»   » ಭರ್ಜರಿ ಗಳಿಕೆಯತ್ತ ಗಣೇಶ್ ರ ಸಂಗಮ

ಭರ್ಜರಿ ಗಳಿಕೆಯತ್ತ ಗಣೇಶ್ ರ ಸಂಗಮ

Subscribe to Filmibeat Kannada

ಎಸ್ ವಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಂಡ ಸಂಗಮ ಚಿತ್ರ ಉತ್ತಮ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಈ ಚಿತ್ರ ಎರಡನೇ ವಾರದಲ್ಲೂ ಗಳಿಕೆಯಲ್ಲಿ ತನ್ನ ಸ್ಥಾನವನ್ನು ಕಾಯ್ದು ಕೊಂಡಿದೆ.

ರು. 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಗಮ ಇದುವರೆಗೆ 9 ಕೋಟಿ ರು.ಗಳಷ್ಟು ಭರ್ಜರಿ ವಹಿವಾಟು ನಡೆಸಿದ್ದು ನಿರ್ಮಾಪಕರ ಮಡಿಲು ತುಂಬಿಸಿದೆ. ಭಾರಿ ಎನ್ನಬಹುದಾದ ರು. 98 ಲಕ್ಷಕ್ಕೆ ಟೆಲಿವಿಷನ್ ಹಕ್ಕನ್ನ ಸುವರ್ಣ ಚಾನೆಲ್ ಪಡೆದುಕೊಂಡಿದೆ. 58 ಲಕ್ಷ ರೂಗಳಿಗೆ ಚಿತ್ರದ ಆಡಿಯೋ ಹಕ್ಕನ್ನ ಝೇಂಕಾರ್ ಆಡಿಯೋ ಸಂಸ್ಥೆ ಪಡೆದು ಕೊಂಡಿತ್ತು.

ಬೆಂಗಳೂರು, ಕೋಲಾರ, ತುಮಕೂರು ಮತ್ತು ಮೈಸೂರ್ ವಲಯಕ್ಕೆ ಝೇಂಕಾರ್ ಕಂಪನಿ ವಿತರಣೆ ಜವಾಬ್ದಾರಿಯನ್ನು ಹೊತ್ತ್ತಿದೆ. ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ ಮತ್ತು ಮಂಗಳೂರು ವಲಯದಲ್ಲೂ ಸಂಗಮ ಉತ್ತಮ ಗಳಿಸುತ್ತಿದ್ದು ಕೆಲವೊಂದು ಚಿತ್ರಮಂದಿರಗಳು ಪ್ರದರ್ಶನಗಳನ್ನು ಹೆಚ್ಚಿಸಿವೆ. ತೆಲುಗು ಚಿತ್ರಗಳಿಗೆ ಅತ್ಯಧಿಕ ಪ್ರಾಧಾನ್ಯತೆ ಕೊಡುವ ಬಳ್ಳಾರಿಯಲ್ಲಿ ಸಂಗಮ ಪ್ರದರ್ಶನ ಒಂದಕ್ಕೆ ರು.19000 ಗಳಿಸಿ ದಾಖಲೆ ನಿರ್ಮಿಸಿದೆ.

ತನ್ನ ಪ್ರಥಮ ನಿರ್ದೇಶನದಲ್ಲಿ ರವಿ ವರ್ಮ ಉತ್ತಮ ಹೆಸರನ್ನ ಗಳಿಸಿದ್ದಾರೆ, ಕನ್ನಡದಲ್ಲಿ ಪ್ರಥಮ ಬಾರಿಗೆ ಸಂಗೀತ ನಿರ್ದೇಶಿಸಿದ್ದ ದೇವಿಶ್ರೀ ಪ್ರಸಾದ್ ಅವರ ಬೇಡಿಕೆ ಕೂಡ ಹೆಚ್ಚಾಗಿದೆ. ಎಲ್ಲಾ ಗಣೇಶನ ಮಹಿಮೆ!!

(ದಟ್ಸ್ ಕನ್ನಡ ಸಿನಿವಾರ್ತೆ)

ಮಿಂಚು ಗುಡುಗು ಮಳೆ ತಂಗಾಳಿಯ 'ಸಂಗಮ'
ಗಣೇಶ್, ವೇದಿಕಾ ಸಂಗಮಕ್ಕೆ ಡಿಟಿಎಸ್ ಸ್ಪರ್ಶ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada