»   » ಪ್ರಜ್ವಲ್ ಜೊತೆ ಕುಣಿದ ರಾಖಿ , ತನ್ನ ಬಗ್ಗೆ ಹೇಳಿದ್ದು ಹೀಗೆ...

ಪ್ರಜ್ವಲ್ ಜೊತೆ ಕುಣಿದ ರಾಖಿ , ತನ್ನ ಬಗ್ಗೆ ಹೇಳಿದ್ದು ಹೀಗೆ...

Posted By: Staff
Subscribe to Filmibeat Kannada

ರಾಕ್‌ಲೈನ್ ಸ್ಟುಡಿಯೋ ಕಳೆದ ಮೂರು ದಿನಗಳಿಂದ ಮಿಂಚಿದ್ದೇ ಮಿಂಚಿದ್ದು.. ಈ ಮಿಂಚಿಗೆ, ರೋಮಾಂಚನಕ್ಕೆ ಕಾರಣವಾದದ್ದು ಬಟ್ಟೆ ಅಲರ್ಜಿ(?)ಯ ಹಾಟ್ ಬೇಬಿ ರಾಖಿ ಸಾವಂತ್!
ಪ್ರಜ್ವಲ್ ಮತ್ತು ಸಂಗಡಿಗರ ಜೊತೆ ರಾಖಿ ಹೆಜ್ಜೆ ಹಾಕಿದರು. ಆ ಚಿತ್ರದ ಹೆಸರು ಗೆಳೆಯ. ಈ ಚಿತ್ರದ ಮೂಲಕ ರಾಖಿ, ಸ್ಯಾಂಡಲ್‌ವುಡ್‌ನ ಹೊಸ್ತಿಲು ಮೆಟ್ಟಿದ್ದಾಳೆ.

ಐಟಂ ಸಾಂಗಲ್ಲಿ ಕುಣಿಯಲು ಯಾರಾದರೂ ಕರೆತರೆ, ನನಗೇನು ಬೇಸರವಾಗುವುದಿಲ್ಲ. ಇದು ನನ್ನ ವೃತ್ತಿ . ಮಾಡುವ ಕೆಲಸ ಪ್ರೀತಿಸದವರು ಮತ್ತು ಗೌರವಿಸದವರು, ಇನ್ನು ಏನನ್ನೂ ತಾನೇ ಪ್ರೀತಿಸಲು ಸಾಧ್ಯ? ಎಂಬುದು ರಾಖಿಯ ಮಾತು.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಪರದೆ ಮೇಲೆ ನಾನು, ನನ್ನ ನೃತ್ಯ ಆಕರ್ಷಕವಾಗಿ ಕಾಣುತ್ತದೆ. ಹೀಗಾಗಿಯೇ ನಿರ್ಮಾಪಕರು ನನಗೆ ಅವಕಾಶ ನೀಡುತ್ತಿದ್ದಾರೆ ಎಂದು ತಮ್ಮ ಕೆಲಸಕ್ಕೆ ಸಮರ್ಥನೆ ನೀಡಿದರು.

ಮೂಕಾಂಬಿಕಾ ಫಿಲಂಸ್ ನಿರ್ಮಾಣದ ಈ ಚಿತ್ರದ ನಿರ್ದೇಶಕ; ಹರ್ಷ. ಈವರೆಗೆ ನೃತ್ಯ ಸಂಯೋಜಕರಾಗಿದ್ದ ಹರ್ಷ, ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪ್ರಜ್ವಲ್, ತರುಣ್ ಜೊತೆ ದುನಿಯ ವಿಜಯ್ ಚಿತ್ರದಲ್ಲಿದ್ದಾರೆ. ಅವರಿಗೆ ಚಿತ್ರದಲ್ಲಿ ಪೊಲೀಸ್ ಪಾತ್ರ.

ಗೆಳೆಯನಿಗಾಗಿ ಐಟಂ ಗರ್ಲ್ ರಾಖಿ ಸಾವಂತ್ ಥಕಧಿಮಿತಾ!

English summary
The Rockline Venkatesh Studios was set on a sizzling spree for three days. The item number girl Rakhi Sawant was dancing along with Prajwal for the film Geleya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada