»   » ಮೆಗಾಸ್ಟಾರ್ ಚಿರಂಜೀವಿ ಪುತ್ರನ ಚೊಚ್ಚಲ ಚಿತ್ರ ‘ಚಿರುತ’!

ಮೆಗಾಸ್ಟಾರ್ ಚಿರಂಜೀವಿ ಪುತ್ರನ ಚೊಚ್ಚಲ ಚಿತ್ರ ‘ಚಿರುತ’!

Subscribe to Filmibeat Kannada


ಅಪ್ಪ ಮಕ್ಕಳ ಕಾರುಬಾರು ತೆಲುಗಿನಲ್ಲಿ ಇನ್ನೊಂದೆಜ್ಜೆ ಮುಂದೆ. ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಹೊಸ ಚಿತ್ರ ಚಿರುತಚಿತ್ರೀಕರಣ ಭರದಿಂದ ಸಾಗಿದೆ. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದ ನಾಯಕಿ; ನೇಹಾ.

ಹೈದ್ರಾಬಾದ್ ನಿಂದ ಚಿತ್ರತಂಡ ನ್ಯೂಜಿಲ್ಯಾಂಡ್ ಗೆ ಚಿತ್ರೀಕರಣಕ್ಕಾಗಿ ಸಾಗಿದೆ. ನೃತ್ಯ ಸಂಯೋಜಕ ರಾಘವೇಂದ್ರ ಲಾರೆನ್ಸ್, ಚರಣ್‍ ಅವರ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಆರಂಭದ ಹಾಡು ಪ್ರೇಕ್ಷಕರ ಮನದಲ್ಲಿ ಚಿರಕಾಲ ಉಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದ ಧ್ವನಿ ಸುರುಳಿ ಇತ್ತೀಚೆಗಷ್ಟೆ ಬಿಡುಗಡೆಯಾಗಿ, ಶ್ರೋತೃಗಳ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಕ್ಕೆ ಮಣಿಶರ್ಮ ಸಂಗೀತ ನೀಡಿದ್ದು, ವೈಜಯಂತಿ ಮೂವೀಸ್ ಬ್ಯಾನರ್ ನಡಿ ಅಶ್ವಿನಿದತ್ ಚಿತ್ರ ನಿರ್ಮಿಸುತ್ತಿದ್ದಾರೆ. ಒಟ್ಟಾರೆಯಾಗಿ ಟಾಲಿವುಡ್ ವಲಯದಲ್ಲಿ ಚರ್ಚೆಗೆ ಒಳಗಾಗಿ ಪ್ರೇಕ್ಷಕ ವಲಯದಲ್ಲಿ ಭಾರೀ ಕುತೂಹಲವನ್ನೆ ಕೆರಳಿಸಿದೆ ‘ಚಿರು’ತ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada