»   » ಮಾಲಾಶ್ರೀ ಬೇಡ ಅನ್ನಬೇಡಿ ಆಯಮ್ಮ ಈಗ ‘ಕಿರಣ್‌ ಬೇಡಿ’

ಮಾಲಾಶ್ರೀ ಬೇಡ ಅನ್ನಬೇಡಿ ಆಯಮ್ಮ ಈಗ ‘ಕಿರಣ್‌ ಬೇಡಿ’

Subscribe to Filmibeat Kannada

ರಾಮು ಎಂಟರ್‌ಪ್ರೆೃಸಸ್‌ನ ಮೆಗಾ ಚಿತ್ರಗಳಾದ ಲಾಕಪ್‌ ಡೆತ್‌. ಸಿಂಹದ ಮರಿ, ಎಕೆ 47, ಕಲಾಸಿಪಾಳ್ಯ ಚಿತ್ರಗಳ ನಿರ್ದೇಶಕ ಓಂಪ್ರಕಾಶ್‌, ಈ ಹೊಸ ಚಿತ್ರದ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಎಸ್ಪಿ ಭಾರ್ಗವಿ, ದುರ್ಗಿ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಪೊಲೀಸ್‌ ಪಾತ್ರದಲ್ಲಿ ಮಿಂಚಿದ್ದ ಮಾಲಾಶ್ರೀ ಈ ಸಲ ಮತ್ತೆ ಖಾಕಿ ಧರಿಸಲಿದ್ದಾರೆ.

ಕಿರಣ್‌ ಬೇಡಿ ಅವರ ಜೀವನಚರಿತ್ರೆಯನ್ನು ಈ ಚಿತ್ರ ಆಧರಿಸಿದೆ. ಚಿತ್ರೀಕರಣ ಮೇ ತಿಂಗಳಲ್ಲಿ ಆರಂಭಗೊಳ್ಳಲಿದೆ. ಮಾಲಾಶ್ರೀ ಚಿತ್ರದ ಪರಿಣಾಮ ದರ್ಶನ್‌ ಅಭಿನಯದ, ರಾಮು ನಿರ್ಮಾಣದ ‘ಮಾಸ್ತಿ’ ಚಿತ್ರ ಮುಂದಕ್ಕೆ ಹೋಗಿದೆ.

ಪ್ರೀತಿಯ ಗಂಡ ರಾಮು, ಮಗಳು ಅನನ್ಯ, ಮಗ ಆರ್ಯ ಜೊತೆ ಮಾಲಾಶ್ರೀ ಅವರದು ‘ಗಂಡ-ಮನೆ-ಮಕ್ಕಳು’ ಎನ್ನುವಂತಹ ಸುಖಿ ಕುಟುಂಬ. ಗ್ಲಾಮರ್‌ ಪಾತ್ರಗಳ ಅಧ್ಯಾಯ ಮುಗಿಯಿದು ಎನಿಸುತ್ತಿದ್ದಂತೆಯೇ ಹೊಡಿಬಡಿ ಪಾತ್ರಗಳ ಮೂಲಕ ಕರ್ನಾಟಕದ ವಿಜಯಶಾಂತಿಯಾಗಲು ಮಾಲಾಶ್ರೀ ಪ್ರಯತ್ನಿಸಿ, ತುಸು ಯಶಸ್ಸನ್ನೂ ಪಡೆದವರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada