»   » ಹುಸೇನ್‌ಸಾಬರ ‘ಮೀನಾಕ್ಷಿ’ ತಬು

ಹುಸೇನ್‌ಸಾಬರ ‘ಮೀನಾಕ್ಷಿ’ ತಬು

Posted By: Super
Subscribe to Filmibeat Kannada
Tabu
ಎಂ.ಎಫ್‌. ಹುಸೇನ್‌ ಸಾಹೇಬರು ಮತ್ತೊಂದು ಕಲಾಕೃತಿಯಲ್ಲಿ ಮುಳುಗಿಹೋಗಿದ್ದಾರೆ.

ಹುಸೇನರನ್ನು ಆವರಿಸಿಕೊಂಡಿರುವುದು ಕುಂಚ ಪ್ರಪಂಚವಲ್ಲ ; ಚಿತ್ರ ಪ್ರಪಂಚ. 'ಗಜ ಗಾಮಿನಿ" ನಂತರ ಕೊಂಚ ಕಾಲ ಮೌನವಾಗಿದ್ದ ಹುಸೇನ್‌, ಆನಂತರದಲ್ಲಿ ಕೆಲವು ಸಿನಿ ಯೋಜನೆಗಳನ್ನು ಕೈಗೆತ್ತಿಕೊಂಡರೂ, ಯಾಕೋ ಏನೋ ಯಾವುದೂ ಕಾರ್ಯಗತವಾಗಲಿಲ್ಲ . ಹುಸೇನರ ಮುಂದಿನ ಚಿತ್ರದಲ್ಲಿ ಕನ್ನಡತಿ ಹಾಗೂ ಐಟಂ ಸಾಂಗ್‌ಗಳ ಪ್ರವೀಣೆ ರುಚಿತಾ ಪ್ರಸಾದ್‌ ನಟಿಸುತ್ತಾರೆ ಎನ್ನುವ ಸುದ್ದಿಯೂ ಇತ್ತು . ಆದರೆ ರುಚಿತಾ ಇಲ್ಲಿ ಸಲ್ಲಲಿಲ್ಲ ; ಅಲ್ಲಿಗೆ ಹೋಗಲಿಲ್ಲ .

ಹುಸೇನರ ಹೊಸಚಿತ್ರ ಹೆಚ್ಚೂಕಡಿಮೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ನಟಿಸಿರುವುದು ಮಾಯಗಾತಿ ಮಾಧುರಿಯಲ್ಲ ; ತಬು. ಚಿತ್ರದ ಹೆಸರು 'ಮೀನಾಕ್ಷಿ : ಟೇಲ್‌ ಆಫ್‌ 3 ಸಿಟೀಸ್‌ ".

ಮೀನಾಕ್ಷಿ ಕಾದಂಬರಿಕಾರನೊಬ್ಬನ ಸುತ್ತ ಸುತ್ತುವ ಕಥೆ. ಆತನ ಹೆಸರು ನವಾಬ್‌. ಇತ್ತೀಚೆಗೇಕೊ ಬರೆಯಲಿಕ್ಕೆ ಮೂಡೇ ಇಲ್ಲ ಎಂದು ಕೊರಗುತ್ತಿದ್ದಾನೆ. ಕಳೆದ 5 ವರ್ಷಗಳಿಂದಲೂ ಅಕ್ಷರ ಹುಟ್ಟುತ್ತಿಲ್ಲ . ಇಂಥಹ ಅಕ್ಷರ ಬರಗಾಲದ ಸಂದರ್ಭದಲ್ಲಿ ಚೆಲುವೆ ಮೀನಾಕ್ಷಿಯನ್ನು ನವಾಬ್‌ ಭೇಟಿ ಮಾಡುತ್ತಾನೆ. ಒಂದೊಂದೇ ಪರದೆ ಸರಿದಂತೆ, ಮೀನಾಕ್ಷಿ ಹತ್ತಿರವಾದಂತೆ- ನವಾಬ್‌ನಲ್ಲಿ ಸ್ಫೂರ್ತಿಯ ಸೆಲೆಯಾಡೆಯತೊಡಗುತ್ತದೆ. ಮತ್ತೆ ವಿರಹ, ದುಗುಡ, ಪ್ರೇಮ.... ಇವೆಲ್ಲವೂ ಇದ್ದುದೇ.

'ಮೀನಾಕ್ಷಿ : ಟೇಲ್‌ ಆಫ್‌ 3 ಸಿಟೀಸ್‌ " ಚಿತ್ರವನ್ನು ತಮ್ಮ ಪುತ್ರನ ಜೊತೆಗೂಡಿ ಪಾಲುಗಾರಿಕೆಯಲ್ಲಿ ಹುಸೇನ್‌ ನಿರ್ಮಿಸಿದ್ದಾರೆ. ಯಾವಾಗ ತೆರೆ ಕಾಣುತ್ತದೆಂದು ಗೊತ್ತಿಲ್ಲ .

ಈ ನಡುವೆ, ಮೀನಾಕ್ಷಿ ತೆರೆ ಕಾಣುವ ಮುನ್ನವೇ ಹುಸೇನರು ತಮ್ಮ ಮೂರನೇ ಚಿತ್ರದ ಸ್ಕೆಚ್‌ ಹಾಕುತ್ತಿದ್ದಾರೆ. ಇದು ಕಾಮಿಡಿ ಚಿತ್ರವಂತೆ. ಈ ಚಿತ್ರದ ನಾಯಕಿ ಊರ್ಮಿಳಾ ಮಾತೋಂಡ್ಕರ್‌. ಚಿತ್ರ ನಿರ್ಮಾಣ ನಿರ್ದೇಶನದ ಬಗ್ಗೆ ಹುಸೇನರ ಸಾಮರ್ಥ್ಯ ಎಂತಹುದೇ ಇರಲಿ, ನಾಯಕಿಯರ ಆಯ್ಕೆಯಲ್ಲಿ ಮಾತ್ರ ಅವರ ಅಭಿರುಚಿಗೆ ನೂರಕ್ಕೆ ನೂರು ಮಾರ್ಕ್ಸು.

English summary
After Gaja Gamini, painter-turned-director M F Husain is ready with this next film, Meenaxi: Tale Of 3 Cities

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada