»   » ಅಂತೂ ಡಾ.ರಾಜ್ ಪ್ರತಿಷ್ಠಾನ ರೂಪುಗೊಂಡಿತು!ಮುಂದೆ?

ಅಂತೂ ಡಾ.ರಾಜ್ ಪ್ರತಿಷ್ಠಾನ ರೂಪುಗೊಂಡಿತು!ಮುಂದೆ?

Subscribe to Filmibeat Kannada


ಬೆಂಗಳೂರು : ರಾಜ್ಯ ಸರ್ಕಾರ ಡಾ.ರಾಜ್‌ಕುಮಾರ್ ಪ್ರತಿಷ್ಠಾನಕ್ಕೆ ಚಾಲನೆ ನೀಡಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಪ್ರತಿಷ್ಠಾನದಲ್ಲಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಪ್ರತಿಷ್ಠಾನದ ಸದಸ್ಯರು.ಕಂಠೀರವ ಸ್ಟುಡಿಯೋದ ಕಾರ್ಯನಿರ್ವಾಹಕ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ದೇಶಕರು ಸೇರಿದಂತೆ ಮತ್ತಿತರರು ಪ್ರತಿಷ್ಠಾನದ ಸದಸ್ಯರು.

ರಾಜ್‌ಕುಮಾರ್ ಸ್ಮಾರಕ ನಿರ್ಮಾಣ, ಪ್ರತಿಷ್ಠಾನದ ಪ್ರಮುಖ ಉದ್ದೇಶ. ಯೋಗ ಕೇಂದ್ರ, ಸಭಾಂಗಣ, ಮ್ಯೂಸಿಯಂಗಳನ್ನು ಸ್ಮಾರಕ ಒಳಗೊಂಡಿರುತ್ತದೆ. ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ. ಈ ಕಾರ್ಯಕ್ಕಾಗಿ 5 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...