ಆಡಿಯೋ ಬಿಡುಗಡೆಗೆ idea ಮಾಡಿದ ನಮ್ಮಣ್ಣ ರಮೇಶ್

ರಮೇಶ್ ಅರವಿಂದ್ ಎಂಬ ಅಚ್ಚ ಕನ್ನಡದ ಸ್ಪುರದ್ರೂಪಿ ನಟ ಏನೇ ಮಾಡಿದರೂ ವಿಭಿನ್ನವಾಗಿ ಮಾಡುತ್ತಾರೆ, ಜನರನ್ನು ಮೆಚ್ಚಿಸುತ್ತಾರೆ ಎಂಬುದಕ್ಕೆ ಲೇಟೆಸ್ಟ್ ಉದಾಹರಣೆ ಇಲ್ಲಿದೆ. ಬಿಡುಗಡೆಗೆ ತಯಾರಾಗಿರುವ ಅವರ ಚಿತ್ರ 'ನಮ್ಮಣ್ಣ ಡಾನ್' ಆಡಿಯೋ ಬಿಡುಗಡೆಯನ್ನು ಸಿಡಿ, ಕ್ಯಾಸೆಟ್ ಬಿಡುಗಡೆ ಮಾಡುವ ಮೂಲಕ ಮಾಡದೇ ಮೊಬೈಲ್ ಮೂಲಕ ಮಾಡಿದ್ದಾರೆ.

ಹೇಗಿದೆ ನೋಡಿ ರಮೇಶ್ ಐಡಿಯಾ! ಐಡಿಯಾ ಕಂಪನಿ ಜೊತೆ ರಮೇಶ್ ಒಪ್ಪಂದ ಮಾಡಿಕೊಂಡಿದ್ದಾರೆ. ನೀವು ಐಡಿಯಾ ಕಂಪನಿ ಚಂದಾದಾರರಾಗಿದ್ದಲ್ಲಿ '543213' ನಂಬರಿಗೆ ಡಯಲ್ ಮಾಡಿ ನಮ್ಮಣ್ಣ ಡಾನ್ ಚಿತ್ರದ 3 ಹಾಡುಗಳನ್ನು ಕೇಳಿ ನಿಮಗೆ ಬೇಕಾದ ಹಾಡುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ದಕ್ಷಿಣ ಭಾರತದಲ್ಲೇ ಇದು ಹೊಸ ಪ್ರಯತ್ನವಾಗಿದ್ದು ಐಡಿಯಾ ಕಂಪನಿಯನ್ನು ಸಿನಿಮಾ ಉದ್ಯಮಕ್ಕೆ ಕರೆತಂದ ಕೀರ್ತಿ ರಮೇಶ್ ಗೆ ಸಂದಿದೆ. ಬೆಂಗಳೂರಿನಲ್ಲಿ ನೀವಿದ್ದರೆ ಕಾಫಿ ಡೇ ಮತ್ತು ಮಾಲ್ ಗಳಿಗೆ ಹೋದಾಗ ಬ್ಲೂ ಟೂಥ್ ಆನ್ ಮಾಡಿದರೆ ನಮ್ಮಣ್ಣ ಡಾನ್ ಚಿತ್ರದ ಹಾಡುಗಳು ನಿಮ್ಮ ಮೊಬೈಲ್ ನಲ್ಲಿ ಬಂದು ಕುಳಿತುಬಿಡುತ್ತವೆ.

ಇಂದಿನ ಕಾಲಕ್ಕೆ ತಕ್ಕ ಹೊಸ ಹೊಸ ಐಡಿಯಾ ಮೂಲಕ ಜನರನ್ನು ತಲುಪುವ ರಮೇಶ್ ಐಡಿಯಾ ನಿಜಕ್ಕೂ ಗ್ರೇಟ್. ನಮ್ಮಣ್ಣ ಡಾನ್ ಚಿತ್ರವನ್ನು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಿ ಬೇರೆ ಭಾಷೆಗಳಲ್ಲಿ ಡಬ್ ಮಾಡುವ ಐಡಿಯಾ ಕೂಡ ರಮೇಶ್ ಹೊಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actor Ramesh Aravind released Audio of his movie 'Nammanna Don' in different way, in Mobile. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X