twitter
    For Quick Alerts
    ALLOW NOTIFICATIONS  
    For Daily Alerts

    ಪಾಪದ ಹಣದಲ್ಲಿ ಪುಣ್ಯಾತ್ಮನ ಬಿಡುಗಡೆ:ಕೊಡುಗೆ-ಕರೀಂ ತೆಲಗಿ

    By Super
    |

    ನವದೆಹಲಿ : ರಾಜ್‌ಕುಮಾರ್‌108 ದಿನಗಳ ವನವಾಸ ದಿನಕಳೆದಂತೆ ಹೊಸ ಹೊಸ ರೂಪ ತಳೆಯುತ್ತಿದೆ. ಭೀಮನಮವಾಸ್ಯೆಯ 2000 ಜುಲೈ 31ರ ಅಪಹರಣದ ದಿನದಿಂದ ಇಂದಿನ ದಿನತನಕ ಕಳೆದ 4 ವರ್ಷಗಳಲ್ಲಿ ಪ್ರಕರಣ ವಿವಿಧ ಮಗ್ಗುಲನ್ನು ಕಾಣುತ್ತಾ ಬಂದಿದೆ. ಇವತ್ತಿನ ಹೊಸ ಸುದ್ದಿ 'ರಾಜ್‌ ಬಿಡುಗಡಗೆ ಕರೀಂ ಲಾಲನ ಹಣದ ಬಳಕೆ?"

    ಈ ಸುದ್ದಿ ಬಾಂಬ್‌ಸ್ಪೋಟಿಸಿದವರು ಬಿಹಾರದ ಉಚ್ಛಾಟಿತ ಡಿಜಿಪಿ ಡಿ.ಪಿ.ಓಝಾ. ಕಾಡುಗಳ್ಳ ವೀರಪ್ಪನ್‌ ಒತ್ತೆಯಿಂದ ವರನಟ ರಾಜ್‌ಕುಮಾರ್‌ ವಿಮುಕ್ತಿಗೆ ನೀಡಲಾಗಿದೆ ಎನ್ನಲಾದ 30ಕೋಟಿ ರೂಪಾಯಿ ಹಣ ಕರೀಂ ಲಾಲನ ಛಾಪಾದ ಪಾಪದ ಹಣ ಎಂದಿದ್ದಾರೆ. 'ರಾಜಕೀಯ ಅಪರಾಧಿಕರಣ ಮತ್ತು ಅಪರಾಧದ ರಾಜಕಾರಣ" ಕುರಿತ ವಿಚಾರ ಸಂಕೀರ್ಣದಲ್ಲಿ (ಫೆ.03) ಮಾತನಾಡುತ್ತಾ ರಾಜ್‌ ಬಿಡುಗಡೆಗೆ ಬಹುಪಾಲು ಹಣವನ್ನು ಒದಗಿಸಿದವ ಬಹುಕೋಟಿ ಹಗರಣದ ಕರೀಂಲಾಲ ಎಂದು ಹೆಳಿದರು.

    ಇದಕ್ಕೆ ಪುರಾವೆ ಎಂಬಂತೆ ಕರ್ನಾಟಕದ ನಿವೃತ್ತ ಡಿಜಿಪಿ ದಿನಕರ್‌ ತಮ್ಮ 'ವೀರಪ್ಪನ್‌ ಪ್ರೆೃಜ್‌ ಕ್ಯಾಚ್‌" ಕೃತಿಯಲ್ಲಿ ರಾಜ್‌ ಬಿಡುಗಡೆ ಪ್ರಯತ್ನದಲ್ಲಿ ಕಾಡುಗಳ್ಳನ ಜತೆ ನಡೆದ ಮಾತುಕತೆಯಿಂದ ಪೊಲೀಸರನ್ನು ಹೊರಗಿಡಲಾಯಿತು ಎಂದಿದ್ದಾರೆ.

    ಈ ಹಿಂದೆ ಜುಲೈ 2002ರಲ್ಲಿ ನಕ್ಕೀರನ್‌ ಪತ್ರಿಕೆಯ ವರದಿಗಾರ ಶಿವಸುಬ್ರಹ್ಮಣ್ಯಂ ಜಾಮೀನು ಅರ್ಜಿ ಸಂಬಂಧ ಈರೋಡು ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತಿದ್ದ ಸಂದರ್ಭದಲ್ಲಿ ವರನಟ ರಾಜ್‌ ಬಿಡುಗಡೆಗಾಗಿ ಕಾಡುಗಳ್ಳ ವೀರಪ್ಪನ್‌ಗೆ 40 ಕೋಟಿ ರುಪಾಯಿ ಕೊಟ್ಟಿರುವ ಗುಟ್ಟನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಸ್‌ಪಿಪಿ ಶಂಕರನಾರಾಯಣನ್‌ ಬಹಿರಂಗ ಪಡಿಸಿದ್ದರು. ಇದರಲ್ಲಿ 10 ಕೋಟಿ ರುಪಾಯಿ ಹಣವನ್ನು ರಾಜ್‌ ಪುತ್ರರು ಕೊಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ ಉಳಿದ 30 ಕೋಟಿಯನ್ನು ಯಾರು ಕೊಟ್ಟರೆಂದು ಹೇಳದೇ ಪರೋಕ್ಷವಾಗಿ ಅಂದಿನ ಸರಕಾರದತ್ತ ಬೆರಳು ತೋರಿಸಿದ್ದರು. ತಮಿಳುನಾಡು ಎಸ್‌ಟಿಎಫ್‌ ಮುಖ್ಯಸ್ಥ ವಾಲ್ಟರ್‌ ದೇವರಂ ಸಹ ದನಿಗೂಡಿಸಿದ್ದರು.

    ಡಿ.ಪಿ.ಒಝಾ ಪತ್ರಕರ್ತರ ಜೊತೆ ಮಾತನಾಡುತ್ತಾ ಇತ್ತೀಚಿನ ಛಾಪಾ ಹಗರಣದ ವಿಶೇಷ ತನಿಖಾ ತಂಡ ನಡೆಸಿದ ವಿಚಾರಣೆಯಿಂದ ಈ ವಿಷಯ ಹೊರಬಂದಿದೆ. ರಾಜಕಾರಣಿಗಳ ಹಾಗೂ ಅಪರಾಧಿಗಳ ನಡುವೆ ಹೆಚ್ಚಿದ ಆತ್ಮೀಯ ಬಾಂಧವ್ಯದಿಂದ ಪೊಲೀಸರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾಗುತ್ತಿಲ್ಲ ಎಂದಿದ್ದಾರೆ.

    ಆದರೆ 'ವೀರಪ್ಪನ್‌ ತೆಕ್ಕೆಯಿಂದ ನಮ್ಮೆಜಮಾನರನ್ನು ಬಿಡಿಸಿಕೊಂಡು ಬರಲು ಒಂದು ಪೈಸೆಯನ್ನೂ ಕೊಟ್ಟಿಲ್ಲ "ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು. ಸರಕಾರದ ಪರವಾಗಿ 'ಡಾ. ರಾಜ್‌ಕುಮಾರ್‌ ಅವರನ್ನು ನರಹಂತಕ ವೀರಪ್ಪನ್‌ ಬಂಧನದಿಂದ ಬಿಡಿಸಿಕೊಂಡು ಬರಲು ಯಾವುದೇ ಹಣ ನೀಡಿಲ್ಲ" ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದರು. ಈ ಮಧ್ಯೆ ನಾಗಪ್ಪ ಹತ್ಯೆ ಪ್ರಕರಣವು ತಣ್ಣಗಾಗಿದ್ದರೂ 'ದಳ" ಆಡಳಿತಕ್ಕೆ ಬಂದರೆ ಎರಡು ಅಪಹರಣಗಳ ಸತ್ಯಾಸತ್ಯತೆ ಬಯಲಿಗೆಳೆಯುವುದಾಗಿ ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಸಿದ್ದರಾಮಯ್ಯ ಗುಡುಗಿದ್ದ ನ್ನು ಮರೆಯುವಂತಿಲ್ಲ.

    English summary
    karimlala telagi paid 30 crore for Dr. Rajkumars release from captivity - D.P Ojha, Retd. DGP, Bihar
    Thursday, July 11, 2013, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X