ಓನ್ಲಿ 120 ಚಿತ್ರಮಂದಿರಗಳಲ್ಲಿ ಸುದೀಪ್ ವಿಷ್ಣುವರ್ಧನ
ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಸುದೀಪ್ ಅಭಿನಯದ 'Only ವಿಷ್ಣುವರ್ಧನ'. ಈ ಚಿತ್ರ ಡಿಸೆಂಬರ್ 8ರಂದು ತೆರೆಗೆ ಅಪ್ಪಳಿಸುತ್ತಿದೆ. ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಅವರು ಈ ಚಿತ್ರದ ಮೇಲೆ 'ಆಪ್ತಮಿತ್ರ' ಚಿತ್ರದಷ್ಟೇ ಭರವಸೆಯನ್ನು ಇಟ್ಟುಕೊಂಡಿದ್ದಾರೆ.
ಈಗಾಗಲೆ ಚಿತ್ರದ ಆಡಿಯೋಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡುಗಳು ಸೂಪರ್ ಹಿಟ್ ಆಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವಿ ಹರಿಕೃಷ್ಣ ಮ್ಯೂಸಿಕ್ ಮ್ಯಾಜಿಕ್ ಈ ಬಾರಿಯೂ ವರ್ಕ್‌ಔಟ್ ಆಗಿದೆ. ಪಿ ಕುಮಾರ್ ನಿರ್ದೇಶನದ ದ್ವಾರಕೀಶ್ ಮಗ ಯೋಗೀಶ್ ನಿರ್ಮಾಣದ ಚಿತ್ರವಿದು.
ಕರ್ನಾಟಕದಾದ್ಯಂತ ಒಟ್ಟು 120 ಚಿತ್ರಮಂದಿರಗಳಲ್ಲಿ 'Only ವಿಷ್ಣುವರ್ಧನ' ಚಿತ್ರ ಬಿಡುಗಡೆಯಾಗುತ್ತಿದೆ. ಯೋಗರಾಜ್ ಭಟ್ ಅವರ 'ಪರಮಾತ್ಮ' ಚಿತ್ರದಷ್ಟೇ ನಿರೀಕ್ಷೆಗಳು ಈ ಚಿತ್ರದ ಮೇಲೂ ಇವೆ. ಪ್ರಿಯಾಮಣಿ, ಭಾವನಾ, ಸೋನು ಸೂದ್, ಅರುಣ್ ಕುಮಾರ್, ಅಚ್ಯುತಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ.
ದ್ವಾರಕೀಶ್ ಹಾಗೂ ಕವಿ ಕಾಳಿದಾಸ್ ಅವರು ಚಿತ್ರದ ಸಂಭಾಷಣೆಯನ್ನು ಹೆಣೆದಿದ್ದಾರೆ. ರಾಜರತ್ನಂ ಅವರ ಛಾಯಾಗ್ರಹಣ, ಗೌತಮ್ ರಾಜ್ ಸಂಕಲನ ಹಾಗೂ ಮೋಹನ್ ಪಂಡಿತ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











