ಪೂಜಾಗಾಂಧಿಗೆ ಇನಿಯ'ನಾದ ಬಾಲಾಜಿ

By Staff

ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರ ಬಾಬು ಅವರು ನಿರ್ಮಿಸುತ್ತಿರುವ ಇನಿಯ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ದೇಶಕ ಮುಸ್ಸಂಜೆ' ಮಹೇಶ್ ತಿಳಿಸಿದ್ದಾರೆ.

ಹಾಡುಗಳ ಚಿತ್ರೀಕರಣಕ್ಕೆ ದೂರದ ಮಲೇಶ್ಯಾ ಮತ್ತು ಕೌಲಾಲಂಪುರಕ್ಕೆ ತೆರೆಳಿದ 20 ಸದಸ್ಯರ ಇನಿಯ'ನ ತಂಡ ಅಲ್ಲಿ ಇನಿಯ ಇನಿಯ ಇನಿಯ ನೀನೆನೆ ನನ್ ಇನಿಯ' ಮತ್ತು ಸಂಗೀತ ನಿರ್ದೇಶಕ ವಿ.ಶ್ರೀಧರ್ ರಚಿಸಿರುವ ಮುದ್ದಾದ ಈ ನಗುವಿಗೆ, ಕೊಡಲೇನು ಅದರ ಬದಲಿಗೆ' ಎಂಬ ಗೀತೆಗಳನ್ನು ಚಿತ್ರೀಕರಿಸಿಕೊಂಡು ನಗರಕ್ಕೆ ಹಿಂತಿರುಗಿದೆ. ಕೂಲ್ ಜಯಂತ್ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿ ಬಂದ ಈ ಎರಡು ಗೀತೆಗಳಲ್ಲಿ ಬಾಲಾಜಿ ಹಾಗೂ ಪೂಜಾ ಗಾಂಧಿ ಅಭಿನಯಿಸಿದ್ದರು.

ಈ ಹಾಡುಗಳ ಚಿತ್ರೀಕರಣ ಪೂರ್ಣವಾದ ಮೇಲೆ ಕೌಲಾಲಂಪುರದ ಶ್ರೀಸುಬ್ರಹ್ಮಣ್ಯ ದೇಗುಲದಲ್ಲಿ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರದ ಚಿತ್ರೀಕರಣ ಮುಕ್ತಾಯವಾಯಿತು ಎನ್ನುತ್ತಾರೆ ನಿರ್ಮಾಪಕ ಶೈಲೇಂದ್ರ ಬಾಬು.

ಮುಸ್ಸಂಜೆ' ಮಹೇಶ್ ಇನಿಯ'ನಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮದುಸೂಧನ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸುಂದರನಾಥ್ ಸುವರ್ಣ ಕ್ಯಾಮೆರಾ, ಕವಿರಾಜ್, ಶ್ರೀಧರ್ ಗೀತರಚನೆ, ಮೋಹನ್ ಸಂಕಲನ, ರವಿವರ್ಮರ ಸಾಹಸವಿರುವ ಚಿತ್ರದ ತಾರಾಬಳಗದಲ್ಲಿ ಬಾಲಾಜಿ, ಪೂಜಾ ಗಾಂಧಿ, ಜೈಜಗದೀಶ್, ಊರ್ವಶಿ, ರೇಖಾ, ಜ್ಯೋತಿ, ನೀನಾಸಂ ಅಶ್ವತ್, ಹರೀಶ್ ರಾಯ್, ಲೋಕನಾಥ್, ಬಿ.ವಿ.ರಾಧ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ:'ಇನಿಯ' ಜತೆ ಮಲೇಶ್ಯಾಗೆ ಹಾರಿದ ಪೂಜಾಗಾಂಧಿ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X