»   » ದ್ವೀಪ ಮೊದಲ ಅತ್ಯುತ್ತಮ ಚಿತ್ರ, ಸೌಂದರ್ಯ ಉತ್ತಮ ನಟಿ

ದ್ವೀಪ ಮೊದಲ ಅತ್ಯುತ್ತಮ ಚಿತ್ರ, ಸೌಂದರ್ಯ ಉತ್ತಮ ನಟಿ

Posted By: Super
Subscribe to Filmibeat Kannada

'ಏಕಾಂಗಿ ನನ್ನ ಉಸಿರಾಗಿತ್ತು. ಪ್ರಶಸ್ತಿ ಕೊಡುವುದರ ಮೂಲಕ ರಾಜ್ಯ ಸರ್ಕಾರ ಅದಕ್ಕೆ ಆಕ್ಸಿಜನ್‌ ತುಂಬಿದೆ".
ಸೋತು ಸುಣ್ಣವಾಗಿ ಹೋಗಿದ್ದ ರವಿಚಂದ್ರನ್‌ ಮುಖದಲ್ಲಿ ಎಂಥದ್ದೋ ಸಾರ್ಥಕ ನಗು. ಹದಿನಾರು ವರ್ಷಗಳ ಸಿನಿಮಾ ಕೆರಿಯರ್ರಿನಲ್ಲಿ ಶ್ರೇ-ಷ್ಠ ನಟ ಪ್ರಶಸ್ತಿ ಕಾಣುತ್ತಿರುವುದು ಇದೇ ಮೊದಲು. ಪ್ರಶಸ್ತಿಗೆ ಸಿನಿಮಾ ಕಳಿಸುವ ಜಾಯಮಾನದವರಲ್ಲ ರವಿ. ಆದರೂ, ಏಕಾಂಗಿಯ ಬಗ್ಗೆ ಇವರಿಟ್ಟುಕೊಂಡಿರುವ ಒಲವು ಹಾಗೂ ಗೆಳೆಯರ ಸಲಹೆಯ ಕಾರಣ ಈ ಬಾರಿ ಪ್ರಶಸ್ತಿಗೆ ಕಳಿಸಿಕೊಟ್ಟರು. ಅದಕ್ಕೆ ಫಲ ಸಿಕ್ಕೇ ಬಿಟ್ಟಿತು.

ಪ್ರಶಸ್ತಿ ಚಿತ್ರಗಳ ಕೆಮಿಸ್ಟ್ರಿಯನ್ನು ಅರೆದು ಕುಡಿದಿರುವ ನಾಗಾಭರಣರ 'ನೀಲಾ" ಚಿತ್ರವನ್ನೂ 'ಏಕಾಂಗಿ" ಓವರ್‌ಟೇಕ್‌ ಮಾಡಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ಹಿರಿಯ ನಟ ವಾದಿರಾಜ್‌ 'ಏಕಾಂಗಿ"ಯ ಕಲೆಗಾರಿಕೆಯನ್ನು ಯದ್ವಾತದ್ವಾ ಮೆಚ್ಚಿಕೊಂಡಿದ್ದಾರೆ. ನಿರೀಕ್ಷೆಯಂತೆ 'ಸ್ವರ್ಣ ಕಮಲ" ದಕ್ಕಿಸಿಕೊಂಡಿರುವ ಸೌಂದರ್ಯ ನಿರ್ಮಿಸಿ ನಟಿಸಿರುವ 'ದ್ವೀಪ" ಪ್ರಥಮ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ಎರಡನೇ ಸ್ಥಾನ 'ಏಕಾಂಗಿ"ಗೆ. ಮೂರನೆಯ ಅತ್ಯುತ್ತಮ ಚಿತ್ರವಾಗಿ ನಾಗಾಭರಣರ 'ನೀಲಾ" ಆಯ್ಕೆಯಾಗಿದೆ.

ಉತ್ತಮ ನಟ, ಸಂಗೀತ ನಿರ್ದೇಶಕ, ಚಿತ್ರ ನಿರ್ದೇಶಕ, ನಿರ್ಮಾಪಕ- ಈ ಎಲ್ಲಾ ಕೆಟಗರಿಗಳ ಪ್ರಶಸ್ತಿ ಕನಸುಗಾರ ರವಿಚಂದ್ರನ್‌ ಪಾಲಾಗಿರುವುದು 'ಏಕಾಂಗಿ"ಯಲ್ಲಿ ಅವರು ಪಟ್ಟ ಶ್ರಮಕ್ಕೆ ಸಂದ ಉತ್ತಮ ಫಲವಾಗಿದೆ. ದ್ವೀಪ ಚಿತ್ರದ ಅಭಿನಯಕ್ಕೆ ಸೌಂದರ್ಯ ಅತ್ಯುತ್ತಮ ನಟಿಯಾಗಿ ಆಯ್ಕೆಯಾಗಿದ್ದಾರೆ.

ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಪ್ರಕಟಿಸಿರುವ 2001-02ನೇ ಇಸವಿಯ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪೂರ್ಣಪಾಠ...
ರಾಜ್‌ಕುಮಾರ್‌ ಪ್ರಶಸ್ತಿ : ಪ್ರತಿಮಾದೇವಿ ಶಂಕರ್‌ ಸಿಂಗ್‌ (1 ಲಕ್ಷ ರುಪಾಯಿ ನಗದು)
ದಿವಂಗತ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ : ಎಂ.ಎಸ್‌.ರಾಜಶೇಖರ್‌ (1 ಲಕ್ಷ ರುಪಾಯಿ ನಗದು)
ಜೀವಮಾನದ ಶ್ರೇಷ್ಠ ಸಾಧನೆ : ರಾಜಾನಂದ್‌ (50 ಸಾವಿರ ರು. ನಗದು)
ಪ್ರಥಮ ಅತ್ಯುತ್ತಮ ಚಿತ್ರ : ದ್ವೀಪ (ನಿರ್ಮಾಪಕಿ- ಸೌಂದರ್ಯ. ಪ್ರಶಸ್ತಿಯ ಮೊತ್ತ- 1 ಲಕ್ಷ ರುಪಾಯಿ ಹಾಗೂ ಚಿನ್ನದ ಪದಕ. ನಿರ್ದೇಶಕ- ಗಿರೀಶ್‌ ಕಾಸರವಳ್ಳಿ- ಇವರಿಗೆ 20 ಸಾವಿರ ರುಪಾಯಿ ಮತ್ತು ಚಿನ್ನದ ಪದಕ).
ದ್ವಿತೀಯ ಚಿತ್ರ : ಏಕಾಂಗಿ (ನಿರ್ಮಾಪಕ ವಿ.ರವಿಚಂದ್ರನ್‌. ಪ್ರಶಸ್ತಿಯ ಮೊತ್ತ- 75 ಸಾವಿರ ರು. ಮತ್ತು ಬೆಳ್ಳಿ ಪದಕ. ನಿರ್ದೇಶಕ- ವಿ.ರವಿಚಂದ್ರನ್‌ : 15 ಸಾವಿರ ರು. ಮತ್ತು ಬೆಳ್ಳಿ ಪದಕ).
ತೃತೀಯ ಚಿತ್ರ : ನೀಲಾ (ನಿರ್ಮಾಣ- ದೃಷ್ಟಿ ಸೃಷ್ಟಿ. ಪ್ರಶಸ್ತಿ- 50 ಸಾವಿರ ರು. ಮತ್ತು ಬೆಳ್ಳಿ ಪದಕ. ನಿರ್ದೇಶಕ- ನಾಗಾಭರಣ. ಇವರಿಗೆ 10 ಸಾವಿರ ರು. ಮತ್ತು ನಗದು).
ಉತ್ತಮ ಸಾಮಾಜಿಕ ಚಿತ್ರ : ಗಂಧದ ಬೊಂಬೆ (ನಿರ್ಮಾಪಕ- ಬಿ.ಶ್ರೀನಿವಾಸ್‌. ಪ್ರಶಸ್ತಿ- 75 ಸಾವಿರ ರು. ಮತ್ತು ಚಿನ್ನದ ಪದಕ. ನಿರ್ದೇಶಕ- ಬಿ.ಶಂಕರ್‌ ಮತ್ತು ಎಂ.ಡಿ.ಹಾಶಂ. ಇವರಿಗೆ 10 ಸಾವಿರ ರು. ನಗದು ಮತ್ತು ಬೆಳ್ಳಿ ಪದಕ).
ಉತ್ತಮ ಮಕ್ಕಳ ಚಿತ್ರ : ಪುಟ್ಟಿ (ನಿರ್ಮಾಣ- ಮೆಗಾಜಿತ್‌ ಕ್ರಿಯೇಷನ್ಸ್‌. ಪ್ರಶಸ್ತಿ- 50 ಸಾವಿರ ರು. ಮತ್ತು ಚಿನ್ನದ ಪದಕ. ನಿರ್ದೇಶಕ- ಬಿ.ಆರ್‌.ಕೇಶವ. ಇವರಿಗೆ 10 ಸಾವಿರ ರು. ಮತ್ತು ಬೆಳ್ಳಿ ಪದಕ).
ಸುಬ್ಬಯ್ಯನಾಯ್ಡು ಅತ್ಯುತ್ತಮ ನಟ ಪ್ರಶಸ್ತಿ : ವಿ.ರವಿಚಂದ್ರನ್‌ (20 ಸಾವಿರ ರು. ಮತ್ತು ಬೆಳ್ಳಿ ಪದಕ)
ಅತ್ಯುತ್ತಮ ನಟಿ : ಸೌಂದರ್ಯ (20 ಸಾವಿರ ರು. ಮತ್ತು ಬೆಳ್ಳಿ ಪದಕ)
ಉತ್ತಮ ಪೋಷಕ ನಟ : ಕೆರೆಮನೆ ಶಂಭು ಹೆಗಡೆ (ಚಿತ್ರ- ಪರ್ವ. ಪ್ರಶಸ್ತಿ- 10 ಸಾವಿರ ರು. ಮತ್ತು ಬೆಳ್ಳಿ ಪದಕ)
ಉತ್ತಮ ಪೋಷಕ ನಟಿ : ಎಂ.ಎನ್‌.ಲಕ್ಷ್ಮೀದೇವಿ (ಚಿತ್ರ- ಕಳ್ಳ ಪೋಲಿಸ್‌. ಪ್ರಶಸ್ತಿ- 10 ಸಾವಿರ ರು. ಮತ್ತು ಬೆಳ್ಳಿ ಪದಕ)
ಸಂಗೀತ ನಿರ್ದೇಶನ : ವಿ.ರವಿಚಂದ್ರನ್‌ (ಚಿತ್ರ- ಏಕಾಂಗಿ)
ಉತ್ತಮ ಛಾಯಾಗ್ರಾಹಕ : ಎಚ್‌.ಎಂ.ರಾಮಚಂದ್ರ (ದ್ವೀಪ)
ಉತ್ತಮ ಬಾಲನಟ : ಮಾಸ್ಟರ್‌ ವಿಜಯ್‌ (ಯುದ್ಧ ಮತ್ತು ಸ್ವಾತಂತ್ರ್ಯ)
ಉತ್ತಮ ಬಾಲನಟಿ : ಬೇಬಿ ದೀಪು (ಪುಟ್ಟಿ)
ಅತ್ಯತ್ತಮ ಕತೆಗಾರ : ಮುನಿರತ್ನ (ಚಿತ್ರ- ಕಂಬಾಲಹಳ್ಳಿ)
ಉತ್ತಮ ಚಿತ್ರಕತೆ : ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು/ರಮಣಿ (ಚಿತ್ರ- ಕೋತಿಗಳು ಸಾರ್‌ ಕೋತಿಗಳು)
ಉತ್ತಮ ಸಂಭಾಷಣೆ : ತಡೂರು ಕೇಶವ (ಚಿತ್ರ- ಧರ್ಮದೇವತೆ)
ಧ್ವನಿಗ್ರಾಹಕ : ಎಲ್‌.ಸತೀಶ್‌ (ಏಕಾಂಗಿ)
ಸಂಕಲನಕಾರ : ಶಾಂ (ಕಂಬಾಲಹಳ್ಳಿ)
ಕಲಾ ನಿರ್ದೇಶನ : ಅರುಣ್‌ ಸಾಗರ್‌ (ಶ್ರೀ ಮಂಜುನಾಥ)
ಉತ್ತಮ ಸಾಹಿತ್ಯ: ಹಂಸಲೇಖ (ಶ್ರೀ ಮಂಜುನಾಥ)
ಹಿನ್ನೆಲೆ ಗಾಯಕ : ರಾಜೇಶ್‌ (ಏಕಾಂಗಿ)
ಹಿನ್ನೆಲೆ ಗಾಯಕಿ : ಬಿ.ಆರ್‌.ಛಾಯಾ (ಗಂಧದ ಬೊಂಬೆ)
ಗ್ರಾಫಿಕ್ಸ್‌ ತಂತ್ರ : ನೀಲಾಂಬರಿ.
ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್‌ ತಿಂಗಳಲ್ಲಿ ನಡೆಯಲಿದೆ.

English summary
Ekangi steals the show in Karnataka State Film Awards!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada