»   » ಇವತ್ತು ಬೆಂಗಳೂರು ಬೆಡಗಿ ದೀಪಿಕಾ ಹುಟ್ಟುಹಬ್ಬ ಕಣ್ರೀ

ಇವತ್ತು ಬೆಂಗಳೂರು ಬೆಡಗಿ ದೀಪಿಕಾ ಹುಟ್ಟುಹಬ್ಬ ಕಣ್ರೀ

Subscribe to Filmibeat Kannada

ಮಂಗಳೂರು ಮೂಲದ ಬೆಂಗಳೂರು ಹುಡ್ಗಿ ದೀಪಿಕಾ ಬಾಲಿವುಡ್ ಗೆ ಕಾಲಿಟ್ಟ ಮೇಲೆ ಅಲ್ಲಿ ಸಂಚಲನ ಸೃಷ್ಟಿಯಾಗಿದೆ. ಒಂದೆಡೆ ಒಳ್ಳೆ ಬ್ಯಾನರ್ ಗಳ ಲ್ಲಿ ನಟಿಸುವ ಅವಕಾಶಗಳ ಗಳಿಕೆ, ಇನ್ನೊಂದೆಡೆ ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿನ ಸುಂದರಾಂಗರ ಸಂಗ ದೀಪಿಕಾಳಿಗೆ ಒಲಿದಿರುವುದು ಹಿಂದಿ ಚಿತ್ರರಂಗದ ಅನೇಕ ನಟನಾಮಣಿಗಳ ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ.

  • ಮಹೇಶ್ ಮಲ್ನಾಡ್

ಜ.2 ರಂದು ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜಾಲಾ ಹಾಗೂ ತಂಗಿ ಅನಿಶಾ ಜತೆಗೆ ಮುಂಬೈನ ಶ್ರೀಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಹೋಗಿದ್ದ ದೀಪಿಕಾ, ಅಲ್ಲಿಂದ ಸೀದಾ ಅಸ್ಟ್ರೇಲಿಯಾಕ್ಕೆ ಹಾರಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸಿದ್ದಾರ್ಥ್ ಆನಂದ್ ನಿರ್ದೇಶನದ ಯಶ್ ರಾಜ್ ಬ್ಯಾನರ್ ನ ಹೊಸ ಚಿತ್ರವೊಂದರ ಚಿತ್ರೀಕರಣಕ್ಕೆ ಹೋಗಿರುವ ದೀಪಿಕಾಳಿಗೆ ಇಂದು ಭರ್ಜರಿ ಔತಣ ಸಿಗುವುದಂತೂ ಗ್ಯಾರಂಟಿ.ಕಾರಣ ಇಂದು ಈ ಮೋಹಕ ನಗೆಯ ತಾರೆಯ 22ನೇಜನ್ಮದಿನ.

ಡಿ.19 ರಂದು ತನ್ನ ಹುಟ್ಟುಹಬ್ಬಕ್ಕೆ ಆಗಮಿಸಿ ಮೆರಗು ನೀಡಿದ ಗೆಳತಿ ದೀಪಿಕಾಳಿಗೆ ಭಾರಿ ಉಡುಗೊರೆ ನೀಡಲು ಕ್ರಿಕೆಟ್ಟಿಗ ಯುವರಾಜ ಸಜ್ಜಾಗಿದೆ ಎನ್ನಲಾಗಿದೆ. ಯುವರಾಜನ ಕುಟುಂಬದವರು ಎಲ್ಲಾ ಸರಿ ಹೋದರೆ ಇನ್ನೆರಡೂ ತಿಂಗಳಲ್ಲಿ ಇವರಿಬ್ಬರ ನಿಶ್ಚಿತಾರ್ಥ ಮಾಡಿ ಮುಗಿಸಲು ಕಾತುರರಾಗಿದ್ದಾರೆ. ಆದರೆ ದೀಪಿಕಾಳ ಚಿತ್ತ ಯಾರ ಕಡೆಗೆ ಎಂದು ಹೇಳಲು ಸಾಧ್ಯವಿಲ್ಲ. ಒಮ್ಮೆ ಧೋನಿಯ ಕರೆ ಮೇರೆಗೆಕ್ರಿಕೆಟ್ ಪಂದ್ಯ ನೋಡಲು ಬರುತ್ತಾಳೆ. ಧೋನಿಯೊಡನೆ ಹೆಸರು ಓಡಾಡತೊಡಗಿದರೂ ತನಗರಿವಿಲ್ಲದಂತೆ ಸುಮ್ಮನೆ ನಗುತ್ತಾಳೆ. ನಂತರ ಯುವರಾಜನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾಳೆ. ಇದಕ್ಕೂ ಹಿಂದಿನ ಕಥೆ ಎಂದರೆ ಈಗ ದೀಪಿಕಾ ನಟಿಸುತ್ತಿರುವ ಚಿತ್ರದ ನಾಯಕ ರಣಬೀರ್ ಕಪೂರ್ ಈಕೆಯ ಮೊದಲ ಡೇಟಿಂಗ್ ಪಾರ್ಟರ್ ಅಂತೆ. ಇದನ್ನು ಹೆಮ್ಮೆಯಿಂದ ದೀಪಿಕಾ ಒಪ್ಪುತ್ತಾಳೆ. ರಣಬೀರ್ ಈಗ ಸಾವರಿಯಾ ಚಿತ್ರದ ನಾಯಕಿ ಹಾಗೂ ಅನಿಲ್ ಕಪೂರ್ ಮಗಳಾದ ಸೋನಂ ಹಿಂದೆ ಸುತ್ತುತ್ತಿದ್ದಾನೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ, ಬೆಸ್ಟ್ ಮಾಡೆಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ದೀಪಿಕಾ, ಕನ್ನಡದ ಐಶ್ವರ್ಯ ಚಿತ್ರದಲ್ಲಿ ಉಪೇಂದ್ರನ ಜೊತೆ ನಟಿಸಿದ್ದು ಎಲ್ಲರಿಗೂ ತಿಳಿದ ವಿಷಯ. ನಂತರ ಕನ್ನಡ ಚಿತ್ರರಂಗಕ್ಕೆ ಬೈ ಹೇಳಿ, ಹಿಂದಿಯಲ್ಲಿ ಶಾರುಖ್ ಅಭಿನಯದ 'ಓಂ ಶಾಂತಿ ಓಂ ' ಮೂಲಕ ಭರ್ಜರಿ ಎಂಟ್ರಿ ಪಡೆದ ದೀಪಿಕಾ,ಈಗ ಬಾಲಿವುಡ್ ನ ಅನಭಿಶಕ್ತ ರಾಣಿಯಾಗುವ ದಿನಗಳು ದೂರಿಲ್ಲ.

ರಣಬೀರ್ ಕಪೂರ್ ಜತೆ ಯಶ್ ರಾಜ್ ಬ್ಯಾನರ್ ನ ಚಿತ್ರ, ನಿಖಿಲ್ ಅಡ್ವಾಣಿ ನಿರ್ದೇಶನದ ವಾರ್ನರ್ ಬ್ರದರ್ಸ್ ರವರ ಚಾಂದನಿ ಚೌಕ್ ಟೂ ಚೈನಾದಲ್ಲಿ ಅಕ್ಷಯ್ ಕುಮಾರ್ ಜತೆ ಹಾಗೂ ಇಮ್ತಿಅಯಜ್ ಅಲಿ ನಿರ್ದೇಶನದ ಸೈಫ್ ಅಲಿ ಖಾನ್ ಅಭಿನಯದ ಚಿತ್ರದಲ್ಲಿ ನಟಿಸುತ್ತಿರುವ ದೀಪಿಕಾ ಸದ್ಯ ಬಾಲಿವುಡ್ ನ ಬ್ಯುಸಿ ನಟಿ.ಚಾಲ್ತಿಯಲ್ಲಿರುವ ನಟಿಯರನ್ನು ಬಿಟ್ಟು ದೀಪಿಕಾಳನ್ನು ಆರಿಸುತ್ತಿರುವ ನಿರ್ದೇಶಕ ಮರ್ಮ ಅರಿಯದೆ ಇತರೆ ನಾಯಕಿಯರು ಕಂಗಾಲಾಗಿದ್ದಾರಂತೆ. ದೀಪಿಕಾಳ ಸಂಭಾವನೆ ಮೊತ್ತ ಕೂಡ ದಿನೇದಿನೇ ಏರುತ್ತಿರುವುದು ಇದಕ್ಕೂ ಇನ್ನೊಂದು ಕಾರಣ ಅನ್ನಬಹುದು. ದೀಪಿಕಾಳ ಸದ್ಯಕ್ಕೆ 1ರಿಂದ 1.5 ಕೋಟಿ ಬೇಡಿಕೆ ಒಡ್ಡುತ್ತಿದ್ದಾಳೆ. ಒಟ್ಟಿನಲ್ಲಿ ಕನ್ನಡ ಕುವರಿಯೊಬ್ಬಳು ಹಿಂದಿಯಲ್ಲಿ ಮಿಂಚುತ್ತಿದ್ದಾಳೆ. ನಿಮ್ಮಮೆಚ್ಚಿನ ತಾರೆ ದೀಪಿಕಾಳ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ

ಮಾಡೆಲಿಂಗ್‌ನಿಂದ ಬಾಲಿವುಡ್‌ಗೆ ಜಿಗಿದಿರುವ ದೀಪಿಕಾ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada