ಭಾರತ ರತ್ನಕ್ಕೆ ಡಾ.ರಾಜ್ ಕುಮಾರ್ ಹೆಸರು ಶಿಫಾರಸು

By Rajendra

State to recommend Raj for Bharat Ratna
ವರನಟ ಡಾ.ರಾಜ್‌ಕುಮಾರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಕೂಗಿಗೆ ರಾಜ್ಯ ಸರ್ಕಾರವೂ ಸೂಕ್ತವಾಗಿ ಸ್ಪಂದಿಸಿ ಡಾ.ರಾಜ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ವಾರ್ತಾ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ ಹುಟ್ಟುಹಬ್ಬ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು.

"ಡಾ.ರಾಜ್‌ಗೆ ಭಾರತ ರತ್ನ ಬರಬೇಕಾಗಿತ್ತು ಎಂಬ ಎಲ್ಲ ಕನ್ನಡಿಗರಕನಸನ್ನು ನನಸು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ". ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಅವರು ನಾಡು ನುಡಿಗೆ ಸಲ್ಲಿಸಿದ ಸೇವೆ ಅಮೋಘ. ಆರಂಭದ ದಿನಗಳಲ್ಲಿ ಕನ್ನಡ ಚಿತ್ರರಂಗ ನೆಲೆಕಂಡುಕೊಳ್ಳಲು ಹೆಣಗಾಡುತ್ತಿತ್ತು. ಆಗ ರಾಜ್ ಹಾಕಿಕೊಟ್ಟ ಭದ್ರ ಬುನಾದಿ ಕನ್ನಡ ಚಿತ್ರರಂಗ ಬೆಳೆಯಲು ಸಹಕಾರಿಯಾಯಿತು ಎಂದರು.

ಕನ್ನಡಕ್ಕೆ ತನ್ನದೇ ಆದಂತಹ ಸ್ವಂತಿಕೆಯನ್ನು ತಂದುಕೊಟ್ಟವರು ಡಾ.ರಾಜ್. ನಾಡು ನುಡಿ ಹಾಗೂ ಸಂಸ್ಕೃತಿಗೆ ಅಪಾಯ ಎದುರಾದಾಗಲ್ಲೆಲ್ಲಾ ರಾಜ್ ಹೋರಾಟಕ್ಕೆ ಇಳಿಯುತ್ತಿದ್ದರು ಎಂದು ಗೃಹ ಸಚಿವ ಆರ್ ಅಶೋಕ್ ಹೇಳಿದರು. ಇದಕ್ಕೆ ಸಂಸದ ಅನಂತ್ ಕುಮಾರ್ ಅವರು ಕೂಡ ಧ್ವನಿಗೂಡಿಸಿದರು. ರಾಜ್ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

More from Filmibeat

English summary
The Karnataka State Government plans to recommend thespian Dr Rajkumar’s name for Bharat Ratna, the highest civilian award of the country for his outstanding contribution to the film industry. Present at the 83rd birth anniversary of Dr Rajkumar, Chief Minister BS Yeddyurappa made this announcement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X