»   » ಉದಯ ಟೀವಿಗೆ ಉತ್ತಮ ಚಾನಲ್‌ ಗೌರವ

ಉದಯ ಟೀವಿಗೆ ಉತ್ತಮ ಚಾನಲ್‌ ಗೌರವ

Posted By: Staff
Subscribe to Filmibeat Kannada

ಕಿರುತೆರೆಯ ಪುಟ್ಟಣ್ಣ ಕಣಗಾಲ್‌ ಖ್ಯಾತಿಯ ಟಿ.ಎನ್‌.ಸೀತಾರಾಮ್‌ ಅವರ 'ಮನ್ವಂತರ" ಧಾರಾವಾಹಿಗೆ ಟೆಲಿವಿಷನ್‌ ಅಕಾಡೆಮಿ ಹಾಗೂ ಸಿನಿಮಾ ಎಕ್ಸ್‌ಪ್ರೆಸ್‌ನ ಅತ್ಯುತ್ತಮ ಧಾರಾವಾಹಿ ಪ್ರಶಸ್ತಿ ದೊರೆತಿದೆ.

ದಕ್ಷಿಣ ಭಾರತದ ಭಾಷೆಗಳಲ್ಲಿ ಪ್ರಸಾರವಾಗುವ ಉತ್ತಮ ಧಾರಾವಾಹಿ ಹಾಗೂ ಚಾನಲ್‌ಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು - ಸೀತಾರಾಮ್‌ರ 'ಮನ್ವಂತರ" ಅತ್ಯುತ್ತಮ ಕನ್ನಡ ಧಾರಾವಾಹಿಯ ಗೌರವ ಪಡೆದಿದ್ದರೆ, ಅತ್ಯುತ್ತಮ ಕನ್ನಡ ಚಾನಲ್‌ ಪ್ರಶಸ್ತಿ 'ಉದಯ ಟೀವಿ" ಪಾಲಾಗಿದೆ. ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು.

ಉದಯ ಟೀವಿಯಲ್ಲಿ ಪ್ರಸಾರವಾಗುವ ಎಸ್‌.ನಾರಾಯಣ್‌ ನಿರ್ದೇಶನದ 'ಚಂದ್ರಿಕಾ" ಧಾರಾವಾಹಿಯಲ್ಲಿನ ನಟನೆಗಾಗಿ ಹಂಸ ಉತ್ತಮ ನಟಿ ಪ್ರಶಸ್ತಿ ಪಡೆದರು. ಮನ್ವಂತರ ಧಾರಾವಾಹಿಯಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿ ವಿಧಾನಸಭೆಯ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಪಡೆದರು. ಮನ್ವಂತರ ತಂಡದ ಪರವಾಗಿ ಸೀತಾರಾಮ್‌ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಸನ್‌ ಬಳಗದ ನಾಲ್ಕೂ ಚಾನಲ್‌ಗಳು (ಉದಯ, ಸನ್‌, ಜೆಮಿನಿ ಹಾಗೂ ಸೂರ್ಯ) ಅತ್ಯುತ್ತಮ ಚಾನಲ್‌ಗಳೆಂದು ಪ್ರಶಸ್ತಿ ಪಡೆದದ್ದು ವಿಶೇಷ. ದಕ್ಷಿಣದ 30 ಚಾನಲ್‌ ಹಾಗೂ 100 ಕ್ಕೂ ಹೆಚ್ಚು ಧಾರಾವಾಹಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು.(ಏಜೆನ್ಸೀಸ್‌)

English summary
Manvanthara gets best serial award

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada