ಬರುತ್ತಿದ್ದಾರೆ ಬಾಂಬೆ, ರೋಜಾ ಅರವಿಂದಸ್ವಾಮಿ

ಇದೀಗ ಮತ್ತೆ ಸಿನಿಮಾಯಾನಕ್ಕೆ ಸಜ್ಜಾಗುತ್ತಿದ್ದಾರೆ, ಜಗತ್ತಿನ ಅತಿ ಸುಂದರ ಸ್ಟಾರ್ ಅರವಿಂದ ಸ್ವಾಮಿ. ಕರೆತರುತ್ತಿದ್ದಾರೆ ನಿರ್ದೇಶಕ ತಿರು. ಆದರೆ ಈ ಬಾರಿ ಹೀರೋ ಆಗಿ ಅಲ್ಲ, ವಿಲನ್ ಪಾತ್ರದ ಮೂಲಕ. ಪ್ರತಿಭೆ ಮತ್ತು ಚೆಲುವಿನ ಸಂಗಮವಾಗಿರುವ ಈ ಅರವಿಂದಸ್ವಾಮಿ ಮತ್ತೆ ಬರುತ್ತಿರುವುದು ಚಿತ್ರರಂಗದ ಅದೃಷ್ಟ ಅನ್ನಲೇಬೇಕು. ಈ ಸುರಸುಂದರಾಂಗ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ದುರಂತಗಳ ಸರಮಾಲೆಯನ್ನೇ ಎದುರಿಸಿದ್ದಾರೆ.
1994 ರಲ್ಲಿ ಲೆಕ್ಷರರ್ ಗಾಯತ್ರಿಯನ್ನು ಮದುವೆಯಾಗಿದ್ದ ಈ ಸ್ವಾಮಿ, ಅಧಿರಾ ಮತ್ತು ರುದ್ರ ಹೆಸರಿನ ಮಗಳು-ಮಗನೊಂದಿಗೆ ಸುಖದಾಂಪತ್ಯದ ಕನಸು ಕಂಡಿದ್ದರು. ಆದರೆ 2003 ರಲ್ಲಿ ಮೂಡಿದ ದಾಪಂತ್ಯದಲ್ಲಿನ ಬಿರುಕು 2010ರಲ್ಲಿ ವಿಚ್ಛೇದನದೊಂದಿಗೆ ಕೊನೆಗೊಂಡಿದೆ. ಈಗ ಅರವಿಂದ ಸ್ವಾಮಿ ಫ್ರೀ ಬರ್ಡ್. ಯಶಸ್ವಿಯಾಗಿ ಹಾರಾಡಲಿ ಎಂಬುದು ಎಲ್ಲರ ಆಸೆ, ಹಾರೈಕೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actor Aravind Swamy returns to film industry very soon in Director Thiru's movie. Roja and Bombay fame this aravinda swamy has lot of fans all over India.


Click it and Unblock the Notifications











