»   » ಅಪಘಾತಕ್ಕೆ ಅಂಬರೀಷ್‌ ಬೇಜವಾಬ್ದಾರಿ ಕಾರಣವೇ?

ಅಪಘಾತಕ್ಕೆ ಅಂಬರೀಷ್‌ ಬೇಜವಾಬ್ದಾರಿ ಕಾರಣವೇ?

Posted By:
Subscribe to Filmibeat Kannada


ಬೆಂಗಳೂರು : ರಸ್ತೆ ಅಪಘಾತದಲ್ಲಿ ಆಶ್ಚರ್ಯಕರವಾಗಿ ನಟ ಅಂಬರೀಷ್‌, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತಕ್ಕೆ ಸ್ಪಷ್ಪ ಕಾರಣಗಳು ಈವರೆಗೆ ತಿಳಿದು ಬಂದಿಲ್ಲ.

ಮಂಗಳವಾರ ರಾತ್ರಿ 10ರ ಸುಮಾರಿನಲ್ಲಿ ಅಪಘಾತ ಸಂಭವಿಸಿದೆ. ಅತಿವೇಗದಿಂದ ಬಂದ ಅಂಬರೀಷ್‌ರ ಟೊಯೋಟಾ ಪ್ರಾಡೋ ಕಾರು, ಕಾವೇರಿ ಜಂಕ್ಷನ್‌ ಬಳಿ ರಮಣ ಮಹರ್ಷಿ ರಸ್ತೆ ವಿಭಜಕ ಹತ್ತಿ ಅಪಘಾತಕ್ಕೀಡಾಯಿತು. ಅಂಬರೀಷ್‌ ಕಾರಿನಿಂದ ಕೆಳಕ್ಕೆ ಬಿದ್ದರು. ಕ್ರೇನ್‌ ಸಹಾಯದಿಂದ ಕಾರನ್ನು ರಸ್ತೆಯಿಂದ ತೆರವುಗೊಳಿಸಲಾಯಿತು.

ಅಂದ ಹಾಗೆ, ಅಂಬರೀಷ್‌ ಕಾರಿನ ಡ್ರೆೃವಿಂಗ್‌ ಮಾಡುತ್ತಿದ್ದರು. ಡ್ರೆೃವಿಂಗ್‌ ಮಾಡುತ್ತಲೇ ಮೊಬೈಲ್‌ ಕರೆ ಸ್ವೀಕರಿಸಲು ಯತ್ನಿಸಿದಾಗ, ಹಿಡಿತ ತಪ್ಪಿ ಅಪಘಾತವಾಯಿತು ಎನ್ನಲಾಗಿದೆ. ಅಪಘಾತದ ನಂತರ ಇದೇ ರಸ್ತೆಯಲ್ಲಿ ಬರುತ್ತಿದ್ದ ಸ್ನೇಹಿತರ ಕಾರಿನಲ್ಲಿ, ಅಂಬರೀಷ್‌ ಮನೆಗೆ ತೆರಳಿದರು.

ಕಾರಿನ ಮುಂಭಾಗದ ಎಡ ಚಕ್ರ ಪಂಕ್ಚರ್‌ ಆಗಿತ್ತು. ಇದು ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada