»   » ಪುನೀತ್‌ ಚಿತ್ರದಲ್ಲಿ ಶ್ರೇಯಾ ಸೇರಿ ಮೂವರು ಅರಸಿಯರು!

ಪುನೀತ್‌ ಚಿತ್ರದಲ್ಲಿ ಶ್ರೇಯಾ ಸೇರಿ ಮೂವರು ಅರಸಿಯರು!

Subscribe to Filmibeat Kannada


‘ಫೇರ್‌ ಅಂಡ್‌ ಲವ್ಲಿ ’ ಜಾಹೀರಾತಿನಲ್ಲಿ ಎಲ್ಲರನ್ನು ತನ್ನ ಒಂದೇ ಕುಡಿನೋಟದಲ್ಲಿ ಸೆಳೆವ ಮೋಹಕ ಬೆಡಗಿ ಶ್ರೇಯಾ, ಈಗ ‘ಅರಸ’ನ ಮೂರನೇ ಅರಸಿ!

‘ಅರಸು’ ಚಿತ್ರದ ಚಿತ್ರೀಕರಣ ಮುಗಿಯುವ ಹೊತ್ತಿನಲ್ಲಿ, ಪತ್ತೆಯಿಲ್ಲದೇ ಶ್ರೇಯಾ ಎಂಟ್ರಿ ಪಡೆದಿದ್ದಾರೆ. ತಮ್ಮ ಪಾಲಿನ ಪಾತ್ರ ನಿರ್ವಹಿಸಿ, ದೊಡ್ಡ ಮೊತ್ತದ ಸಂಭಾವನೆಯಾಂದಿಗೆ ಹೈದರಾಬಾದ್‌ನ ವಿಮಾನ ಹತ್ತಿದ್ದಾರೆ.

ಈಗಾಗಲೇ ತೆಲುಗಿನ ಚಿರಂಜೀವಿ, ನಾಗಾರ್ಜುನ್‌ ಮತ್ತಿತರ ಘಟಾನುಘಟಿಗಳ ಜೊತೆ ನಾಯಕಿಯಾಗಿ ಬಳುಕಿದ ಶ್ರೇಯಾ, ‘ಶಿವಾಜಿ’ ಚಿತ್ರದಲ್ಲಿ ರಜನಿ ಜೊತೆ ಅಭಿನಯಿಸಿದ್ದಾರೆ. ಇಂತಹ ಡಿಮ್ಯಾಂಡ್‌ ಹುಡುಗಿ, ಕನ್ನಡದಲ್ಲಿ ಪುಟ್ಟ ಪಾತ್ರ ಒಪ್ಪಿಕೊಂಡದ್ದು ಯಾಕೆ ಎಂಬುದು ಗೊತ್ತಿಲ್ಲ. ಪುನೀತ್‌ ಆಪ್ತರು ಹೇಳುವ ಪ್ರಕಾರ; ಪುನೀತ್‌ ಜನಪ್ರಿಯತೆಯ ಕತೆ ಕೇಳಿದ ಶ್ರೇಯಾ ‘ಅರಸ’ ನಿಗೆ ಅರಸಿಯಾಗಲು ಒಪ್ಪಿದರಂತೆ!

ಕನ್ನಡದ ರಮ್ಯಾ, ಮಲಯಾಳಂನ ಮೀರಾ ಜಾಸ್ಮಿನ್‌ ಜೊತೆ, ತೆಲುಗು ಹುಡುಗಿ ಶ್ರೇಯಾ, ‘ಅರಸು’ ಸಿನಿಮಾಕ್ಕೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಇದೊಂದು ರೀತಿಯಲ್ಲಿ ಮೂರು ಭಾಷೆ ನಟಿಯರ ತ್ರಿವೇಣಿ ಸಂಗಮ.

ಚಿತ್ರದ ಕತೆಯ ಎಳೆಯನ್ನು ಬಿಟ್ಟುಕೊಡದ ‘ಅರಸು’ ತಂಡ, ಯಾಕೋ ಪತ್ರಕರ್ತರಿಂದ ದೂರ ಉಳಿದಿದೆ. ಚಿತ್ರದ ಬಗ್ಗೆ ಏನನ್ನೂ ಹೇಳುತ್ತಿಲ್ಲ. ನೇರವಾಗಿ ಪ್ರೇಕ್ಷಕರ ಮುಂದೆ ನಿಂತು ಗೆಲ್ಲುವ ಆತ್ಮವಿಶ್ವಾಸ ಚಿತ್ರತಂಡದ್ದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada