»   » ‘ಶೆಪರ್ಡ್ಸ್‌ ಆನ್‌ ದಿ ಮೂವ್‌ ’ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

‘ಶೆಪರ್ಡ್ಸ್‌ ಆನ್‌ ದಿ ಮೂವ್‌ ’ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

Posted By: Staff
Subscribe to Filmibeat Kannada

ಬೆಂಗಳೂರು : ಸುರೇಶ್‌ ಹೆಬ್ಳೀಕರ್‌ ನಿರ್ದೇಶನದ 'ಶೆಪರ್ಡ್ಸ್‌ ಆನ್‌ ದಿ ಮೂವ್‌" ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಸ್ಲೋವಾಕ್‌ ರಿಪಬ್ಲಿಕ್‌ನ ನಿಟ್ರಾದಲ್ಲಿ ಇತ್ತೀಚೆಗೆ ನಡೆದ 19ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಶೆಪರ್ಡ್ಸ್‌ ಆನ್‌ ದಿ ಮೂವ್‌ ಚಿತ್ರ ಭಾಗವಹಿಸಿತ್ತು. ಈ ಚಿತ್ರವನ್ನು ಎಕೋವಾಚ್‌ ಸಂಸ್ಥೆ ನಿರ್ಮಿಸಿದ್ದು, ಚಿತ್ರ ಎಫ್‌.ಎ.ಓ ಪ್ರಶಸ್ತಿ ಗಿಟ್ಟಿಸಿಕೊಂಡಿದೆ.

ಜೀವನೋಪಾಯಕ್ಕೆ ಕುರಿಗಳನ್ನೇ ನಂಬಿಕೊಂಡಿರುವ ಉತ್ತರಕರ್ನಾಟಕದಲ್ಲಿ ಕಂಡು ಬರುವ ಒಂದು ಜನ ಸಮುದಾಯದ ಕುರಿತ ಈ ಚಿತ್ರವನ್ನು ಹೆಬ್ಳೀಕರ್‌ ನಿರ್ದೇಶಿಸಿದ್ದಾರೆ. ಈ ಸಮುದಾಯದ ಜನರು ಅಲೆಮಾರಿಗಳು. ಮನುಷ್ಯ ಪ್ರಾಣಿ ಹಾಗೂ ಪ್ರಕೃತಿಯ ನಡುವಿನ ಸಂಬಂಧ, ಆರ್ಥಿಕ ಒತ್ತಡದ ನಡುವೆಯೂ ಉಳಿದುಕೊಳ್ಳುವ ಸಂಪ್ರದಾಯ, ಮೌಲ್ಯ ಮತ್ತಿತರ ವಿಷಯಗಳ ಬಗ್ಗೆ ಈ ಚಿತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಬ್ರೆಡ್‌ ಆ್ಯಂಡ್‌ ಪೀಸ್‌ ಫಾರ್‌ ಪೀಪಲ್‌ ಎಂಬ ಘೋಷಣೆಯಾಂದಿಗೆ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ.(ಇನ್ಫೋ ವಾರ್ತೆ)

English summary
Suresh Heblikar bags international award as a Director

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada