»   » ಖಳನಟ ಸಾರ್ವಭೌಮರಾದ ಶೋಭರಾಜ್‌ ಗೃಹಸ್ಥರಾದರು!

ಖಳನಟ ಸಾರ್ವಭೌಮರಾದ ಶೋಭರಾಜ್‌ ಗೃಹಸ್ಥರಾದರು!

Subscribe to Filmibeat Kannada

ಬೆಳ್ಳಿ ಪರದೆಯೇ ಕಂಪಿಸುವಂತೆ, ಸಿನಿಮಾಗಳಲ್ಲಿ ಆರ್ಭಟಿಸುವ ಖಳನಟ ಶೋಭರಾಜ್‌ ಸದ್ದಿಲ್ಲದೇ ಮದುವೆಯಾಗಿದ್ದಾರೆ. ದಾಂಪತ್ಯದ ರಸಮಯ ಅನುಭವ ಸವಿಯಲು ಅಣಿಯಾಗಿದ್ದಾರೆ.

ಇತ್ತೀಚೆಗಷ್ಟೇ ಕುಸುಮಾರನ್ನು ಕೈಹಿಡಿದಿರುವ ಶೋಭರಾಜ್‌ ಅವರ ಮದುವೆ ಆರತಕ್ಷತೆ ಕಾರ್ಯಕ್ರಮ ಶನಿವಾರ(ಮಾ.4) ನಡೆಯಲಿದೆ. ಜಯನಗರದ ನಾಲ್ಕನೇ ಟಿ-ಬ್ಲಾಕ್‌ನಲ್ಲಿರುವ ಜಿಎನ್‌ಆರ್‌ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಆರತಕ್ಷತೆಯಲ್ಲಿ ಚಿತ್ರರಂಗದ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆಗಳಿವೆ.

ಹೀರೋಗಿರಬೇಕಾದ ಆಕರ್ಷಕ ಮೈಕಟ್ಟು ಇದ್ದರೂ ಕೂಡ, ಶೋಭರಾಜ್‌ ವಿಲನ್‌ ಆಗಿಯೇ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಖಳನಾಯಕನಾದರೂ, ನಾಯಕನಷ್ಟೇ ಜನಪ್ರಿಯತೆ ಗಳಿಸಿದ್ದು, ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಕಳೆದ ಹದಿನೈದು ವರ್ಷಗಳ ತಮ್ಮ ಬಣ್ಣದ ಬದುಕಿನಲ್ಲಿ 150ಚಿತ್ರಗಳಲ್ಲಿ ಶೋಭರಾಜ್‌ ನಟಿಸಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ಪಡೆದಿದ್ದಾರೆ.

ಶೋಭರಾಜ್‌ ಅಂದ್ರೆ ‘ಪೊಲೀಸ್‌ ಸ್ಟೋರಿ’ ಚಿತ್ರದ ಚಾರ್ಲ್ಸ್‌ ಶೋಭರಾಜ್‌ ಪಾತ್ರ ಕಣ್ಮುಂದೆ ಸುಳಿಯುತ್ತದೆ. ದುಷ್ಟತನ, ಕ್ರೌರ್ಯ, ಅಹಂಕಾರ, ಮತ್ಸರದ ಪಾತ್ರಗಳಿಗೆ ಜೀವತುಂಬುವ ಶೋಭರಾಜ್‌ ತೆರೆಯಾಚೆ ಸಭ್ಯ ನಟ. ಅವರ ವೈವಾಹಿಕ ಬದುಕು ಹಾಲುಜೇನು ಬೆರೆದಂತೆ ಸವಿಯಾಗಿರಲಿ ಎಂದು ದಟ್ಸ್‌ಕನ್ನಡ ಹಾರೈಸುತ್ತದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada