»   » ರಮ್ಯಾಗೆ ಸೊಕ್ಕಿದೆ, ಹೀಗಾಗಿ ಗೇಟ್ ಪಾಸ್ ಕೊಟ್ಟೆವು..

ರಮ್ಯಾಗೆ ಸೊಕ್ಕಿದೆ, ಹೀಗಾಗಿ ಗೇಟ್ ಪಾಸ್ ಕೊಟ್ಟೆವು..

Posted By: Super
Subscribe to Filmibeat Kannada

ರಮ್ಯಾ ಸೊಕ್ಕಿನ ಹುಡುಗಿ. ಹೀಗಾಗಿ ನಮ್ಮ ಚಿತ್ರದಿಂದ ಕೈಬಿಟ್ಟೆವು ಎನ್ನುತ್ತಾರೆ ಅರಮನೆ ಚಿತ್ರದ ನಿರ್ದೇಶಕ ನಾಗಶೇಖರ್. ಆವಮ್ಮಾ ಐಶ್ವರ್ಯಾ ರೈ ಥರಾ ಆಡ್ತಾರೆ.. ಕತೆಯನ್ನು ಬದಲಿಸಿ ಎಂದು ಸೂಚನೆ ನೀಡ್ತಾರೆ.. ಇಂಥ ಪಾತ್ರವೇ ಬೇಕು ಎಂದು ನಿರ್ದೇಶನ ನೀಡ್ತಾರೆ. ಇಂಥವರ ಜೊತೆ ಕೆಲಸ ಮಾಡೋದು ಕಷ್ಟ. ನಮಗೆ ರಮ್ಯಾ ಸಹವಾಸವೇ ಬೇಡಎಂಬುದು ನಾಗಶೇಖರ್ ವಿವರಣೆ.

ಮತ್ತೊಂದು ಕಡೆ ಮಿಂಚಿನ ಓಟ ಚಿತ್ರದಿಂದಲೂ ರಮ್ಯಾ ಹೊರಬಿದ್ದಿದ್ದಾಳೆ. ಸಂಭಾವನೆ, ಪಾತ್ರ ಎಲ್ಲವೂ ರಮ್ಯಾಗೆ ಇಷ್ಟವಾಗಿತ್ತು. ಕೊನೆಗೆ, ನಿಮ್ಮ ಚಿತ್ರ ನನಗೆ ಬೇಡ ಎಂದು ಎಸ್ ಎಂಎಸ್ ಕಳಿಸಿದರು ಎನ್ನುತ್ತಾರೆ ಈ ಚಿತ್ರದ ನಿರ್ದೇಶಕ ರಮೇಶ್. ದಿನೇಶ್ ಬಾಬು ರೀಲ್ ಸುತ್ತುವುದರಲ್ಲಿ ನಿಪುಣರು. ಹಿಂದೆ ಕೇವಲ ಎರಡು ದಿನದಲ್ಲಿ(48ಗಂಟೆ) ಚಿತ್ರ ಮುಗಿಸಿದ್ದ ದಿನೇಶ್ ಈಗ, ಮಿ.ಗರಗಸ ಎಂಬ ಚಿತ್ರವನ್ನು ಒಂಬತ್ತೂವರೆ ದಿನದಲ್ಲಿ ಮುಗಿಸಿದ್ದಾರೆ.

ಈ ಚಿತ್ರ ಮುಗಿಸೋಕೆ ಹನ್ನೊಂದು ದಿನ ಬೇಕು ಎಂದಿದ್ದ ದಿನೇಶ್ ಬಾಬು, ಹೇಳಿದ್ದಕ್ಕಿಂತ ಮುಂಚೆಯೇ ಮುಗಿಸಿದ್ದಾರೆ. ಹೀಗೆಂದು ನಾನು ಸುಮ್ಮನೇ ರೀಲು ಸುತ್ತಿಲ್ಲ. ಹೋಮ್ ವರ್ಕ್ ಜೋರಾಗಿತ್ತು. ಹೀಗಾಗಿ ಚಿತ್ರ ಮುಗಿದಿದೆ ಅಷ್ಟೆ ಎಂದಿದ್ದಾರೆ ದಿನೇಶ್ ಬಾಬು. ಈ ಚಿತ್ರದಲ್ಲಿ ಅನಂತನಾಗ್ ನಾಯಕ. ಮುಂಗಾರು ಮಳೆ ಚಿತ್ರದ ಸುವ್ವಿ ಸುವ್ವಾಲೆ ಹಾಡನ್ನು ಇನ್ನೊಮ್ಮೆ ನೋಡಿ. ಗಣೇಶ್ ಜೊತೆ ಉತ್ಸಾಹದಿಂದ ಹೆಜ್ಜೆ ಹಾಕುವ ಆ ಚೆಲುವೆಯ ಹೆಸರು ಸುನೀತಾ. ಪೂರ್ತಿ ಹೆಸರು ಸುನೀತಾ ಶೆಟ್ಟಿ.

ಮೂರನೇ ಕ್ಲಾಸ್ ಮಂಜ ಮತ್ತು ಬಿಕಾಂ ಭಾಗ್ಯ ಚಿತ್ರಕ್ಕೆ ನಾಯಕಿಯಾಗಿ ಈಕೆ ಆಯ್ಕೆಯಾಗಿದ್ದಾಳೆ. ತಿಮ್ಮ ನಿರ್ದೇಶಕ ಮತ್ತು ನಾಯಕರ ಇನ್ನೊಂದು ಸಿನಿಮಾ ಇದು. ಸುಭೀಕ್ಷಾ ಎಂದು ಹೆಸರು ಬದಲಿಸಿಕೊಂಡಿದ್ದಾಳೆ; ಸುನೀತಾ ಶೆಟ್ಟಿ. ನಾವೇನ್ ಕಡಿಮೆ ಎಂದು ನಾಯಕ ಅರ್ಜುನ್, ತಮ್ಮ ಹೆಸರನ್ನು ಮಂಜೇಶ್ ಎಂದು ಬದಲಿಸಿಕೊಂಡಿದ್ದಾರೆ.

English summary
Latest Cinema news from Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada