»   » ಅನುಗೆ ಆ್ಯಕ್ಷನ್‌-ಕಟ್‌ ಹೇಳುವ ಬಯಕೆ

ಅನುಗೆ ಆ್ಯಕ್ಷನ್‌-ಕಟ್‌ ಹೇಳುವ ಬಯಕೆ

Posted By:
Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ ಕನ್ನಡ
ಮದುವೆಯಾದ ನಂತರ ನಟಿಮಣಿಯರು ಮನೆ ಸೇರುತ್ತಾರೆ. ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಿದ್ದ ನಟಿಯರು ಸದ್ದಿಲ್ಲದೇ ಕಣ್ಮರೆಯಾಗುತ್ತಾರೆ. ಆದರೂ ಬಣ್ಣ ಹಚ್ಚುವ ಅಭಿಲಾಷೆ ಸಹಜವಾಗಿಯೇ ಮನದಲ್ಲಿರುತ್ತದೆ ಎಂಬ ಮಾತಿಗೆ ಅನು ಪ್ರಭಾಕರ್‌ ಉದಾಹರಣೆ.

ಅನು ಅವರಿಗೆ ನಟನೆಯ ಜೊತೆಗೆ ಚಿತ್ರ ನಿರ್ದೇಶಿಸುವ ಕನಸೂ ಇದೆಯಂತೆ. ಇತ್ತೀಚೆಗೆ ವಿಜಯನಗರದಲ್ಲಿ ನಡೆದ ಮಕ್ಕಳ ಕಟಕಟೆ ಕಾರ್ಯಕ್ರಮದಲ್ಲಿ ಅವರೇ ಈ ಬಗ್ಗೆ ಬಾಯಿಬಿಟ್ಟು ಹೇಳಿದ್ದಾರೆ. ಜಯಮಾಲಾ, ಆರತಿಯಂತೆಯೇ ಮಕ್ಕಳ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಿ, ನಿರ್ದೇಶಿಸುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.

ಮಕ್ಕಳ ಕಟಕಟೆಯಲ್ಲಿ ಕಣ್ಣುಗಳನ್ನು ಅರಳಿಸಿಕೊಂಡು ಮಾತಾಡುತ್ತಿದ್ದ ಅವರಿಗೆ ತಮ್ಮ ಅತ್ತೆ ಜಯಂತಿ ಅವರ ಜೊತೆ ಚುನಾವಣಾ ಪ್ರಚಾರಕ್ಕೆ ಹೋಗುವುದೆಂದರೆ ಖುಷಿಯಂತೆ. ತಾವು ಪ್ರೀತಿಸಿ ಮದುವೆಯಾದ ಗಂಡನನ್ನು ಪ್ರೀತಿಯಿಂದಲೇ ಕೇಕ್‌ ಎಂದು ಕರೆಯುವುದು ತಮಾಷೆಯಂತೆ! ಅವರ ಪತಿ ದೇವರ ಹೆಸರು ಕೃಷ್ಣಕುಮಾರ್‌!

ಗಾಯತ್ರಿ ಪ್ರಭಾಕರ್‌ ಅಕ್ಕರೆಯಲ್ಲಿ ಬೆಳೆದು, ನಟಿ ಜಯಂತಿ ಅವರ ಸೊಸೆಯಾಗಿರುವ ಅನು ವೈವಾಹಿಕ ಬದುಕಿನಲ್ಲಿ ನೆಮ್ಮದಿ ಕಂಡಿದ್ದಾರೆ. ಮೊದಲ ಚಿತ್ರದಲ್ಲಿಯೋ ಪ್ರೇಕ್ಷಕರ ಗಮನ ಸೆಳೆದ ಅನು ಪ್ರತಿಭಾವಂತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಮದುವೆ ನಂತರವೂ ಚಿತ್ರಗಳಲ್ಲಿ ನಟಿಸಲು ಅವರು ಸಿದ್ಧರಿದ್ದರು. ಆದರೆ ಅವರನ್ನು ತೆರೆಯ ಮೇಲೆ ಕಾಣಲು ಅಭಿಮಾನಿಗಳು ಸಿದ್ಧರಿಲ್ಲ. ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದಲ್ಲಿ ಮೈ ಚಳಿ ಬಿಟ್ಟು ಕುಣಿದರೂ ಅವರಿಗೆ ಪ್ರಯೋಜನವಾಗಲಿಲ್ಲ!

ತಮ್ಮ ಐದು ವರ್ಷಗಳ ಚಿತ್ರರಂಗದ ಅನುಭವವನ್ನೇ ಬಂಡವಾಳವಾಗಿಸಿಕೊಂಡು ಆ್ಯಕ್ಷನ್‌-ಕಟ್‌ ಹೇಳಲು ಅನು ಕನಸುಕಂಡಿದ್ದಾರೆ. ಕನಸು ನನಸಾಗಲಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada