»   » ಮದಕರಿ ಸುದೀಪರ ಕಳ್ಳ ಪೊಲೀಸ್ ಆಟ

ಮದಕರಿ ಸುದೀಪರ ಕಳ್ಳ ಪೊಲೀಸ್ ಆಟ

Posted By:
Subscribe to Filmibeat Kannada

ಕಳ್ಳನಾಗಿ ಚಾಣಕ್ಷತನದಿಂದ ಟೆನ್ನಿಸ್‌ಕೃಷ್ಣರೊಂದಿಗೆ ಸೇರಿ ವಸ್ತುಗಳನ್ನು ಅಪಹರಿಸುವ ಮದಕರಿ ಒಂದೆಡೆಯಾದರೆ ಅಂಥಾ ಕಳ್ಳರನ್ನು ಮಟ್ಟಹಾಕುವ ವೀರಮದಕರಿಯೊಬ್ಬನಿದ್ದಾನೆ. ಆತ ನಿಷ್ಠಾವಂತ ಪೊಲೀಸ್ ಅಧಿಕಾರಿ.

ದುಷ್ಟರನ್ನು ಸದೆಬಡೆಯುವಲ್ಲಿ ಸದಾ ಮುಂದಿರುವ ಮದಕರಿ ಹೇಯ ಕೃತ್ಯಗಳಲ್ಲಿ ತೊಡಗಿದ್ದ ಖಳನಟ ಗೋಪಿನಾಥ್‌ಭಟ್ ಅವರನ್ನು ಥಳಿಸುತ್ತಾರೆ. ಇಬ್ಬರ ನಡುವೆ ನಡೆಯುವ ಈ ಬೀಕರ ಕಾಳಗದ ಕೆಲ ತುಣುಕುಗಳನ್ನು ಚಿತ್ರದಲ್ಲಿ ವಿಶೇಷವಾಗಿ ತೋರಿಸಲಾಗಿದೆ ಎಂದು ನಿರ್ಮಾಪಕ ದಿನೇಶ್‌ಗಾಂಧಿ ತಿಳಿಸಿದ್ದಾರೆ. ೩೫೦ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಾಹಸ ನಿರ್ದೇಶನ ನೀಡಿರುವ ಥ್ರಿಲ್ಲರ್‌ಮಂಜು ಈ ಸನ್ನಿವೇಶ ಅದ್ದೂರಿಯಾಗಿ ಮೂಡಿಬರುವಲ್ಲಿ ಅಪಾರ ಶ್ರಮವಹಿಸಿದ್ದಾರೆ.

ದಿನೇಶ್‌ಗಾಂಧಿ ನಿರ್ಮಿಸಿ, ಸುದೀಪ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ವಿಜೇಂದ್ರ ಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಕೆಂಪರಾಜ್ ಸಂಕಲನ, ದಿನೇಶ್‌ಮಂಗಳೂರ್ ಕಲೆ, ಕೆ.ವಿ.ಮಂಜಯ್ಯ ನಿರ್ಮಾಣನಿರ್ವಹಣೆ, ಶ್ರೀವೆಂಕಟ್ ಅವರ ಛಾಯಾಗ್ರಹಣವಿರುವ ಚಿತ್ರದಲ್ಲಿ ಸುದೀಪ್, ರಾಗಿಣಿ, ಪವಿತ್ರ, ದಿನೇಶ್‌ಗಾಂಧಿ, ದೇವರಾಜ್, ಗೋಪಿನಾಥ್‌ಭಟ್, ಮನೋಜ್, ದೊಡ್ಡಣ್ಣ ಟೆನ್ನಿಸ್‌ಕೃಷ್ಣ ಅಭಿನಯಿಸಿದ್ದಾರೆ.
*********
ಅಂಜಲಿ ಬಡಿಸಿದ ರಸಗುಲ್ಲ

'ರಸಗುಲ್ಲ ಎಷ್ಟು ಸವಿಯೋ ಅಷ್ಟೇ ಸವಿ ನೃತ್ಯಗಾರ್ತಿ ಅಂಜಲಿ ಅವರ ನೃತ್ಯ. ಹೌದು. ಗೋವರ್ಧನ್ ಅವರ ಚೊಚ್ಚಲ ನಿರ್ದೇಶನದ ಹಾಗೂ ವಿಶಿಷ್ಟ ಶೀರ್ಷಿಕೆಯ ರಸಗುಲ್ಲ ಚಿತ್ರದ ಹಾಡೊಂದಕ್ಕೆ ಕಳೆದವಾರ ಹೆಜ್ಜೆ ಹಾಕಿದ್ದಾರೆ ಮೋಹಕತಾರೆ ಅಂಜಲಿ.

ಸು.ರುದ್ರಮೂರ್ತಿಶಾಸ್ತ್ರಿ ರಚಿಸಿರುವ "ಚಂಗು ಚಂಗು ಜಿಂಕೆ ಕಂಡು ಮಂಗನಾದನು...ರಂಗ ನೀನು ಸಿಂಗ ನೀನು ಪೆಂಗನಾದನು' ಎಂಬ ಗೀತೆಗೆ ಹೇಮುಸಿಂಹ ನೃತ್ಯ ನಿರ್ದೇಶನದಲ್ಲಿ ಅಂಜಲಿ ನರ್ತಿಸಿದ್ದಾಗ ಅವರೊಂದಿಗೆ ಪಿಯೂಷ್ ಹಾಗೂ ಆನಂದ್ ಸಹ ಇದ್ದರು. ಪಡ್ಡೆ ಹುಡುಗರ ಮನದಲ್ಲೇ ಉಳಿಯುವ ಈ ಗೀತೆಯ ಚಿತ್ರೀಕರಣ ಜಯನಗರದ ವಾಣಿಜ್ಯ ಸಂಕೀರಣದಲ್ಲಿರುವ ತಡಕ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ಸಂಜನಾ ಅವರು ನಿರ್ಮಿಸುತ್ತಿರುವ ರಸಗುಲ್ಲ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸೌಂದರ್‌ರಾಜ್ ಸಂಕಲನ, ದಿವಾಕರ್‌ರಾವ್ ಛಾಯಾಗ್ರಹಣ, ಲೀಲಾಮನೋಹರ್ ನಿರ್ಮಾಣನಿರ್ವಹಣೆ, ರುದ್ರಮೂರ್ತಿ ಶಾಸ್ತ್ರಿ ಅವರ ಗೀತರಚನೆ ಹಾಗೂ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ಪಿಯೂಷ್, ಆನಂದ್, ಕಶೀಷ್‌ರೀಟಾ, ಆರ್ಯ, ಮನೋಜ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada