»   » ‘ಸೌಂದರ್ಯ’ದಲ್ಲಿ ಬಳುಕುವ ಕಾಲ್ಗಳ ಸಾಕ್ಷಿ ಶಿವಾನಂದ್‌!

‘ಸೌಂದರ್ಯ’ದಲ್ಲಿ ಬಳುಕುವ ಕಾಲ್ಗಳ ಸಾಕ್ಷಿ ಶಿವಾನಂದ್‌!

Subscribe to Filmibeat Kannada


‘ಗಲಾಟೆ ಅಳಿಯಂದ್ರು’, ‘ಸೈನಿಕ’, ‘ತಂದೆಗೆ ತಕ್ಕ ಮಗ’ ಚಿತ್ರಗಳಲ್ಲಿ ಸಾಕ್ಷಿ ಶಿವಾನಂದ್‌ ನಟಿಸಿದ್ದರೂ, ಸ್ಯಾಂಡಲ್‌ವುಡ್‌ ಮಣೆ ಹಾಕಲಿಲ್ಲ. ಬಳುಕುವ ಕಾಲುಗಳಿಗೆ ಇಲ್ಲಿ ನೆಲೆ ನೀಡಲಿಲ್ಲ. ಆದರೂ ಪರವಾಗಿಲ್ಲ... ಇನ್ನೊಂದು ಸಲ ಬಳುಕುತ್ತೇನೆ ಎಂಬಂತೆ ಸಾಕ್ಷಿ ಗಲ್ಲ ಉಬ್ಬಿಸಿ ನಿಂತಿದ್ದಾಳೆ.

ಸಾಕ್ಷಿ ಮತ್ತು ರಮೇಶ್‌ ಜೋಡಿಯ ಈ ಚಿತ್ರದ ಹೆಸರು ‘ಸೌಂದರ್ಯ’. ಸೌಂದರ್ಯ ಎಂದ ತಕ್ಷಣ ಅಂಗಪ್ರದರ್ಶನ-ಮಾಡೆಲಿಂಗ್‌ ಜಗತ್ತು ಮೊದಲಾದ ಚಿತ್ರಣ ಕಣ್ಮುಂದೆ ಬರಬಹುದು...! ಆದರೆ ‘ಸೌಂದರ್ಯ’ ಸಿನಿಬದುಕು ಮತ್ತು ಬೆಂಗಳೂರಿನ ಮೇಲೆ ಬೆಳಕು ಚೆಲ್ಲುತ್ತದೆ ಎನ್ನುತ್ತಾರೆ ನಿರ್ದೇಶಕ ಚೆನ್ನಗಂಗಪ್ಪ.

ಬುದ್ಧಿವಂತ ಹಾಗೂ ಪ್ರಾಮಾಣಿಕ ಕೆಎಎಸ್‌ ಅಧಿಕಾರಿ ಎನಿಸಿಕೊಂಡಿರುವ ಚೆನ್ನಗಂಗಪ್ಪ ಅವರಿಗೆ ಇದು ಮೂರನೇ ಚಿತ್ರ. ಈ ಮೊದಲು ‘ಕರಿಮಲೆಯ ಕಗ್ಗತ್ತಲು’ ಹಾಗೂ ‘ನನ್ನಾಸೆಯ ಹೂವೆ’ ಎಂಬ ಚಿತ್ರಗಳನ್ನು ಅವರು ನಿರ್ದೇಶಿಸಿದ್ದ ಸಂಗತಿಯನ್ನು ಇಲ್ಲಿ ನೆನಪು ಮಾಡಬೇಕು. ಏಕೆಂದರೆ ಎರಡೂ ಚಿತ್ರಗಳೂ ಸಾಮಾನ್ಯ ಪ್ರೇಕ್ಷಕರಿಗೆ ಗೊತ್ತಿರಲಿಕ್ಕಿಲ್ಲ!

ಚಿತ್ರದ ನಾಯಕರಾಗಿ ಆಯ್ಕೆಗೊಂಡಿರುವ ನಟ ರಮೇಶ್‌, ಚಿತ್ರದ ಬಗ್ಗೆ ಖುಷಿಯಲ್ಲಿದ್ದಾರೆ. ಇದು ‘ಅಮೃತವರ್ಷಿಣಿ’ ನಂತರ ನನಗೆ ಸಿಗುತ್ತಿರುವ ಮತ್ತೊಂದು ಅತ್ಯುತ್ತಮ ಪಾತ್ರ ಎಂದು ರಮೇಶ್‌ ಎಂದಿನಂತೆಯೇ ಡೈಲಾಗ್‌ ಉದುರಿಸಿದ್ದಾರೆ.

‘ಗಲಾಟೆ ಅಳಿಯಂದ್ರು’, ‘ಸೈನಿಕ’, ‘ತಂದೆಗೆ ತಕ್ಕ ಮಗ’ ಚಿತ್ರಗಳಲ್ಲಿ ಸಾಕ್ಷಿ ಶಿವಾನಂದ್‌ ನಟಿಸಿದ್ದರೂ, ಸ್ಯಾಂಡಲ್‌ವುಡ್‌ ಮಣೆ ಹಾಕಲಿಲ್ಲ. ಬಳುಕುವ ಕಾಲುಗಳಿಗೆ ಇಲ್ಲಿ ನೆಲೆ ನೀಡಲಿಲ್ಲ. ಆದರೂ ಪರವಾಗಿಲ್ಲ... ಇನ್ನೊಂದು ಸಲ ಬಳುಕುತ್ತೇನೆ ಎಂಬಂತೆ ಸಾಕ್ಷಿ ಮತ್ತೆ ಕನ್ನಡಕ್ಕೆ ಬಂದಿದ್ದಾಳೆ.

ಜಿ.ವಿ.ಅಯ್ಯರ್‌ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯ ಹೊಣೆಯೂ ಚೆನ್ನಗಂಗಪ್ಪ ಅವರದೇ. ಭ್ರಷ್ಟ ಆಡಳಿತ, ಭ್ರಷ್ಟ ವ್ಯವಸ್ಥೆ, ಭ್ರಷ್ಟ ಪರಿಸರದಲ್ಲಿ ಸರಳ-ಸಾಮಾನ್ಯ ಕುಟುಂಬವೊಂದರಲ್ಲಿನ ಮೌಲ್ಯಗಳು ಹೇಗೆ ಕುಸಿಯುತ್ತವೆ ಎಂಬುದು ಚಿತ್ರದ ವಸ್ತು.

ಗಣಪತಿ ಪ್ರಭು(ಧರ್ಮಸ್ಥಳ), ಡಿ.ರಾಮಚಂದ್ರ, ಆರ್‌.ಗೋವಿಂದರಾಜು ಹಾಗೂ ಎಚ್‌.ಜಿ.ರಾಘವೇಂದ್ರ(ಕೆಂಗೇರಿ) ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹಂಸಲೇಖ ಸಾಹಿತ್ಯ ಹಾಗೂ ಸಂಗೀತವಿದ್ದು, ಆರ್‌.ಗಿರಿ ಛಾಯಾಗ್ರಹಣವಿದೆ. ಬೇಬಿ ಶ್ರೇಯಾ, ಅವಿನಾಶ್‌ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada