»   » ಕಮಲ್‌ ಥರನೇ ನಟಿಸ್ತೀನಿ- ಸುದೀಪ್‌

ಕಮಲ್‌ ಥರನೇ ನಟಿಸ್ತೀನಿ- ಸುದೀಪ್‌

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಅಭ್ಯಂಜನ ಸ್ನಾನ ಮಾಡಿ ಹೆಂಡತಿಯ ಜೊತೆಗೆ ದೇವಸ್ಥಾನಕ್ಕೆ ಹೋಗಿ, ಭಗವಂತನಿಗೆ ಶಿರ ಸಾಷ್ಟಾಂಗ ವಂದಿಸಿ, ಸಂಜೆ 5 ಗಂಟೆಯವರೆಗೆ ಅಭಿಮಾನಿಗಳ ಬೊಕೆಗಳನ್ನು ಇಸಿದುಕೊಂಡು ಧನ್ಯವಾದ ಅರ್ಪಿಸಿ, ಆಮೇಲೆ ಬೆಂಗಳೂರಿನ ಕ್ಯಾಪಿಟಲ್‌ ಹೊಟೇಲಿನಲ್ಲಿ ಕೇಕ್‌ ಕಟ್‌- ಇದು ಮಂಗಳವಾರ (ಸೆ.02) ನಡೆಗ ಸುದೀಪ್‌ ಬರ್ತ್‌ಡೇ ಸಂಕ್ಷಿಪ್ತ ಮಾಹಿತಿ.

ಪ್ರಿಯಾ ಸುದೀಪ್‌ ತಮ್ಮ ಗಂಡನಿಗೆ ಇರುವ ಅಪಾರ ಅಭಿಮಾನಿ ಬಳಗವನ್ನು ಕಣ್ಣುತುಂಬಿಕೊಂಡು ಬಂದು ನಿಂತಿದ್ದರು. ‘ನಾಯಗನ್‌’ ರೀಮೇಕ್‌‘ವರದ ನಾಯಕ’ ಚಿತ್ರದ ನಿರ್ಮಾಪಕ ಧನರಾಜ್‌ ಹಾಗೂ ಅವರ ಹೆಂಡತಿ ಇದ್ದರು. ಸದ್ಯಕ್ಕೆ ಕೈತುಂಬಾ ಕೆಲಸ ಗಿಟ್ಟಿಸಿಕೊಂಡಿರುವ ಸಂಗೀತ ಸಂಯೋಜಕ ದ್ವಯರಾದ ಗುರುಕಿರಣ್‌ ಹಾಗೂ ರಾಜೇಶ್‌ ರಾಮನಾಥನ್‌ ಒಳಗೊಳಗೇ ಯಾವುದೇ ರಾಗ ಗುನುಗುತ್ತಿದ್ದರು. ಡಿಐಜಿ ಶ್ರೀನಿವಾಸುಲು, ಕೆಸಿಎನ್‌ ಚಂದ್ರಶೇಖರ್‌ ಹಾಗೂ ಜಯಮಾಲ ಕುಟುಂಬ ಪಟ್ಟಾಂಗದಲ್ಲಿ ಭಾಗಿಗಳಾಗಿದ್ದರು.

ಸುದೀಪ್‌ ಮತ್ತೆ ಕಾಲೆಳೆಯುವವರ ಕುರಿತೇ ತಲೆಕೆಡಿಸಿಕೊಂಡಿದ್ದಾರೆ ಅನಿಸುತ್ತೆ. ‘ಡಿಸ್ಟ್ರಾಕ್ಟರ್‌ಗಳ ನಡುವೆಯೂ ಕಷ್ಟಪಟ್ಟು ಕೆಲಸ ಮಾಡಿ ಮೇಲೇರಬೇಕು ಎಂಬುದು ಚಿತ್ರಲೋಕಕ್ಕೆ ನಾನು ಬಂದಾಗ ಮಾಡಿಕೊಂಡ ಠರಾವು’ ಅಂತ ಅವರು ಯಾಕೆ ಹೇಳಿದರೋ ಗೊತ್ತಾಗಲಿಲ್ಲ. ‘ನಾಯಗನ್‌’ ಚಿತ್ರದಲ್ಲಿ ಕಮಲ ಹಾಸನ್‌ ಮಾಡಿದ ಪಾತ್ರವನ್ನು ಮಾಡುತ್ತಿರುವುದು ದೊಡ್ಡ ಸವಾಲು. ಅದನ್ನು ನಾನು ಗೆದ್ದು ತೋರಿಸುತ್ತೇನೆ ಎಂದು ಸುದೀಪ್‌ ಆತ್ಮವಿಶ್ವಾಸದಿಂದ ಬೀಗಿದರು.

ಸುದೀಪ್‌ ಅಭಿನಯದ ಪಾರ್ಥ ಚಿತ್ರ ತೆರೆ ಕಾಣಲು ಪೈಪ್‌ಲೈನ್‌ನಲ್ಲಿದೆ. ನನ್ನ ಮುಂದಿನ ಚಿತ್ರ ಶಿವಾಜಿ. ಇದು ಪಕ್ಕ ಕಮರ್ಷಿಯಲ್‌ ಚಿತ್ರ ಅನ್ನೋದು ಸುದೀಪ್‌ ಬರ್ತಡೇ ಪಾರ್ಟಿಯಲ್ಲಿ ಕೇಳಿಬಂದ ಅನೌನ್ಸ್‌ಮೆಂಟು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada