ದರ್ಶನ್ ಜಾಮೀನು ಅರ್ಜಿ ಅ.7ಕ್ಕೆ ಮುಂದೂಡಿಕೆ

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಇಂದು 10.15ಕ್ಕೆ ಹೈಕೋರ್ಟ್‌ಗೆ ಹಾಜರಾಗಿ ತಮ್ಮ ಅಹವಾಲನ್ನು ಸಲ್ಲಿಸಿದರು. ವೈಯಕ್ತಿಕ ಕಾರಣಕ್ಕೆ ದರ್ಶನ್ ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿರಲಿಲ್ಲ. ಇದು ಅವರ ಕೌಟುಂಬಿಕ ಸಮಸ್ಯೆ. ಹಾಗಾಗಿ ಜಾಮೀನು ಮಂಚೂರು ಮಾಡುವಂತೆ ನ್ಯಾಯಾಲಯಕ್ಕೆ ದರ್ಶನ್ ಪರ ವಕೀಲ ವೆಂಕಟರೆಡ್ಡಿ ಮನವಿ ಮಾಡಿದರು.
ಹೈಕೋರ್ಟ್ ವಿಚಾರಣೆಯನ್ನು ಅ.7ಕ್ಕೆ ಮುಂದೂಡಿದೆ. ಏತನ್ಮಧ್ಯೆ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಲು ಮತ್ತೆ ಕಾಲಾವಕಾಶ ಕೋರಿದ್ದಾರೆ. ಈ ಸಂದರ್ಭದಲ್ಲಿ ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ದರ್ಶನ್ ಸಹೋದರ ದಿನಕರ್ ತೂಗುದೀಪ ಹಾಜರಿದ್ದರು. (ಒನ್‌ಇಂಡಿಯಾ ಕನ್ನಡ ಸಿನಿವಾರ್ತೆ)
English summary
Karnataka high court on Thursday adjourned to October 7 the bail application of popular Kannada actor, Darshan, who was arrested for allegedly assaulting and threatening his wife.


Click it and Unblock the Notifications