»   » ಎಲ್ಲ ಪಕ್ಷಗಳೂ ನಂಗಿಷ್ಟ -ಶಿವಣ್ಣ

ಎಲ್ಲ ಪಕ್ಷಗಳೂ ನಂಗಿಷ್ಟ -ಶಿವಣ್ಣ

Posted By: Super
Subscribe to Filmibeat Kannada

ರಾಜಕೀಯ ಪ್ರವೇಶದ ಕುರಿತು ಮತ್ತೊಮ್ಮೆ ತಮ್ಮ ಅನಾಸಕ್ತಿಯನ್ನು ವ್ಯಕ್ತಪಡಿಸಿರುವ ಚಿತ್ರನಟ ಶಿವರಾಜ್‌ಕುಮಾರ್‌ ತಮಗೆ ಎಲ್ಲ ರಾಜಕೀಯ ಪಕ್ಷಗಳೂ ಇಷ್ಟ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷವನ್ನು ತಾವು ತೊರೆಯುತ್ತಿರುವ ವಿಷಯವನ್ನು ಪ್ರಕಟಿಸಲು ಕುಮಾರ್‌ ಬಂಗಾರಪ್ಪ ಫೆ.3ರಂದು ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಬಂಗಾರಪ್ಪ ಅವರ ಮನೆಯಲ್ಲಿ ಸುದ್ದಿಗಾರರ ಕಣ್ಣಿಗೆ ಬಿದ್ದ ಶಿವರಾಜ್‌- ತಾವು ರಾಜಕೀಯ ಸೇರುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರಾಜಕೀಯದ ಸಹವಾಸ ಬೇಡಪ್ಪಾ ಬೇಡ. ಎಲ್ಲ ಪಕ್ಷಗಳು ನನಗೆ ಇಷ್ಟವೇ. ಆದರೆ ಯಾವ ಪಕ್ಷದೊಂದಿಗೂ ಗುರ್ತಿಸಿಕೊಳ್ಳಲಾರೆ, ರಾಜಕೀಯವನ್ನು ಪ್ರವೇಶಿಸಲಾರೆ. ಸಿನಿಮಾದಲ್ಲೇ ಆರಾಮಾಗಿದ್ದೇನೆ. ಸಿನಿಮಾದಲ್ಲೇ ತೃಪ್ತಿ ಇದೆ ಶಿವರಾಜ್‌ ಹೇಳಿದರು.

ವರನಟ ರಾಜ್‌ಕುಮಾರ್‌ ಅವರು ಜನಪ್ರಿಯತೆಯ ತುತ್ತತುದಿಯಲ್ಲಿ ಇದ್ದಾಗಿನಿಂದಲೂ ಅವರನ್ನು ರಾಜಕೀಯಕ್ಕೆ ಸೆಳೆಯಲು ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಿವೆ. ಆದರೆ ರಾಜಕಾರಣದಿಂದ ರಾಜ್‌ ದೂರವೇ ಉಳಿದಿದ್ದಾರೆ. ಅವರ ಕುಟುಂಬದ ಸದಸ್ಯರು ಕೂಡ ರಾಜಕಾರಣದಿಂದ ದೂರವೇ ಉಳಿದಿರುವುದು ವಿಶೇಷ.

(ಇನ್ಫೋ ವಾರ್ತೆ)

English summary
'I love all Political parties'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada