»   » ಸಿನಿಮಾಗಿಂತ ಟೀವಿ ಜನರಿಗೆ ಹೆಚ್ಚು ಹತ್ತಿರ

ಸಿನಿಮಾಗಿಂತ ಟೀವಿ ಜನರಿಗೆ ಹೆಚ್ಚು ಹತ್ತಿರ

Posted By: Staff
Subscribe to Filmibeat Kannada

ತಾರಾ ಪತ್ರಕರ್ತರ ಮೇಲಷ್ಟೇ ಅಲ್ಲ , ಟೀವಿ ಚಾನಲ್‌ಗಳ ಮೇಲೂ ಮುನಿಸಿಕೊಳ್ಳುತ್ತಾರೆ!
ಆದರೆ, ತಾರಾ ಮುನಿಸು ಶಾಶ್ವತವಲ್ಲ . ಅದು ಮುಂಜಾನೆಯ ಮಂಜಿನಂತೆ. ಏನೂ ಆಗಿಯೇ ಇಲ್ಲವೆನ್ನುವಂತೆ ತಾರಾ ಮತ್ತೆ ಮಾತಿಗಿಳಿಯುತ್ತಾರೆ. ಜಗಳವಾಡಿರುವುದು ನಿಮಗೆ ನೆನಪಿದ್ದರೂ ತಾರಾಗೆ ನೆನಪಿರುವುದಿಲ್ಲ ; ಪಕ್ಕದ್ಮನೆ ಹುಡುಗಿಯ ಹಾಗೆ!

ತಾರಾ ಮುನಿಸು ತೀರಿದ ಹೊಸ ಉದಾಹರಣೆ 'ಈ ಟೀವಿ!"
'ಸರೋಜಿನಿ" ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದಲೋ ಏನೋ ತಾರಾಗೆ ಈಟೀವಿ ಮೇಲೆ ಅಸಮಾಧಾನವಿತ್ತು . ಆ ಕಾರಣದಿಂದಲೇ ಅವರು ಅವಕಾಶ ಮನೆ ಬಾಗಿಲಿಗೆ ಬಂದಾಗಲೂ ಟೀವಿ ಧಾರಾವಾಹಿಗಳಲ್ಲಿ ನಟಿಸಲು ಒಲ್ಲೆ ಅಂದರು. ಆದರೀಗ ಹೊಸ ಟೀವಿ ಧಾರಾವಾಹಿಯಾಂದರಲ್ಲಿ ತಾರಾ ನಟಿಸುತ್ತಿದ್ದಾರೆ. ಅದರ ಹೆಸರು 'ಪರ್ವ." ಅದು ಈಟೀವಿಯಲ್ಲಿ ಪ್ರಸಾರವಾಗಲಿದೆ.

ಇದಕ್ಕೂ ಮುನ್ನ ತಾರಾ 'ಚಿಗುರು" ಹಾಗೂ 'ಸರೋಜಿನಿ" ಎನ್ನುವ ಎರಡು ಟೀವಿ ಧಾರಾವಾಹಿಗಳಲ್ಲಿ ನಟಿಸಿದ್ದರು. ತಾರಾನೇ ಹೇಳುವಂತೆ- ಈ ಎರಡು ಪಾತ್ರಗಳು ಅವರಿಗೆ ಸಿನಿಮಾಕ್ಕಿಂಥ ಹೆಚ್ಚು ಜನಪ್ರಿಯತೆ ತಂದುಕೊಟ್ಟವು. 'ಸರೋಜಿನಿ" ಧಾರಾವಾಹಿ ಪ್ರಸಾರವಾಗುತ್ತಿದ್ದಾಗ, ಜನ ನನ್ನನ್ನು ಸರೋಜಿನಿ ಅಂತಲೇ ಕರೆಯುತ್ತಿದ್ದರು. ಈ ರೀತಿ ಯಾವ ಸಿನಿಮಾದ ಪಾತ್ರದಿಂದಲೂ ನನ್ನನ್ನು ಜನ ಗುರ್ತಿಸಿದ್ದಿಲ್ಲ ಅನ್ನುತ್ತಾರೆ ತಾರಾ. ಅಲ್ಲಿಗೆ ತಾರಾ ಮನೆ ಮನೆ ಮಗಳು!

'ಕಾರ್ಮುಗಿಲು" ಎನ್ನುವ ಕಾದಂಬರಿ ಆಧಾರಿತ ಸಿನಿಮಾದಲ್ಲೂ ತಾರಾ ನಟಿಸುತ್ತಿದ್ದಾರೆ. ಅದು ವಿವಾಹಿತೆಯ ಪ್ರೇಮ ಪ್ರಸಂಗದ ಕಥೆ. ಎಂಥ ವಿಭಿನ್ನ ಪಾತ್ರವಲ್ಲವಾ? ಎಂದು ಕಣ್ಣರಳಿಸುತ್ತಾರೆ ತಾರಾ.

English summary
Tara to act in ETvs serial Parva
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada