»   » ‘ವೀರೂ’ ಆಗಿ ನಾರಾಯಣ್‌ ಪುತ್ರ!

‘ವೀರೂ’ ಆಗಿ ನಾರಾಯಣ್‌ ಪುತ್ರ!

Subscribe to Filmibeat Kannada

ಹೀರೋಗಳನ್ನು ಸೃಷ್ಟಿಸುವುದರಲ್ಲಿ ನಾರಾಯಣ್‌ಗೆ ನಾರಾಯಣ್‌ ಮಾತ್ರ ಸಾಟಿ! ಅದೇ ನಂಬಿಕೆಯ ಮೇಲೆ ತಮ್ಮ ಪುತ್ರನನ್ನು ನಾಯಕನನ್ನಾಗಿಸಲು ನಾರಾಯಣ್‌ ಮುನ್ನುಗ್ಗಿದ್ದಾರೆ.

‘ಕೋಲಾ ಕೋಲಾ ಕೋಕಾ ಕೋಲಾ’ ಎಂದು ಹಾಡಿ ಕುಣಿದಿದ್ದ ನಾರಾಯಣ್‌ ಪುತ್ರ ಮಾಸ್ಟರ್‌ ಪವನ್‌, ಈ ಚಿತ್ರದ ಮೂಲಕ ಮಿಸ್ಟರ್‌ ಪವನ್‌ ಆಗುತ್ತಿದ್ದಾನೆ. ಅಂದಹಾಗೇ ಚಿತ್ರದ ಹೆಸರು ‘ವೀರೂ’. ಹಳ್ಳಿ ಹುಡುಗನ ಪಾತ್ರ ಪವನ್‌ ಮುಂದಿದೆ.

ನಾರಾಯಣ್‌ ನಿರ್ಮಾಣದ ಈ ಚಿತ್ರದಲ್ಲಿ ವೀರು ತಾಯಿ ಪಾತ್ರದಲ್ಲಿ ಉಮಾಶ್ರೀ ನಟಿಸುವರು. ಬೆಳ್ಳಿತೆರೆಯ ಮೇಲೆ ಮುನಿಸಿಕೊಂಡು ರಂಗಭೂಮಿಯಲ್ಲಿ ಮಿಂಚುತ್ತಿದ್ದ ಉಮಾಶ್ರೀ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಪಡೆಯಲಿದ್ದಾರೆ.

ಎಂದಿನಂತೆಯೇ ನಾರಾಯಣ್‌ ಈ ಚಿತ್ರವನ್ನೂ ತುಂಬಾ ಡಿಫರೆಂಟ್‌ ಚಿತ್ರ ಎಂದಿದ್ದಾರೆ. ಚಿತ್ರದಲ್ಲಿ ಡ್ಯುಯಟ್‌, ಆ್ಯಕ್ಷನ್‌ ಮತ್ತು ಕಾಮಿಡಿಗೆ ಜಾಗವಿಲ್ಲವಂತೆ. ಸದ್ಯದ ವ್ಯವಸ್ಥೆಗೆ ಈ ಚಿತ್ರ ಕನ್ನಡಿ ಹಿಡಿಯಲಿದೆ. ಒಟ್ಟಾರೇ ಇದು ಮಾಮೂಲಿ ಚಿತ್ರ ಅಲ್ಲವೇ ಅಲ್ಲ ಅನ್ನೋ ಅಂಶವನ್ನು ನಾರಾಯಣ್‌ ಅಂಡರ್‌ಲೈನ್‌ ಮಾಡಿ ಹೇಳಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada