twitter
    For Quick Alerts
    ALLOW NOTIFICATIONS  
    For Daily Alerts

    ನವರಂಗ್, ತ್ರಿವೇಣಿಯಲ್ಲಿ ರಾಜ್ ಚಿತ್ರಗಳ ಉಚಿತ ಪ್ರದರ್ಶನ

    By Rajendra
    |

    Dr Raj film fest on April 24
    ಜೀ ಕನ್ನಡ ಏಪ್ರಿಲ್ ಮಾಸದಾದ್ಯಂತ ಹಮ್ಮಿಕೊಂಡಿರುವ ರಾಜೋತ್ಸವ ಅಂಗವಾಗಿ ಡಾ. ರಾಜ್‌ಕುಮಾರ್ ಅವರ ವಿಶೇಷ ಚಲನಚಿತ್ರೋತ್ಸವ ಹಮ್ಮಿಕೊಂಡಿದೆ. ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ದಿನವಾದ ಭಾನುವಾರದಂದು (ಏ.24)ಚಿತ್ರೋತ್ಸವ ಹಮ್ಮಿಕೊಂಡಿದ್ದು ಡಾ. ರಾಜ್ ಕುಮಾರ್ ನಟಿಸಿರುವ ನಾಲ್ಕು ಚಿತ್ರಗಳನ್ನು ಬೆಂಗಳೂರಿನ ನವರಂಗ್ ಮತ್ತು ತ್ರಿವೇಣಿ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ.

    ಡಾ.ರಾಜ್‌ಕುಮಾರ್ ಅಭಿನಯದ 'ಬಂಗಾರದ ಮನುಷ್ಯ', 'ಗಂಧದಗುಡಿ', 'ಬಬ್ರುವಾಹನ' ಮತ್ತು 'ಜೀವನಚೈತ್ರ' ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು ವಿವರ ಹೀಗಿದೆ.
    ಏ.24ರಂದು ನವರಂಗ್ ಚಿತ್ರಮಂದಿರದಲ್ಲಿ ಬೆಳಗ್ಗೆ 10ಕ್ಕೆ ಬಂಗಾರದ ಮನುಷ್ಯ ಅದೇ ದಿನ ಮಧ್ಯಾಹ್ನ 1ಕ್ಕೆ ಗಂಧದ ಗುಡಿ. ತ್ರಿವೇಣಿ ಚಿತ್ರಮಂದಿರದಲ್ಲಿ ಸಂಜೆ 4ಕ್ಕೆ ಬಬ್ರುವಾಹನ ಹಾಗೂ ರಾತ್ರಿ 7ಕ್ಕೆ ಜೀವನ ಚೈತ್ರ. ಇಷ್ಟು ಚಿತ್ರಗಳನ್ನು ಒಂದೇ ದಿನ (ಏ.24)ರಂದು ನೋಡಿ ಆನಂದಿಸಬಹುದು.

    ಈ ಚಿತ್ರೋತ್ಸವಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು ಆಸಕ್ತರು ಜೀ ಕನ್ನಡ ಕಛೇರಿಗೆ ಭೇಟಿ ನೀಡಿ ನಿಯಮಿತ ಪಾಸುಗಳನ್ನು ಪಡೆಯಬಹುದು.ಸಂಪರ್ಕಿಸಬೇಕಾದ ವಿಳಾಸ ಮತ್ತು ದೂರವಾಣಿ ಸಂಖ್ಯೆ; ಜೀ ಕನ್ನಡ ಕಛೇರಿ, ನಂ. 39, 3ನೇ ಮಹಡಿ, ಯುನೈಟೆಡ್ ಮ್ಯಾನ್‌ಷನ್, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-01. ದೂರವಾಣಿ; 080-66109999.

    English summary
    Rajkumar film fest on 24th April 2011 which will organize by Zee Kannada. Dr.Raj's evergreen films Bangarada Manushya, Jeevana Chitra, Babruvaahana, Gandhada Gudi to be shown in Navaran and Triveni theaters on Sunday 24th. Admission is free for all visitors during film festival.
    Thursday, April 21, 2011, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X