»   » ಸ್ಯಾಂಡಲ್‌ವುಡ್‌ನಲ್ಲಿಂದು ಗಡಿಬಿಡಿ!

ಸ್ಯಾಂಡಲ್‌ವುಡ್‌ನಲ್ಲಿಂದು ಗಡಿಬಿಡಿ!

Subscribe to Filmibeat Kannada

ಈ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಹೊತ್ತುತಂದಿದೆ. ಹೀಗಾಗಿಯೇ ಲಕ್ಷ್ಮಮ್ಮನ ಅನುಗ್ರಹ ಬೇಡುತ,್ತ ಇಂದು ಐದು ಚಿತ್ರಗಳು ಸೆಟ್ಟೇರಿವೆ. ಅಷ್ಟು ಮಾತ್ರವಲ್ಲ, ಮೆಗಾ ಚಿತ್ರ ‘ಗಂಡುಗಲಿ ಕುಮಾರರಾಮ’ ತೆರೆಕಂಡಿದೆ. ಒಂದೇ ದಿನ ಈ ಚಿತ್ರ ರಾಜ್ಯದೆಲ್ಲೆಡೆ 175 ಪ್ರದರ್ಶನಗಳ ಕಾಣುತ್ತಿದೆ.

ಈ ಕುಮಾರರಾಮ -ಭಾರ್ಗವ ನಿರ್ದೇಶನದ 50ನೇ ಚಿತ್ರ, ಪಟ್ಟಾಭಿರಾಮ್‌ರ ಮಹತ್ವಾದ ಕೊಡುಗೆ, ರಾಜ್‌ಕುಮಾರ್‌ರ ಬಣ್ಣದ ಕನಸು. ಪ್ರೇಕ್ಷಕರು ಹೇಗೆ ಸ್ವೀಕರಿಸುವರೋ ಮುಂದಿನವಾರದೊಳಗೆ ಗೊತ್ತಾಗಲಿದೆ.

ಸೆಟ್ಟೇರುತ್ತಿರುವ ಚಿತ್ರಗಳು :

  • ನ್ಯೂ ಕೇಂಬ್ರಿಡ್ಜ್‌ ಶಾಲಾ ಆವರಣದಲ್ಲಿ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ನಟ ರಜನಿಕಾಂತ್‌ ಮೊದಲ ದೃಶ್ಯಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ನಟ ಅಂಬರೀಷ್‌, ಪಾರ್ವತಮ್ಮ ರಾಜ್‌ ಕುಮಾರ್‌ ಮತ್ತಿತರರು ಪಾಲ್ಗೊಳ್ಳುವರು. ಬಾಲಗಂಗಾಧರ ಸ್ವಾಮಿ, ಶ್ರೀ ಶಿವಕುಮಾರಸ್ವಾಮೀಜಿ ದಿವ್ಯ ಸಾನಿಧ್ಯವಹಿಸುವರು ಎಂದು ಮೂಲಗಳು ಹೇಳಿವೆ.
  • ಶಿವರಾಜ್‌ ಕುಮಾರ್‌, ರಕ್ಷಿತಾ ಮೊದಲ ಸಲ ಜೋಡಿಯಾಗುತ್ತಿರುವ ಚಿತ್ರ ‘ತಾಯಿಯ ಮಡಿಲು’ ಮುಹೂರ್ತ ರಾಕ್‌ಲೈನ್‌ ಸ್ಟುಡಿಯೋದಲ್ಲಿ ನೆರವೇರಿತು. ತೆಲುಗಿನ ಜನಪ್ರಿಯ ನಟಿ ಜಯಸುಧಾ ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಎಸ್‌.ನಾರಾಯಣ್‌ ನಿರ್ದೇಶನದ ಜೊತೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
  • ‘ಗಂಡ ಹೆಂಡತಿ’ಯ ರವಿ ಶ್ರೀವತ್ಸ ನಿರ್ದೇಶನದ ಮತ್ತೊಂದು ಚಿತ್ರ ‘ಈ ರಾಜೀವ್‌.. ಗಾಂಧಿ ಅಲ್ಲ’ ಚಿತ್ರದ ಚಿತ್ರೀಕರಣ ಹನುಮಂತನಗರದ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ನೆರವೇರಿದೆ. ರಕ್ಷಿತಾ, ವಿಜಯರಾಘವೇಂದ್ರ, ನಾಗಶೇಖರ್‌, ಹರೀಶ್‌ ರೈ ತಾರಾಗಣದಲ್ಲಿದ್ದಾರೆ.
  • ಪೊಲೀಸ್‌ ಸ್ಟೋರಿ ಚಿತ್ರದ ಎರಡನೇ ಭಾಗ 10ವರ್ಷಗಳ ನಂತರ ಸಿದ್ಧಗೊಳ್ಳುತ್ತಿದೆ. ‘ಪೊಲೀಸ್‌ ಸ್ಟೋರಿ ಎರಡನೇ ಭಾಗ’ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಸಾಯಿಕುಮಾರ್‌ ಅಭಿನಯ, ಥ್ರಿಲ್ಲರ್‌ ಮಂಜು ನಿರ್ದೇಶನ ಚಿತ್ರದ ಹೈಲೈಟ್ಸ್‌.
  • ಸಾಯಿಪ್ರಕಾಶ್‌ ನಿರ್ದೇಶನದ ಚಿತ್ರ ‘ಪರೋಡಿ’ ಮುಹೂರ್ತ ನೆರವೇರಿದೆ. ಉಪೇಂದ್ರ ಜೊತೆ ಮುಂಬೈ ಬೆಡಗಿ ನೇಹಾ ನಟಿಸುತ್ತಿದ್ದಾರೆ.
Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada