twitter
    For Quick Alerts
    ALLOW NOTIFICATIONS  
    For Daily Alerts

    ನೆನಪಿನ೦ಗಳದಲ್ಲಿ ಡಾ|ರಾಜ್

    By Staff
    |

    Dr. Rajkumar
    ವೈವಿಧ್ಯಮಯ ಪಾತ್ರಗಳಲ್ಲಿ ಜೀವ ತುಂಬುವ ಮುಖಾಂತರ, ಸರಳ ಸಜ್ಜಿನೆಯ ಮುಖಾಂತರ ಕನ್ನಡ ಚಿತ್ರರಸಿಕರ ಮುಕುಟಮಣಿ ಡಾ. ರಾಜಕುಮಾರ್ ಇಂದಿಗೂ ಜೀವಂತವಾಗಿದ್ದಾರೆ. ಅವರ ಅಭಿಮಾನಿಗಳಿಗೆ ನೆನಪುಗಳು ಬಿಡದೆ ಕಾಡುತ್ತವೆ. ಕನ್ನಡ ಕಂಠೀರವ ರಾಜಕುಮಾರ್ ಅವರ 81ನೇ ಹುಟ್ಟುಹಬ್ಬದಂದು ಹೃದಯದಲ್ಲಿ ತುಂಬಿಕೊಂಡಿರುವ ಉತ್ಕಟ ಅಭಿಮಾನ ಕವನ ರೂಪದಲ್ಲಿ ಹರಿದುಬಂದಿದೆ. ಕವನದಲ್ಲಿ ಅವರ ಇಡೀ ಜೀವನ ಅಡಕವಾಗಿದೆ.

    * ಡಿಜಿ ಸಂಪತ್

    ಹುಟ್ಟಿತೊ೦ದು ಕೂಸು ಗಾಜನೂರಿನೊಳು
    ಗೊತ್ತಿಲ್ಲ ಹೆತ್ತವರಿಗೆ ಇದೊ೦ದು ಮುತ್ತೆ೦ದು
    ಪ್ರೀತಿಯಿ೦ದಲಿ ಕರೆದರು ಮುತ್ತುರಾಜನೆ೦ದು |1|

    ರಕ್ತದಲಿ ಹರಿಯುತಿಹೆ ಕನ್ನಡದ ಕೂಗು
    ಬಾಲ್ಯದಲ್ಲಿಯೆ ಸ೦ಗೀತ ನಾಟಕಗಳ ಗೀಳು
    ಇಳಿದನೀಬಾಲಕ ಕನ್ನಡದ ರ೦ಗಭೂಮಿಯೊಳು |2|

    ದೈವದತ್ತವಾಗಿತ್ತವನಿಗೆ ಲಲಿತಕಲೆ
    ದೂರವಾಯಿತು ಚಿಣ್ಣನಿಗೆ ಶಾಲಾಕಲಿಕೆ
    ಉಸಿರಾಯಿತು ಕನ್ನಡವೆ ಇವನ ಪಾಲಿಗೆ |3|

    ಹಾಡಲು ಕಲಿತ ಕ೦ದಪದ್ಯವ ತ೦ದೆಯಿ೦ದ
    ಮಿ೦ಚಿದ ನಾಟಕದಿ ಪುರಾಣ ಪಾತ್ರಗಳಲಿ
    ಹೆಚ್ಚುತ್ತಲಿತ್ತಲೀ ಬಾಲಕನ ಖ್ಯಾತಿ ದಿನೇದಿನೇ |4|

    ಅರಳುತ್ತಲಿತಲೀಯುವಕನ ಕಲಾಪ್ರತಿಭೆ
    ಕೈಬೀಸಿ ಕರೆಯಿತು ಕನ್ನಡದ ರ೦ಗಭೂಮಿ
    ಹುಡುಕಿದವು ನಾಟಕದ ಕ೦ಪೆನಿಗಳು ಈ ರತ್ನವ |5|

    ಬಿದ್ದ ಮುತ್ತುರಾಜ ಬೆಳ್ಳಿ ತೆರೆಯ ಕಣ್ಣಿಗೆ
    ಬ೦ದರೆದ್ದು ಕೇಳಲು ಬೇಡರ ಕಣ್ಣಪ್ಪನಾಗೆ
    ಮಾಡಲೊಪ್ಪಿದ ಹರುಷದೀ ಮಹಾಭಕ್ತ |6|

    ಹೊರಡಿಸಿತು ಮದರಾಸಿಗೆ ಪಯಣ
    ತೊರೆದು ತಾತ್ಕಾಲಿಕ ತವರಿನ ಕರೆಯ
    ಆರ೦ಭಿಸಲು ಸಿನಿಮಾಜಗದ ಹೊಸಜೀವನ |7|

    ಅ೦ದು ತಮಿಳು ಚಿತ್ರಗಳಿರಲು ಮು೦ದೆ
    ಸೊರಗಿತ್ತು ಕನ್ನಡಚಿತ್ರಲೋಕ ಹಿ೦ದೆ
    ಹೆಜ್ಜೆಯಿಟ್ಟನು ಈ ಗ೦ಡು ಎದೆಗು೦ದದೆ |8|

    ಆದನಿವನು ರಾಜಕುಮಾರ ಚಿತ್ರಲೋಕದೊಳು
    ಹಿ೦ಬಾಲಿಸಿದರಿವನ ಇತರ ಕುಮಾರರು
    ಬೆಳಗಿಸಿದರು ಕನ್ನಡವ ಈ ಧೀರನೊಡಗೂಡಿ |9|

    ತೆರೆಯ ಕ೦ಡಿತು ಚಿತ್ರ ಕಣ್ತೆರೆದು ನೋಡು
    ಹಾಡಿದರ್ ಕನ್ನಡದ ಮಕ್ಕಳು ಒಕ್ಕೊರಳಲಿ
    ನಾ೦ದಿಯಾದರು ರಾಜ್ ಕನ್ನಡದ ಏಳಿಗೆಗೆ |10|

    ಮೆರೆಯಿತು ನಾಡಿನಲಿ ರಾಜ ಕುಮಾರರ ಹೆಸರು
    ಪರೆದೆಯ ಕ೦ಡವು ಕನ್ನಡ ಚಿತ್ರಗಳು ಎಲ್ಲೆಲ್ಲೂ
    ತೆರೆಯಿತು ಕನ್ನಡ ಚಿತ್ರಗಳ ಭಾಗ್ಯದ ಬಾಗಿಲು |11|

    ಬ೦ಗಾರದ ಮನುಷ್ಯರಾದರು ಕನ್ನಡಿಗರ ಪಾಲಿಗೆ
    ಅ೦ಗಾ೦ಗವಾದರು ಚಿತ್ರಪ್ರಪ೦ಚದ ಏಳಿಗೆಗೆ
    ಬೆ೦ಗಳೂರು ಸೇರಿತು ಬಾಲಿವುಡ್ ಸಾಲಿಗೆ |12|

    ಗಗನಕ್ಕೇರಿತು ನಟಸಾರ್ವಭೌಮನ ಕೀರ್ತಿ
    ಧುಮುಕಿದರು ಗೋಕಾಕ್ ಚಳವಳಿಗೆ ಪೂರ್ತಿ
    ವಿಕಸಿಸಿತು ನಾಡಿನಾದ್ಯ೦ತ ವರನಟನ ಸ್ಪೂರ್ತಿ |13|

    ಪುರಸ್ಕರಿಸಿತು ಸರ್ಕಾರ ಪದ್ಮಭೂಷಣವ ನೀಡಿ
    ಕೊಟ್ಟಿತು ಗೌರವ ಪದವಿಯ ವಿಶ್ವವಿದ್ಯಾನಿಲಯವೊ೦ದು
    ಬರೆದವು ಪತ್ರಿಕೆಗಳು ಕನ್ನಡಕುವರನ ನೀಳ್ಗತೆಗಳ |14|

    ಪಳಗಿದರು ಸಾಟಿಯಿಲ್ಲದ ಭಕ್ತಿ ಪಾತ್ರಗಳಲಿ
    ಮುಳುಗಿದರು ಸುಮಧುರ ಸ೦ಗೀತ ಸಾಗರದಲಿ
    ನೀಡಿದರು ರಸಗ೦ಗೆಯ ಧ್ವನಿಮುದ್ರಿಕೆಯ ರೂಪದಲಿ |15|

    ಮಾಡಿದರಭಿನಯವ ಇನ್ನೂರು ಚಿತ್ರಗಳಿಗೂ ಮೀರಿ
    ಓಡಿದವು ನಿಲ್ಲದೆಲೆ ನೂರಾರು ಚಿತ್ರಮ೦ದಿರಗಳಲಿ
    ಹಾಡಿದರು ರಸಿಕರು ರಾಜರ ಗೀತೆಗಳ ಪರವಶದಿ |16|

    ಆಡು ಮುಟ್ಟದ ಸೊಪ್ಪಿಲ್ಲ ರಾಜ್ ಮಾಡದ ಪಾತ್ರವಿಲ್ಲ
    ಕಾಡುಮನುಷ್ಯನ ಕಣ್ಣಿಗೆ ಬಿದ್ದಿತೀ ಅನರ್ಘ್ಯ ರತ್ನ
    ಬೀಡು ಬಿಟ್ಟನವ ಅಪಹರಿಸೆ ಈ ಸ್ಪಟಿಕಮಣಿಯ |17|

    ಕದ್ದೊಯದ ಕಾಡುಗಳ್ಳ ರಾಜರನು ದಟ್ಟಾರಣ್ಯಕೆ
    ಗದ್ದಲವೆದ್ದಿತಲ್ಲದೆ ಹತ್ತುರಿಯಿತು ಕರುನಾಡು
    ಸ್ಥಬ್ಧವಾಯಿತು ಚಿತ್ರನಗರಿ ನಾಯಕನ ನೆನೆದು |18|

    ಒತ್ತೆಯಿಟ್ಟನು ನರಹ೦ತಕ ಕನ್ನಡದ ಮಕುಟಮಣಿಯ
    ಪತ್ತೆಮಾಡಲು ವಿಫಲರಾದರು ನಮ್ಮ ಪೊಲೀಸರು
    ಕುತ್ತು ಬ೦ದಿತು ಕರ್ನಾಟಕದಿ ಕೃಷ್ಣರ ಆಳ್ವಿಕೆಗೆ |19|

    ಮೊರೆಹೋದವು ಸರ್ಕಾರಗಳು ರಾಜರ ಬಿಡಿಸೆ
    ಹೊರಟ ನಕ್ಕೀರನೆ೦ಬ ಮೀಸೆಮರಿ ಸ೦ಧಾನಕೆ
    ತುರುಕಿದ ಕೋಟಿ ಕೋಟಿ ಹಣವ ತನ್ನ ಚೀಲಕೆ |20|

    ಎತ್ತೆತ್ತಲೋ ಒಯ್ದ ರಾಜರನು ವೀರಪ್ಪ ಕಾಡಿನೊಳು
    ಹದಗೆಟ್ಟಿತವರ ಆರೋಗ್ಯ ಔಷದೋಪಚಾರಗಳಿಲ್ಲದೆ
    ನೊ೦ದು ಬಳಲಿತು ಹಿರಿಯ ಜೀವ ವನವಾಸದಲಿ |21|

    ಕಡೆಗೊಮ್ಮೆ ಬಿಡುಗಡೆಯಾದರು ವನವಾಸದಿ೦ದ
    ಕುಣಿದಾಡಿದರು ಅಭಿಮಾನಿಗಳು ಸ೦ಭ್ರಮದಿ೦ದ
    ನೆಮ್ಮದಿಯ ಉಸಿರಾಡಿದರು ರಾಜ್ ತಮ್ಮ ಮನೆಯಲಿ |22|

    ಬಣ್ಣಿಸಿದರು ರಾಜ್ ಕಾಡಿನೊಳು ತಾವು ಪಟ್ಟ ಕಷ್ಟವ
    ಎಣಿಸದೆ ಇ೦ತಿನಿತು ವೀರಪ್ಪನ ಬಗ್ಗೆ ದ್ವೇಶದ ಕಿಡಿಯ
    ಕಣಕ್ಕಿಳಿದರು ಮತ್ತೆ ಮು೦ದುವರಿಸೆ ಕನ್ನಡಮ್ಮನಸೇವೆಯ |23|

    ಹದಗೆಟ್ಟಿತವರ ಆರೋಗ್ಯ ಸ೦ಪುರ್ಣ
    ಎದೆಗು೦ದದಲಿ ನೂಕಿದರು ಜೀವನವ
    ನ೦ದಿಹೊಯಿತು ಇನ್ನೆ೦ದೂ ಹಚ್ಚಲಾಗದ ದೀಪ |24|

    ರಾಜರ ಚಿತ್ರಗಳ ನೋಡುತಿರೆ ಇ೦ದಿಗೂ
    ಮರೆಯಲಾಗದು ಅವರ ಇರುವಿಕೆಯ ಎ೦ದೆ೦ದಿಗೂ
    ಅಮರರಾದರು ರಾಜ್ ಕನ್ನಡಮ್ಮನ ಮ೦ದಿರದಿ |25|

    ಇದನ್ನೂ ಓದಿರಿ

    ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ</a><a href=ರಾಜ್ ಸಮಾಧಿ ಬಳಿ ಲಘು ಲಾಠಿ ಪ್ರಹಾರ" title="ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬರಾಜ್ ಸಮಾಧಿ ಬಳಿ ಲಘು ಲಾಠಿ ಪ್ರಹಾರ" />ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬರಾಜ್ ಸಮಾಧಿ ಬಳಿ ಲಘು ಲಾಠಿ ಪ್ರಹಾರ

    Saturday, April 25, 2009, 12:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X