»   » ತುಂಬಾ ಜನ ಸಲ್ಲೂನ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ

ತುಂಬಾ ಜನ ಸಲ್ಲೂನ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ

Posted By: Staff
Subscribe to Filmibeat Kannada

ಬಿವಿ ನಂಬರ್‌ ಒನ್‌ ಎಂಬ ಹಿಂದಿ ಚಿತ್ರ ತೆರೆ ಕಂಡಾಗಲೇ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌ ಮತ್ತು ಸಲ್ಮಾನ್‌ ಖಾನ್‌ ಸಂಬಂಧದ ಬಗ್ಗೆ ಗುಸುಗುಸು ಶುರುವಾಗಿತ್ತು. ಆದರೆ, ಸಲ್ಲು ಐಶ್ವರ್ಯ ರೈಗಾಗಿ ಜೊಲ್ಲು ಸುರಿಸತೊಡಗಿದಾಗ ಎದ್ದಿದ್ದು ಹಲ್ಲಾಗುಲ್ಲು. ಮನಸಿನ ಮೂಲೆ ಮೂಲೆಯಲ್ಲೂ ಐಶ್ವರ್ಯಳನ್ನೇ ತುಂಬಿಕೊಂಡ ಸಲ್ಲು ದೇವದಾಸನಂತಾದ. ಕೊನೆಗೆ ಹತಾಶೆ ಕೋಪಕ್ಕೆ ತಿರುಗಿ ಐಸ್‌ ತರಹದ ಐಶ್‌ಳನ್ನು ಗೋಳು ಹೊಯ್ದುಕೊಳ್ಳುವ ಗೊಡವೆಗೂ ಹೋದ. ದೂರು ಪೊಲೀಸ್‌ ಸ್ಟೇಷನ್ನಿನವರೆಗೂ ಹೋಯಿತು. ವಿಚಾರಣೆ ನಡೆದು, ಹಂಗೂಹಿಂಗೂ ಐಶ್ವರ್ಯ ಹಿಂದೋಡುವುದನ್ನು ಸಲ್ಲು ಬಿಟ್ಟಾಯಿತು.

ತಲೆ ಬೋಳಿಸಿಕೊಳ್ಳುವುದರ ಮೂಲಕ ಹೊಸ ಜೀವನ ಶುರುಮಾಡಿದ ಸಲ್ಲು ಈಗ ಸಿನಿಮಾಗಿಂತ ಥಮ್ಸ್‌ ಅಪ್‌ ಜಾಹೀರಾತುಗಳ ಶೂಟಿಂಗ್‌ನಲ್ಲೇ ಬ್ಯುಸಿ. ಬಿಡುವಾಗಿರುವ ನಟಿ ಕಂ ಮಾಡೆಲ್‌ ಸುಶ್ಮಿತಾ ಸೇನ್‌ ಈತನ ಜಾಹೀರಾತು ಚಿತ್ರಗಳ ಸಾಥಿ. ಕೆಲವೇ ತಿಂಗಳುಗಳು ಕಳೆದಿವೆ ಅಷ್ಟೇ, ವೋ ಮೇರೀ ಜೀವನ್‌ ಸಾಥಿ ಅಂತ ಆಪ್ತರ ಹತ್ತಿರ ಹೇಳಿಕೊಳ್ಳಲು ಶುರುವಿಟ್ಟಿದ್ದಾಳಂತೆ ಸುಶ್‌ !

ಸಲ್ಲು ಬಗ್ಗೆ ಸುಶ್‌ ಆಡಿರುವ ಪ್ರಶಂಸೆಯ ಮಾತುಗಳು....

ಸಿನಿಮಾ ಮಂದಿಗೆ ಸಲ್ಮಾನ್‌ ಪೂರ್ಣವಾಗಿ ಅರ್ಥವಾಗಿಲ್ಲ. ಯಾಕೆಂದರೆ, ಯಾರೂ ಆತನನ್ನು ಅರ್ಥ ಮಾಡಿಕೊಳ್ಳುವ ಗೊಡವೆಗೇ ಹೋಗಿಲ್ಲ. ಆತ ಹೃದಯ ಶ್ರೀಮಂತ. ಆತನ ಸಂಗ ತಂಪೆನಿಸುವಂತಿರುತ್ತದೆ. ಈಗ ಆತ ತುಂಟಾಟಗಳಿಂದಲೂ ಮುಕ್ತ. ಐಶ್ವರ್ಯ ರೈ ಪ್ರಕರಣ ಮುಗಿದ ಅಧ್ಯಾಯ. ಅದರಿಂದ ಸಲ್ಮಾನ್‌ ಸಾಕಷ್ಟು ಪಾಠ ಕಲಿತದ್ದಾಗಿದೆ. ಇನ್ನೇನಿದ್ದರೂ ಸಾಧನೆಯ ಹಾದಿಯಲ್ಲಿ ಆತನ ಪಯಣ. ಸಲ್ಮಾನ್‌ ಥರದ ವ್ಯಕ್ತಿಯನ್ನು ಬಾಳ ಸಂಗಾತಿಯಾಗಿಸಿಕೊಳ್ಳುವವರು ಅದೃಷ್ಟವಂತರು. ಐ ಲೈಕ್‌ ಹಿಂ ವೆರಿ ಮಚ್‌ !

English summary
Is Sushmita Sen in love with Salman?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada