಲೇ ಮನೆ ಮಾಡುವುದಂತೆ. (ಒನ್‌ಇಂಡಿಯಾ ಕನ್ನಡ)

  English summary
  Director Yograj Bhat in his busy schedule of Drama movie shooting he wrote a lyrics for the movie Jaanu. The movie is directing by Pretham Gubbi, Krishna is behind the camera and V Harikrishna has scored the music. Actors Yash and Deepa Sannidhi are in lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X