For Quick Alerts
  ALLOW NOTIFICATIONS  
  For Daily Alerts

  ಚಿತ್ರಕಲಾ ಪರಿಷತ್ತಿನಲ್ಲಿ ಡಾ.ರಾಜ್‌ಕುಮಾರ್ ಚಿತ್ರ ಚಿತ್ತಾರ

  By Rajendra
  |

  ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಬಹಳಷ್ಟು ಛಾಯಾಚಿತ್ರಗಳು ಈಗಾಗಲೆ ಅಭಿಮಾನಿ ದೇವರುಗಳ ಮನೆ ಮನಗಳನ್ನು ಅಲಂಕರಿಸಿವೆ. ವರನಟನ ಮತ್ತಷ್ಟು ಅಪರೂಪದ ಛಾಯಾಚಿತ್ರಗಳನ್ನು ಕಣ್ತುಂಬಿಸಿಕೊಳ್ಳಬೇಕೆ? ಹಾಗಿದ್ದರೆ ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಬನ್ನಿ."ಡಾ.ರಾಜ್‌ಕುಮಾರ್ ಚಿತ್ರ ಚಿತ್ತಾರ"ವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದೆ.

  ಇದೇ ಏ.22ರಿಂದ ಕುಮಾರ ಕೃಪಾ ರಸ್ತೆ ಕರ್ನಾಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಅಣ್ಣಾವ್ರ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಅಣ್ಣಾವ್ರ ಅಪರೂಪದ ಛಾಯಾಚಿತ್ರಗಳನ್ನು ಭವಾನಿ ಲಕ್ಷ್ಮೀನಾರಾಯಣ್ ಅವರು ಸೆರೆಹಿಡಿದಿದ್ದಾರೆ. ಪ್ರದರ್ಶನ ಏ.24ರಂದು (ಡಾ.ರಾಜ್ ಹುಟ್ಟುಹಬ್ಬ) ಕೊನೆಗೊಳ್ಳಲಿದೆ.

  ಪವರ‍್ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಬಿ ಝಳಕಿ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಉಪಸ್ಥಿತರಿದ್ದರು.

  English summary
  On the occasion of Dr Rajkumar birth anniversary on April 24 – photo exhibition of Dr Rajakumar is organised by the Karnataka Chalanachitra Academy at Karnataka Chitrakala parishath. Power star Puneet Rajakumar is inaugurating this two days photo exhibition of his father Dr Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X