ಮರೆಯಲಾಗದ ಅಪೂರ್ವ ಮಾಣಿಕ್ಯ ಶಂಕರನಾಗ್

<ul id="pagination-digg"><li class="next"><a href="/news/05-actor-shankar-nag-sweet-memory-aid0172.html">Next »</a></li></ul>

Shankar Nag
ಮರೆಯಲಾಗದ ಅಪೂರ್ವ ಮಾಣಿಕ್ಯ ಶಂಕರನಾಗ್ ಬಗ್ಗೆ ಅಭಿಮಾನಿಗಳ ಮಾತು ಹೀಗಿದೆ:

ಸೂರ್ಯ ಅವರು ಬೆಂಗಳೂರಿನಲ್ಲಿ ಆಟೋ ಚಾಲಕ. ಆಟೋದಲ್ಲೇ ಬೆಂಗಳೂರು ಸುತ್ತುವ ಸೂರ್ಯನಿಗೆ ಕನ್ನಡ ಚಿತ್ರರಂಗದ ಆಟೋರಾಜ, ಆಟೋ ಚಾಲಕರ ಪಾಲಿನ ಪರಮ ಗುರು ಶಂಕರನಾಗ್ ಬಗ್ಗೆ ಮಾತನಾಡಿ ಎಂದಾಗ ಸಂತೋಷದಿಂದ ಒಪ್ಪಿದರು. 'ಶಂಕರಣ್ಣ ನಮ್ಮ ಗುರುಗಳು ಸಾರ್.. ಅವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು.." ಎನ್ನುತ್ತಲೇ ಮಾತಿಗೆ ಕುಳಿತರು.

ಕನ್ನಡದ ಕುಲಪುತ್ರ: "ಶಂಕರಣ್ಣ ನಿಜವಾಗಿಯೂ ಕನ್ನಡದ ಕುಲಪುತ್ರ. ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿಯೇ ಅಗಾಧ ಸಾಧನೆ ಮಾಡಿ, ಮರೆಯಾದವರು. ಕನ್ನಡಿಗರಿಗೆ ಮರೆಯಲಾಗದ ಮಾಣಿಕ್ಯ. ಸದಾ ಸಮಾಜಮುಖಿಯಾಗಿದ್ದರು. ಶಂಕರಣ್ಣ ಸಮಾಜಕ್ಕಾಗಿ ಸೇವೆ ಸಲ್ಲಿಸಬೇಕೆಂದು ಯಾವಾಗಲೂ ಯೋಚಿಸುತ್ತಿದ್ದರು.

ಚಿತ್ರರಂಗದಲ್ಲಿ ಸರಳಜೀವಿಯಾಗಿ, ಆದರ್ಶ ಗುಣದ ನಿರ್ದೇಶಕರಾಗಿ, ನಾಯಕ ನಟರೂ ಆದವರು ಅತಿ ವಿರಳ. ಗೋಕಾಕ್ ಚಳುವಳಿಯ ಸಮಯದಲ್ಲಿ ಶಂಕರಣ್ಣ ಭಾಷೆ, ನಾಡಿನ ಬಗ್ಗೆ ತೋರಿದ ಕಾಳಜಿ ಕನ್ನಡಿಗರಿಗೆ ಮಾದರಿಯಾಗಿತ್ತು. ಅಂದಿನ ಶಂಕರನಾಗ್ ದೂರದೃಷ್ಟಿ ಇಂದು ಸಾಕಾರಗೊಳ್ಳುತ್ತಿದೆ.

ಇಂತಿ ನಿಮ್ಮ ಭಾವುಕ ಅಭಿಮಾನಿ ಸೂರ್ಯ (ಆಟೋ ಚಾಲಕ, ಬೆಂಗಳೂರು)

ಇನ್ನೊಬ್ಬ ಅಭಿಮಾನಿಯ ಮಾತುಗಳು ಮುಂದಿನ ಪುಟದಲ್ಲಿ...

ಕೃಪೆ: ಸಿನಿಗಂಧ

<ul id="pagination-digg"><li class="next"><a href="/news/05-actor-shankar-nag-sweet-memory-aid0172.html">Next »</a></li></ul>

More from Filmibeat

English summary
Great actor late Shankar Nag is a auto drivers Role model. One of his fan Surya told like this&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X