»   » ಶಾರುಖ್‌ ಖಾನ್‌ ಚಿತ್ರದಲ್ಲಿ ಕನ್ನಡದ ಹುಡುಗಿ ದೀಪಿಕಾ!

ಶಾರುಖ್‌ ಖಾನ್‌ ಚಿತ್ರದಲ್ಲಿ ಕನ್ನಡದ ಹುಡುಗಿ ದೀಪಿಕಾ!

Subscribe to Filmibeat Kannada


ಖ್ಯಾತ ರೂಪದರ್ಶಿ, ಕನ್ನಡತಿ, ನಟಿ ದೀಪಿಕಾ ಪಡುಕೋಣೆ ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ಎದುರು ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿದ್ದಾರೆ.

ಚಿತ್ರದ ಹೆಸರು ‘ಹ್ಯಾಪಿ ನ್ಯೂ ಈಯರ್‌’. 2007ರ ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಸಮಯ ಮೀಸಲಿಟ್ಟುಕೊಳ್ಳುವಂತೆ ನಿರ್ದೇಶಕಿ ಫರಾಹ್‌ಖಾನ್‌, ಆರು ತಿಂಗಳ ಹಿಂದೆಯೇ ದೀಪಿಕಾಗೆ ಸಲಹೆ ನೀಡಿದ್ದರಂತೆ.

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಐಶ್ವರ್ಯ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ದೀಪಿಕಾ, ಅತ್ಯಲ್ಪ ಅವಧಿಯಲ್ಲೇ ಬಾಲಿವುಡ್‌ನಿಂದ ಅವಕಾಶ ಪಡೆದಿರುವುದು ಗಮನಾರ್ಹ.

‘ಐಶ್ವರ್ಯ ’ ಚಿತ್ರದ ನಂತರ, ತಮಿಳು ಚಿತ್ರ ನಿರ್ದೇಶಕ ಗೌತಮ್‌ ಮೆನನ್‌ ತಾವು ಮುಂದೆ ನಿರ್ದೇಶಿಸುವ ಚಿತ್ರದ ನಾಯಕಿ ದೀಪಿಕಾ ಎಂದು ಘೋಷಿಸಿದ್ದರು. ಈ ಚಿತ್ರದ ನಾಯಕ ಸೂರ್ಯ ಎಂದೂ ಹೇಳಿದ್ದರು. ಚಿತ್ರಕ್ಕೆ ಸಂಬಂಧಿಸಿದಂತೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ, ದೀಪಿಕಾ ತಾವು ನಟಿಸುವ ಕುರಿತು ಖಾತ್ರಿಪಡಿಸಿರಲಿಲ್ಲ.

ಈಗಾಗಲೇ ಹಲವು ಬಾಲಿವುಡ್‌ ನಿರ್ಮಾಪಕರು ದೀಪಿಕಾ ಕಾಲ್‌ಶೀಟ್‌ಗೆ ದುಂಬಾಲು ಬಿದ್ದಿದ್ದು, ‘ಹ್ಯಾಪಿ ನ್ಯೂ ಈಯರ್‌’ ಚಿತ್ರ ಮುಗಿಯುವತನಕ ಯಾವ ಚಿತ್ರವನ್ನೂ ಒಪ್ಪಿಕೊಳ್ಳಲಾರೆ ಎಂದು ದೀಪಿಕಾ ನಿರ್ಧರಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada