»   » ಕರೀನಾ ಕನ್ನಡಕ್ಕೆ ಬರುವುದು ಸರೀನಾ?

ಕರೀನಾ ಕನ್ನಡಕ್ಕೆ ಬರುವುದು ಸರೀನಾ?

Posted By:
Subscribe to Filmibeat Kannada

ಸ್ಯಾಂಡಲ್‌ವುಡ್‌ ಮತ್ತೊಬ್ಬ ಬಾಲಿವುಡ್ ನಟಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಇಲ್ಲಿನ ನಟಿಯರು ಬೇರೆ ಭಾಷೆಗಳಿಗೆ ರಫ್ತಾಗುತ್ತಿದ್ದರೆ ಇನ್ನೇನು ತಾನೇ ಮಾಡಿಯಾರು? ಈ ಆಮದು, ರಫ್ತಿನ ವ್ಯವಹಾರ ಸ್ವಲ್ಪ ಪಕ್ಕಕ್ಕಿಟ್ಟು ಯೋಚಿಸಿ, ಕನ್ನಡದಲ್ಲಿ ಪ್ರತಿಭಾವಂತ ನಟಿಯರಿಗೆ ಬರವೇ?

ಕನ್ನಡದ ಗಾಳಿಗಂಧ ಗೊತ್ತಿಲ್ಲದ ಹುಡುಗಿಯರಿಗೆ, ಕೋಟಿ ಕೋಟಿ ರೂಪಾಯಿ ತೆತ್ತು ಕರೆತರುವ ಜರೂರತ್ತಾದರೂ ಏನಿತ್ತು. ಒಂದು ಕಾಲದಲ್ಲಿ ಆರತಿ, ಭಾರತಿ, ಕಲ್ಪನಾ, ಮಂಜುಳ, ಜಯಂತಿ, ಜಯಮಾಲ ಹೀಗೆ ಅಪ್ಪಟ ಕನ್ನಡ ಅಭಿನೇತ್ರಿಯರ ಉದ್ದುದ್ದ ಪಟ್ಟಿಯೇ ಇತ್ತು. ಈಗೆಲ್ಲಿ? ಮೀರಾ ಜಾಸ್ಮಿನ್, ಹಂಸಿಕಾ, ಶ್ರೇಯಾ, ಸೋನಾಲಿ ಬೇಂದ್ರೆ... ಈಗ ಕರೀನಾ ಮುಂದೆ ಪಟ್ಟಿ ಇನ್ನೂ ಬೆಳೆಯಬಹುದು. ಈ ಲಂಬೂ ಆಮದು ನಟಿಗೆ ಕನ್ನಡದ ನಟರನ್ನಾದರೂ ಎಲ್ಲಿ ಹುಡುಕೋಣ? 'ಎತ್ತರ"ದ ಪ್ರಶ್ನೆಗೆ ಉತ್ತರ ಗಾಂಧಿನಗರದ ಜನಕ್ಕೆ ಗೊತ್ತು.

ಇಷ್ಟಕ್ಕೂ ಕನ್ನಡಕ್ಕೆ ಆಮದಾಗುತ್ತಿರುವ ನಟಿ, ತನ್ನ ಮುವ್ವತ್ತು ಪ್ಲಸ್ ವಯಸ್ಸಿನಲ್ಲೂ ಗಾಸಿಪ್ ಕಾಲಂಗಳಲ್ಲಿ ಮಿಂಚುತ್ತಿರುವ ಕರೀನಾ ಕಪೂರ್. ಅಶೋಕ, ಕಭೀ ಖುಷಿ ಕಭೀ ಗಂ, ಡಾನ್, ಫಿದಾ, ಓಂಕಾರ್ ಚಿತ್ರಗಳಲ್ಲಿ ನಟಿಸಿದ್ದ ಈ ಲಂಬೂ ನಟಿ, ಕನ್ನಡದ ಚಿತ್ರವೊಂದರಲ್ಲಿ ನಟಿಸಲು ಒಪ್ಪಿದ್ದಾರೆ ಅನ್ನುವ ಮಾತು ಗಾಂಧಿನಗರದಲ್ಲಿದೆ. ಆ ಚಿತ್ರದಲ್ಲಿ ಪುನೀತ್ ನಾಯಕ.

(ದಟ್ಸ್‌ಕನ್ನಡ ಸಿನಿ ವಾರ್ತೆ)

ಮತ್ತಷ್ಟು ಸ್ಯಾಂಡಲ್‌ವುಡ್ ಸಮಾಚಾರ :
2004: ಗೆದ್ದವರು ವಿರಳ, ಸೋತವರು ಬಹಳ
'ಕನ್ನಡ ನಟಿಯರು ಭಾವಪ್ರಧಾನ ಪಾತ್ರಕ್ಕೆ ಸರಿ"
ತಾರಾ ಮೇಡಂಗೊಂದು ಪತ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada