»   » 'ಯುಗ'ದ ಗೆಲುವಿನಿಂದ ಬದಲಾದ ವಿಜಯ್ ದುನಿಯಾ!

'ಯುಗ'ದ ಗೆಲುವಿನಿಂದ ಬದಲಾದ ವಿಜಯ್ ದುನಿಯಾ!

Subscribe to Filmibeat Kannada

ಬೆಂಗಳೂರು, ನ.04: ಬಹಳ ದಿನಗಳ ನಂತರ ನಟ ವಿಜಯ್ ಮುಖದಲ್ಲಿ ಮತ್ತೆ ಮಂದಹಾಸ ಮಿನುಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ವರ್ಷ ಚಿತ್ರರಂಗದಿಂದ ನಿಷೇಧಿಸಿತ್ತು . ಈ ಮಧ್ಯೆ ಅವರು ನಟಿಸಿದ 'ಯುಗ" ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.

'ಯುಗ" ಏನಾಗುತ್ತದೋ ಏನೋ ಎಂಬ ಆತಂಕದಲ್ಲಿದ್ದ ವಿಜಯ್ ಕೊನೆಗೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾನೆ. ಕಾರಣ 'ಯುಗ" ಚಿತ್ರಕ್ಕೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ನೋಡಿದ ಪ್ರೇಕ್ಷಕರ ಬಾಯಲ್ಲಿ ಚೆನ್ನಾಗಿದೆ ಅನ್ನುವ ಮಾತು ಕೇಳಿಬರುತ್ತಿದೆ.

ಚಿತ್ರವನ್ನು ಎಲ್ಲರೂ ಮೆಚ್ಚಿ ಬೆನ್ನುತಟ್ಟಿದ್ದಾರೆ. ಇಷ್ಟು ದಿನ ನಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಪ್ರೇಕ್ಷಕರು ಒಪ್ಪಿದ ಮೇಲೆ ಕಲಾವಿದನಿಗೆ ಇದಕ್ಕಿಂತಲೂ ಇನ್ನೇನು ಬೇಕು? ಎಂದು ಕೇಳುವ ಮೂಲಕ ಪ್ರತ್ಯಕ್ಷವಾಗಿಯೊ ಪರೋಕ್ಷವಾಗಿಯೋ ನಾರಾಯಣ್‍ಗೆ ತಕ್ಕ ಉತ್ತರ ಕೊಟ್ಟಿದ್ದಾನೆ. ವಿಜಯ್‌ಗೆ ಚಿತ್ರರಂಗದಿಂದ ನಿಷೇಧ ಹೇರಿದ್ದಕ್ಕೆ ಜನ ಸಾಮಾನ್ಯರು ಕೂಡಾ ಖೇದ ವ್ಯಕ್ತಪಡಿಸಿದ್ದರು.

ಯಾವುದೇ ಗಾಡ್ ಫಾದರ್ ಇಲ್ಲದ. ಹೀರೋಗೆ ಬೇಕಾದ ಯಾವುದೇ ಅಳತೆಗೋಲುಗಳಿಲ್ಲದ ಪ್ರತಿಭಾವಂತ ನಟನಿಗೆ ಗಾಂಧಿನಗರ ನಿಷೇಧ ಹೇರಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪ್ರೇಕ್ಷಕ ಪ್ರಭು ಬೆನ್ನ ಹಿಂದಿದ್ದರೆ ಈ ರೀತಿಯ ವಿಜಯಗಳು ವಿಜಯ್‌ಗೆ ದಕ್ಕುತ್ತಲೇ ಇರುತ್ತವೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada