»   » ರಾಜ್‌ ಹೆಸರಿನ ಹಿಂಸಾಚಾರದಲ್ಲಿ ರಾಜಕೀಯ ಕೈವಾಡ?

ರಾಜ್‌ ಹೆಸರಿನ ಹಿಂಸಾಚಾರದಲ್ಲಿ ರಾಜಕೀಯ ಕೈವಾಡ?

Subscribe to Filmibeat Kannada

ಬೆಂಗಳೂರು : ಡಾ.ರಾಜ್‌ಕುಮಾರ್‌ ನಿಧನದ ಸಂದರ್ಭದಲ್ಲಿ ನಗರದಲ್ಲಿ ನಡೆದ ಹಿಂಸಾಚಾರದಲ್ಲಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರೂ ಪಾಲ್ಗೊಂಡಿದ್ದರೆಂಬ ಸಂಗತಿಯನ್ನು ಪೊಲೀಸರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಪೊಲೀಸ್‌ ಆಯುಕ್ತ ಡಾ.ಅಜಯಕುಮಾರ್‌ ಸಿಂಗ್‌, ಹಿಂಸಾಚಾರಕ್ಕೆ ರಾಜ್‌ ಅಭಿಮಾನಿಗಳ ಭಾವೋದ್ವೇಗವೊಂದೇ ಕಾರಣವಲ್ಲ. ತನಿಖೆಯ ಮೂಲಕ ಅನೇಕ ಕಾರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ 742 ಮಂದಿಯನ್ನು ಬಂಧಿಸಲಾಗಿತ್ತು. ಅವರಲ್ಲಿ 306 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಛಾಯಾಚಿತ್ರಗಳು ಮತ್ತು ಮಾಧ್ಯಮಗಳ ವಿಡಿಯೋ ತುಣುಕುಗಳ ಮೂಲಕ, ಹಿಂಸಾಕೃತ್ಯಗಳಲ್ಲಿ ಭಾಗಿಯಾಗಿದ್ದ 103 ಮಂದಿಯನ್ನು ಗುರುತಿಸಲಾಗಿದೆ ಎಂದು ಹೇಳಿದರು.

ಪೊಲೀಸ್‌ ಪೇದೆ ಮಂಜುನಾಥ್‌ ಮಲ್ಲಾಡಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ಬಂಧಿಸಲ್ಪಟ್ಟಿರುವ ವ್ಯಕ್ತಿಗಳಲ್ಲಿ 20ಮಂದಿ, ಈಗಾಗಲೇ ವಿವಿಧ ಅಪರಾಧ ಪ್ರಕರಣಗಳಲ್ಲಿ ಗುರ್ತಿಸಿಕೊಂಡಿದ್ದವರು ಎಂದು ಅಜಯಕುಮಾರ್‌ ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada