»   » ‘ಮೌನಿ’ ಮತ್ತೆ ಸುದ್ದಿಯಲ್ಲಿದ್ದಾನೆ !

‘ಮೌನಿ’ ಮತ್ತೆ ಸುದ್ದಿಯಲ್ಲಿದ್ದಾನೆ !

Subscribe to Filmibeat Kannada

ಪನೋರಮಾ ವಿಭಾಗಕ್ಕೆ ಆಯ್ಕೆಯಾಗುವ ಮೂಲಕ ಚಿತ್ರ ರಸಿಕರ ಗಮನ ಸೆಳೆದಿರುವ ‘ಮೌನಿ’ ಚಿತ್ರದ ಯಶೋಗಾಥೆ ಮುಂದುವರಿದಿದೆ. ಮುಂಬಯಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಚಿತ್ರಗಳ ಸ್ಪರ್ಧಾತ್ಮಕ ವಿಭಾಗಕ್ಕೆ ‘ಮೌನಿ’ ಆಯ್ಕೆಯಾಗಿದೆ.

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿಯವರ ಕಥೆಯನ್ನು ಆಧರಿಸಿದ ‘ಮೌನಿ’ ಚಿತ್ರವನ್ನು ಟೆಕ್ನೋಮಾರ್ಕ್‌ ನೆಟ್‌ವರ್ಕ್‌ ಸಂಸ್ಥೆ ನಿರ್ಮಿಸಿದೆ. ಅಂದಹಾಗೆ, ‘ಮೌನಿ’ ಚಿತ್ರ ನಿರ್ದೇಶಕ ಬಿ.ಎಸ್‌. ಲಿಂಗದೇವರು ಅವರ ಚೊಚ್ಚಲು ಚಿತ್ರ.

ನವಂಬರ್‌ 20ರಿಂದ 27ರವರೆಗೆ ಮುಂಬಯಿಯಲ್ಲಿ ಚಿತ್ರೋತ್ಸವ ನಡೆಯಲಿದೆ.

‘ಮೌನಿ’ ತೆರೆ ಕಾಣುವುದು ಯಾವಾಗ ?

‘ಮೌನಿ’ ಚಿತ್ರವನ್ನು ತೆರೆ ಕಾಣಿಸಲು ನಿರ್ಮಾಪಕ ನಿರ್ದೇಶಕರು ಅತೀವ ಆಸಕ್ತರಾಗಿದ್ದರೂ, ಚಿತ್ರಮಂದಿರಗಳ ಕೊರತೆಯಿಂದಾಗಿ ಚಿತ್ರ ಇನ್ನೂ ತೆರೆ ಕಂಡಿಲ್ಲ . ಅಕ್ಟೋಬರ್‌ ತಿಂಗಳಲ್ಲಿಯೇ ‘ಮೌನಿ’ಯನ್ನು ತೆರೆ ಕಾಣಿಸಬೇಕೆನ್ನುವ ಆಸೆ ನಿರ್ದೇಶಕ ಲಿಂಗದೇವರು ಅವರಿಗಿತ್ತು . ದೊಡ್ಡ ದೊಡ್ಡ ಚಿತ್ರಗಳ ನಿರ್ಮಾಪಕರೇ ಚಿತ್ರಮಂದಿರಗಳಿಗಾಗಿ ಬಡಿದಾಡುತ್ತಿರುವಾಗ ‘ಮೌನಿ’ಯನ್ನು ಮಾತನಾಡಿಸುವವರಾದರೂ ಯಾರು ?

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada